ಆನೆ ಹುಲಿ ಕಾರ್ಯಾಚರಣೆ ವೇಳೆ ಅಭಿಮನ್ಯು ನಿಭಾಯಿಸುವ ಸವಾಲುಗಳೇನು ಗೊತ್ತಾ..? ಜೆಪಿ ಬರೆಯುತ್ತಾರೆ.

prathapa thirthahalli
Prathapa thirthahalli - content producer
SUNCONTROL_FINAL-scaled

Abhimanyu Elephant  ಈತ ಕಾಡಿನೊಳಗೆ ಎಂಟ್ರಿಕೊಟ್ಟರೆ..ಅದೆಂತ ಗಂಡಾನೆಯ ಗುಂಡಿಗೆಯೂ ಕೂಡ ಸ್ಟನ್ ಆಗಿಬಿಡುತ್ತೆ.ಅದಕ್ಕು ಮೀರಿ ಮುನ್ನುಗ್ಗಿ ಬಂದ್ರೆ..ಈತ ಕೊಡ ಡಿಚ್ಚಿಗೆ ಎದುರಾಳಿ ಪ್ರಜ್ಞೆ ತಪ್ಪಿಹೋಗುತ್ತೆ.ಈತನ ಕಂಡ್ರೆ ಕಾಡಾನೆಗಳ ಹಿಂಡು ಕೂಡ ಬೆನ್ನು ತಿರುಗಿಸಿಬಿಡ್ತಾವೆ.ಕರ್ನಾಟಕ ರಾಜ್ಯದ ಹುಲಿ ಸಾಮ್ರಾಜ್ಯದಲ್ಲಿ,ಈತ ಹೆಜ್ಜೆ ಇಡದ ಸ್ಥಳಗಳಿಲ್ಲ.ಹುಲಿ ಗಣತಿಗೂ ಇವನೇ ಬೇಕು….ಆನೆ ಸೆರೆಹಿಡಿಯೋದಕ್ಕೂ ಇವನೇ ಬರಬೇಕು.ದಟ್ಟಡವಿಯ ಸರಹದ್ದಿನಲ್ಲಿ ಶತ್ರು,ಚಕ್ರವ್ಯೂಹದ ಕೋಟೆಯಲ್ಲಿದ್ದರೂ…..ಅದನ್ನ ಭೇದಿಸಿ ಶತ್ರುವನ್ನು ಸೆರೆಹಿಡಿಯಬಲ್ಲ ಅಭಿಮನ್ಯು ಇವನು.ಈತ ಇದ್ರೆ ಅರಣ್ಯಾಧಿಕಾರಿಗಳಿಗೂ ಧೈರ್ಯ.ಕಾರ್ಯಾಚರಣೆ ಕೂಡ ಯಶಸ್ವಿ.,..ಒಂದು ಆನೆ ಕಾರ್ಯಾಚರಣೆಯಲ್ಲಿ ಅಭಿಮನ್ಯು ಆನೆಯ ಕಾರ್ಯವೈಖರಿ ಹೇಗಿರುತ್ತೆ…ಆನೆ ಸೆರೆಹಿಡಿಯುವ ವಿಧಾನ ಹೇಗೆ..ಇದೆಲ್ಲದರ ಕಂಪ್ಲೀಟ್ ಡಿಟೈಲ್ ಇಲ್ಲಿದೆ,

udhyoga mele

Abhimanyu Elephant ಅಭಿಮನ್ಯು ಇಲ್ಲದೆ ಆನೆ ಕಾರ್ಯಾಚರಣೆ ಅಸಾಧ್ಯ.

