karnataka news today ಅಕ್ರಮ ಸಂಬಂಧಕ್ಕಾಗಿ ಕುಟುಂಬದವರ ಹತ್ಯೆಗೆ ಯತ್ನ: ಹಾಸನದಲ್ಲಿ ಮಹಿಳೆ ಹಾಗೂ ಪ್ರಿಯಕರ ಬಂಧನ
ಹಾಸನ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂದು ಭಾವಿಸಿ ಪತ್ನಿ, ಮಕ್ಕಳು, ಹಾಗೂ ಅತ್ತೆ-ಮಾವನಿಗೆ ಊಟದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ ಮಹಿಳೆಯೊಬ್ಬರನ್ನು ಬೇಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಚೈತ್ರಾ (33) ಎಂದು ಗುರುತಿಸಲಾಗಿದೆ. ಈ ಕೃತ್ಯಕ್ಕೆ ಸಹಕರಿಸಿದ ಆಕೆಯ ಪ್ರಿಯಕರ ಶಿವು ಎಂಬಾತನನ್ನೂ ಸಹ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾಹಿತಿ ನೀಡಿದ್ದಾರೆ.
ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದ ಗಜೇಂದ್ರ ಎಂಬುವರು 11 ವರ್ಷಗಳ ಹಿಂದೆ ಚೈತ್ರಾರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಈ ದಂಪತಿಗಳ ನಡುವೆ ಕಳೆದ ಮೂರು ವರ್ಷಗಳಿಂದ ಚೈತ್ರಾ ಸಣ್ಣಪುಟ್ಟ ವಿಚಾರಗಳಿಗೂ ಜಗಳ ತೆಗೆದು ಗಂಡ ಮತ್ತು ಮಕ್ಕಳಿಗೆ ಬೈಯ್ಯಲು ಪ್ರಾರಂಭಿಸಿದ್ದಳು. ಈ ನಡುವೆ, ಆಕೆಗೆ ಪುನೀತ್ ಎಂಬಾತನ ಪರಿಚಯವಾಗಿ ಆತನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಳು. ಈ ವಿಷಯ ತಿಳಿದ ಗಂಡ ಗಜೇಂದ್ರ ಚೈತ್ರಾಳ ತಂದೆ-ತಾಯಿಗೆ ವಿಷಯ ತಿಳಿಸಿ ರಾಜಿ ಮಾಡಿಸಿದ್ದರು.karnataka news today

ಆದರೆ, 2024ರಿಂದ ಚೈತ್ರಾಳಿಗೆ ಅದೇ ಗ್ರಾಮದ ಶಿವು ಎಂಬಾತನ ಪರಿಚಯವಾಗಿ ಆತನೊಂದಿಗೂ ಅಕ್ರಮ ಸಂಬಂಧ ಬೆಳೆಸಿದ್ದಳು. ತನ್ನ ಸಂಬಂಧಕ್ಕೆ ಗಂಡ, ಮಕ್ಕಳು, ಅತ್ತೆ-ಮಾವ ಅಡ್ಡಿಯಾಗುತ್ತಾರೆಂದು ನಿರ್ಧರಿಸಿದ ಚೈತ್ರಾ, ಅವರನ್ನು ಸಾಯಿಸಲು ಸಂಚು ರೂಪಿಸಿದ್ದಳು. ಈ ಕುಕೃತ್ಯಕ್ಕೆ ಶಿವು ಸಹಕಾರ ಪಡೆದು, ಕುಟುಂಬದವರ ಊಟದಲ್ಲಿ ಮಾತ್ರೆಗಳನ್ನು ಬೆರೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಹೇಗೋ ಈ ವಿಷಯ ತಿಳಿದ ಗಂಡ ಗಜೇಂದ್ರ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಬೇಲೂರು ಠಾಣೆ ಪೊಲೀಸರು ಚೈತ್ರಾ ಮತ್ತು ಶಿವು ಇಬ್ಬರನ್ನೂ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
karnataka news today ಹಾವೇರಿಯಲ್ಲಿ ಬಾಲಕಿ ಮೇಲೆ ಸರಣಿ ಅತ್ಯಾಚಾರ: ಪ್ರಿಯಕರ, ದೊಡ್ಡಪ್ಪನ ಮಗ ಸೇರಿ ಐವರ ವಿರುದ್ಧ ಪ್ರಕರಣ ದಾಖಲು
ಹಾವೇರಿ ಜಿಲ್ಲೆಯ ಠಾಣೆಯೊಂದರ ವ್ಯಾಪ್ತಿಯಲ್ಲಿ ಪ್ರೀತಿಯ ಹೆಸರಿನಲ್ಲಿ ಹದಿನೈದು ವರ್ಷದ ಬಾಲಕಿ ಮೇಲೆ ಪ್ರತ್ಯೇಕವಾಗಿ ಸರಣಿ ಅತ್ಯಾಚಾರ ನಡೆಸಿ, ಆಕೆ ಗರ್ಭಿಣಿಯಾಗಲು ಕಾರಣರಾದ ಮೂವರು ಸೇರಿದಂತೆ ಒಟ್ಟು ಐವರ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಾಗಿದೆ.
ಇಟ್ಟಿಗೆ ಕೆಲಸ ಮಾಡುತ್ತಿದ್ದ ಆರೋಪಿ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ 2024ರ ಡಿಸೆಂಬರ್ 22ರಂದು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರವೂ ಹಲವು ಬಾರಿ ಇದೇ ಕೃತ್ಯವನ್ನು ಪುನರಾವರ್ತಿಸಿದ್ದಾನೆ. ಈ ವಿಚಾರವನ್ನು ತನ್ನ ಸ್ನೇಹಿತಿರಿಬ್ಬರಿಗೆ ಈತ ತಿಳಿಸಿದ್ದ ಅವರಿಬ್ಬರು ಅಪ್ರಾಪ್ತ ಬಾಲಕಿಗೆ ಬ್ಲ್ಯಾಕ್‌ಮೇಲ್ ಮಾಡಿ, ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಬಾಲಕಿ ಗರ್ಭಿಣಿಯಾದ ಬಳಿಕ ಪಾಲಕರಿಗೆ ವಿಷಯ ತಿಳಿದುಬಂದಿದೆ. ಆ ನಂತರ ಕೆಲವರು ರಾಜಿ ಪಂಚಾಯಿತಿ ನಡೆಸಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರು. ಈ ಇಬ್ಬರ ವಿರುದ್ಧವೂ ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಸಂಬಂಧ ನಾಲ್ವರನ್ನ ಬಂಧಿಸಿದ್ದಾರೆ. (ಹೆಸರು ಸೇರಿದಂತೆ ವೈಯಕ್ತಿಕ ವಿವರವನ್ನು ಗೌಪ್ಯವಾಗಿ ಇಡಲಾಗಿದೆ)
Hassan crime, Belur Police, Chaitra arrest, Shivu arrest, illicit affair, family murder attempt, poisoning, Mohammed Sujeetha, police investigation, Gajendra, Keraluru village, domestic crime ,karnataka news today