ಅಭಿಮನ್ಯು..ಈ ಹೆಸರು ಕೇಳಿದರೆ.ತಕ್ಷಣಕ್ಕೆ ನೆನಪಾಗುವುದು ಚಕ್ರವ್ಯೂಹ ಭೇದಿಸಿದ ಪರಿ.ಹೌದು ಇಂದು ನಾವು ಹೇಳ ಹೊರಟಿರುವ ಸ್ಟೋರಿಯ ನಾಯಕ ಕೂಡ ಅಭಿಮನ್ಯು. ಈತ ಕೂಡ ಚಕ್ರವ್ಯೂಹದಂತ ಕೋಟೆಯಲ್ಲಿ ಅಗ್ಗಾಗ್ಗೆ ನುಗ್ಗಿ ಶತ್ರುಗಳನ್ನು ಸೆರೆಹಿಡಿಯುವ ಅಭಿಮನ್ಯು. ಹೌದು ದೇಶದ ಇತಿಹಾಸದಲ್ಲಿಯೇ ಕೆಚ್ಚೆದೆಯ ಗಂಡು ಎಂದು ಹೆಸರು ಮಾಡಿರುವ ಅಭಿಮನ್ಯು ಬಗ್ಗೆ ಎಷ್ಟು ಹೇಳಿದರೂ ಸಾಲದು. ರಾಜ್ಯದ ಯಾವುದೇ ಭಾಗದಲ್ಲಿ ಪುಂಡಾನೆಗಳನ್ನು ಸೆರೆಹಿಡಿಯಬೇಕೆಂದರೆ ಅಲ್ಲಿ ಅಭಿಮನ್ಯು ಮುಂದಾಳತ್ವ ವಹಿಸಲೇಬೇಕು. ಯಾಕೆಂದರೆ ಅಭಿಮನ್ಯು ಬಿಟ್ಟರೆ ಕಾಡಾನೆಯನ್ನು ಎದರಿಸುವಂತ ಚಾಣಾಕ್ಷತೆ ನಿಪುಣತೆಯುಳ್ಳ ಸಾಕಾನೆ ಮತ್ತೊಂದಿಲ್ಲ. ಅಭಿಮನ್ಯು ಆನೆ ಕಾರ್ಯಾಚರಣೆಗೆ ಹೊರಟ ಅಂದರೆ ಅಲ್ಲಿ ಶತ್ರು ಸೆರೆಯಾದ ಅಂತಾನೆ ಲೆಕ್ಕ.

SUNCONTROL_FINAL-scaled

Abhimanyu Elephant  ಆನೆ ಕಾರ್ಯಾಚರಣೆಯಲ್ಲಿ ಡಾಟಿಂಗ್.

ಯಾವುದೇ ಆನೆಯನ್ನು ಕಾಡಿನಲ್ಲಿ ಸೆರೆಹಿಡಿಯಬೇಕಾದರೆ ಅದಕ್ಕೆ ಟೀಂ ವರ್ಕ್ ಬಹಳ ಮುಖ್ಯ. ಕಾಡಾನೆ ಕಂಡ ತಕ್ಷಣ ಡಾಟಿಂಗ್ ಮಾಡಲು ಆಗುವುದಿಲ್ಲ. ಡಾಟಿಂಗ್ ಬಳಸುವ ಅರವಳಿಕೆ ಚುಚ್ಚುಮದ್ಧು ಆನೆಯನ್ನು ಪ್ರಜ್ಞೆ ತಪ್ಪಿ ಮಲಗಲು ಎಷ್ಟು ಸಮಯ ತೆಗೆದುಕೊಳ್ಳತ್ತದೆ. ಅದು ಆ ಸಂದರ್ಭಯಲ್ಲಿ ಮತ್ತಿನಲ್ಲಿಯೇ ಕಾಡಿನಲ್ಲಿ ಎಷ್ಟು ದೂರ ಕ್ರಮಿಸುತ್ತದೆ. ಅದು ಮತ್ತೇರಿ ಬೀಳುವ ಸ್ಥಳ..ನಂತರ ಕಾರ್ಯಾಚರಣೆಗೆ ತೊಡಕಾಗುತ್ತದೆಯೇ ಅಥವಾ ಅದರಲ್ಲಿ ಯಶಸ್ವಿಯಾಗುತ್ತಾ ಅನ್ನೋದು ಇಲ್ಲಿ ಟೆಕ್ನಿಕಲ್ ಪಾಯಿಂಟ್. ಹೌದು ದಟ್ಟಡವಿಯಲ್ಲಿರುವ ಕಾಡಾನೆ ಕಂಡು ಬಂದಾಗ ಅಲ್ಲಿ ಅಭಿಮನ್ಯು ಮತ್ತು ಇತರೆ ಆರು ಆನೆಗಳ ತಂಡ ಡಾಟಿಂಗ್ ನಂತರ ಕಾರ್ಯಾಚರಣೆಗೆ ಸಜ್ಜುಗೊಂಡಿರುತ್ತದೆ. ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಅಭಿಮನ್ಯು ಆನೆ ಬಿಟ್ಟರೆ ಬೇರೆ ಆನೆಗಳಿಗೆ ಆ ಮಟ್ಟದ ಗಟ್ಟಿತನವಿಲ್ಲ.

Abhimanyu ElephantThe King of Capture Operations
Abhimanyu ElephantThe King of Capture Operations

ಹೀಗಾಗಿಯೇ ಎಲ್ಲೆ ಕಾಡಾನೆಯನ್ನು ಸೆರೆಹಿಡಿಯಬೇಕೆಂದರೂ ಅಭಿಮನ್ಯುವೇ ಕಮಾಂಡೋ ರೀತಿ ಮುಂದಾಳತ್ವ ವಹಿಸುತ್ತದೆ. ಉಳಿದ ಆನೆಗಳು ಅಭಿಮನ್ಯುವಿನ ಆಜ್ಞೆಯಂತೆ ಆದೇಶ ಪಾಲನೆ ಮಾಡುತ್ತಾ..ಕಾರ್ಯಾಚರಣೆಗೆ ಸಹಕಿಸುತ್ತವೆ.

Abhimanyu Elephant  ಡಾಟಿಂಗ್ ಪ್ರಕ್ರೀಯೆ.

ಕಾಡಾನೆಯನ್ನು ಸೆರೆಹಿಡಿಯಲು ಡಾಟಿಂಗ್ ಮಾಡುವುದು ಪ್ರಮುಖ ಪ್ರಕ್ರೀಯೆಯಾಗಿದೆ. ಬಂದೂಕಿನ ಮೂಲಕ ಅರವಳಿಕೆ ಮದ್ದನ್ನು ಕಾಡಾನೆಯ ದೇಹಕ್ಕೆ ಪ್ರಯೋಗಿಸುವುದು ಡಾಟಿಂಗ್ ಆಗಿದೆ. ಈ ಡಾಟಿಂಗ್ ಪ್ರಕ್ರೀಯೆಗೆ ಕೆಲ ವರ್ಷಗಳ ಹಿಂದೆ ಕ್ಜೈಲೋಜಿನ್ ಹೈಡ್ರೋ ಕ್ಲೋರೈಡ್(Xylozine hydro chloride) ಹಾಗು ಕೆಟಾಮೈನ್ ಹೈಡ್ರೋ ಕ್ಲೋರೈಡ್(Catamine hydrochloride) ಎಂಬ  ಅರವಳಿಕೆ ಮದ್ದನ್ನು ಪ್ರಯೋಗಿಸಲಾಗುತ್ತಿತ್ತು. ಈಗ ಆನೆಯನ್ನು ಕ್ಷಣಾರ್ದದಲ್ಲಿ ಪ್ರಜ್ಞೆ ತಪ್ಪಿಸುವ ಎಟರೋಪಿನ್ ಹೈಡ್ರೊಕ್ಲೊರೈಡ್ ಎಂಬು ನಾರ್ಕೋಟಿಕ್ ಡ್ರಗ್ ಲಭ್ಯವಿದೆ.ಆದ್ರೆ ಕೆಲ ವರ್ಷದಿಂದ  ಕ್ಜೈಲೋಜಿನ್ ಹೈಡ್ರೋ ಕ್ಲೋರೈಡ್ ಮದ್ದನ್ನೇ ಆನೆಯ ಮೇಲೆ ಪ್ರಯೋಗಿಸಲಾಗುತ್ತಿತ್ತು. ಒಂದವರೆಯಿಂದ ಎರಡು ಎಂಎಲ್ ಕ್ಜೈಲೋಜಿನ್ ಹೈಡ್ರೋ ಕ್ಲೋರೈಡ್ ಡೋಸೇಜ್  ಅರವಳಿಕೆ ಮದ್ದನ್ನು, ಬಂದೂಕಿನ ಮೂಲಕ ಆನೆಗೆ ಪ್ರಯೋಗಿಸಿದಾಗ ,ಆನೆ ಪ್ರಜ್ಞೆ ತಪ್ಪಲು ಸುಮಾರು 45 ನಿಮಿಷವಾದರೂ ಬೇಕಾಗುತ್ತದೆ.ಆ 45 ನಿಮಿಷ ಅದು ಮತ್ತಿನಲ್ಲಿಯೇ ದಿಕ್ಕುಕಾಣದೆ ಓಡಲು ಪ್ರಯತ್ನಿಸುತ್ತದೆ. 45 ನಿಮಿಷದಲ್ಲಿ ಅದು 3 ರಿಂದ ನಾಲ್ಕು ಕಿಲೋಮೀಟರ್ ದೂರವನ್ನಾದರೂ ಕ್ರಮಿಸಿ,ನಂತರ ಪ್ರಜ್ಞೆತಪ್ಪಿ ಬೀಳುತ್ತೆ. ಆನೆ ಪ್ರಜ್ಞೆ ತಪ್ಪಿ ಬಿದ್ದ ಸ್ಥಳವೂ ಅತ್ಯಂತ ಪ್ರಮುಖವಾಗುತ್ತೆ.ಆನೆ ಎಲ್ಲೋ ಕಾಡಿನ ಮೂಲೆಯಲ್ಲಿ ಬಿದ್ರೆ ಪ್ರಯೋಜನವಿಲ್ಲ.

Abhimanyu Elephant  ಟ್ರಾನ್ಸ್ ಪೋರ್ಟ್ ದೊಡ್ಡ ಸಮಸ್ಯೆ.

ಕಾಡಿನಲ್ಲಿ ಸೆರೆಸಿಕ್ಕ ಆನೆಯನ್ನು ಲಾರಿಯಲ್ಲಿ ಸಾಗಿಸುವುದು ಸವಾಲಿನ ಕೆಲಸ. ಸಾರಿಗೆ ವ್ಯವಸ್ಥೆಯನ್ನು ನೋಡಿಕೊಂಡಿಯೇ ಕಾಡಾನೆಯನ್ನು ಸೆರೆಹಿಡಿಯಬೇಕಾಗುತ್ತದೆ.ಏಕೆದಂರೆ ಮತ್ತಿನಿಂದ ಮೇಲೆದ್ದ ಕಾಡಾನೆಯನ್ನು ತಕ್ಷಣ ನಿಗದಿತ ಸ್ಥಳಕ್ಕೆ ಸ್ಥಳಾಂತರಿಸಿ,ಚಿಕಿತ್ಸಾ ಪ್ರಕ್ರೀಯೆ ಮುಂದುವರೆಸಬೇಕಾಗುತ್ತದೆ. ಇಲ್ಲವಾದಲ್ಲಿ ಸೆರೆಸಿಕ್ಕ ಆನೆ ಸಾವಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು.ಹೀಗಾಗಿ ಕಾಡಾನೆಯನ್ನು ಸೆರೆಹಿಡಿಯಲು ಅದು ಬೀಡುಬಿಟ್ಟಿರುವ ಜಾಗದಲ್ಲಿ  ಸಾರಿಗೆ ವ್ಯವಸ್ಥೆ ಇದೆಯಾ ಎಂದು ನೋಡಿಕೊಳ್ಳಲಾಗುತ್ತದೆ. ಇಲ್ಲವಾದಲ್ಲಿ ಸನಿಹದಲ್ಲಿ ಎಲ್ಲಾದರೂ ಜಾಗವನ್ನು ಅರಣ್ಯಾಧಿಕಾರಿಗಳು ಗೊತ್ತುಮಾಡಿ..ಕಾಡಾನೆಯನ್ನು ಆಕರ್ಷಿಸಲು ಬಿಡಾರದ ಹೆಣ್ಣಾನೆಗಳನ್ನು  ಕಟ್ಟಿರುತ್ತಾರೆ. ಕಾಡಾನೆ ಸನಿಹಕ್ಕೆ ಬಂದಾಗ ಡಾಟ್ ಮಾಡುತ್ತಾರೆ.

ಇನ್ನು ಸೆರೆಸಿಕ್ಕ ಕಾಡಾನೆಯನ್ನು ಸಾಗಿಸುವಾಗ ಎಚ್ಚರ ತಪ್ಪುವಂತಿಲ್ಲ.ಅಭಿಮನ್ಯು ಮಾವುತ ವಸಂತ ಇದರಲ್ಲಿ ಪಳಗಿರುವ ಹುಲಿ. ಆತ ಸೆರೆಸಿಕ್ಕ ಕಾಡಾನೆಯನ್ನು ಸಾಗಿಸುವಲ್ಲಿ ನಿಷ್ಣಾತ. ಕಾಡಾನೆಯನ್ನು ಲಾರಿಗೆ ತಳ್ಳುವುದೇ ದೊಡ್ಡ ಸವಾಲು. ಹಿಮ್ಮುಖವಾಗಿ ಕಾಡಾನೆಯನ್ನು ಲಾರಿಯ ಒಳಗೆ ಕಳುಹಿಸಬೇಕು. ಈ ಸಂದರ್ಭದಲ್ಲಿ ಅಭಿಮನ್ಯು ನೇರವಾಗಿಯೇ ಎದುರಾಳಿಯನ್ನು ಮುನ್ನುಗ್ಗಿಸುತ್ತದೆ. ಟೀಂ ನಲ್ಲಿರುವ ಗೋಪಾಲಸ್ವಾಮಿ,ವಿಕ್ರಂ, ಕೃಷ್ಣ,ಭೀಮಾ ಗೀತಾ ಇತರೆ ಸಾಕಾನೆಗಳು ಕಾಡಾನೆಯ ಅಕ್ಕಪಕ್ಕ ನಿಂತು ಅಭಿಮನ್ಯುಗೆ ನೆರವಾಗಿ, ಲಾರಿಯ ಒಳಗೆ ತಳ್ಳುತ್ತವೆ.ಈ ದೃಷ್ಯ ನೋಡಲು ಮನಕಲುಕುವಂತಿದ್ದರೂ,,,ಕಾಡಾನೆ ಸೆರೆಗೆ ಬೇರೆ ಮಾರ್ಗಗಳಿಲ್ಲ.

Abhimanyu Elephant  ಆನೆ ಸೆರೆಹಿಡಿಯಲು ಬಂದಿದೆ ಹೊಸ ಅರವಳಿಕೆ ಮದ್ದು,ಎರಡು ಎಂಲ್ ಗೆ ಕ್ಷಣಾರ್ದದಲ್ಲಿ ಪ್ರಜ್ಞೆ ತಪ್ಪಿಸುತ್ತದೆ ಈ ವಂಡರ್ ಡ್ರಗ್.

ಈ ಹಿಂದೆ ಹಾಸನ ಮತ್ತು ಉಬ್ರಾಣಿಯಲ್ಲಿ ಕಾಡಾನೆಗಳನ್ನು ಸೆರೆಹಿಡಿಯಲು ಕ್ಲೈಲಮಿನ್ ಹೈಡ್ರೋಕ್ಲೋರೈಡ್ ಅರವಳಿಕೆ ಮದ್ದನ್ನು ನೀಡಲಾಗುತ್ತಿತ್ತು.ಆದರೆ ಈಗ ಆನೆಗಳನ್ನು ಸೆರೆಹಿಡಿಯಲು ಅತ್ಯಾಧುನಿಕ ನಾರ್ಕೋಟಿಕ್ ಅರವಳಿಕೆ ಮದ್ದು ಲಭ್ಯವಾಗಿದೆ.ಎಟರೋಪಿನ್ ಹೈಡ್ರೋಕ್ಲೋರೈಡ್(Etorophine HCL) ಅನ್ನೋ ಅರವಳಿಕೆ ಮದ್ದನ್ನು ಕೇಂದ್ರ ಅರಣ್ಯ ಇಲಾಖೆ ಆಪ್ರಿಕಾ ದೇಶದಿಂದ ಆಮದು ಮಾಡಿಕೊಂಡಿದೆ.ಕೇಂದ್ರ ಸರ್ಕಾರದ ಪರವಾನಿಗೆ ಮೇರೆಗೆ ಈ ಔಷಧಿ ಕೇವಲ ಅರಣ್ಯ ಇಲಾಖೆಗೆ ಲಭ್ಯವಾಗಿದೆ. ಎಟರೋಪಿನ್ ಅರವಳಿಕೆಯ ಒಂದುವರೆಯಿಂದ ಎರಡು ಎಂಎಲ್ ಔಷಧಿಯನ್ನು  ಕಾರ್ಯಚಾರಣೆಯ ಗುರಿ ಹೊಂದಿರುವ ಆನೆಯ ದೇಹದ ಮೇಲೆ ಡಾಟ್ ಮಾಡಿದರೆ ಆನೆ ಕೇವಲ ಎರಡರಿಂದ ಮೂರು ನಿಮಿಷದಲ್ಲಿ ಪ್ರಜ್ಞೆ ತಪ್ಪುತ್ತದೆ. ಈ ಸಂದರ್ಭದಲ್ಲಿ ಆನೆ ಮತ್ತಿನಲ್ಲಿ ನೂರು ಮೀಟರ್ ದಾಟುವುದು ಕೂಟ ಕಷ್ಟಸಾಧ್ಯವಾಗುತ್ತದೆ.ನಂತರ ಆನೆಯನ್ನು ಹಗ್ಗಕಟ್ಟಿ ಬಂಧಿಸಿ ಕರೆತರಬಹುದು.ಈ ಹಿಂದಿನ ಔಷಧಿಗಳನ್ನು ಹೋಲಿಸಿದರೆ ನೂರು ಪಟ್ಟು ಸ್ಟ್ರಾಂಗ್ ಈ ಎಟರೋಪಿನ್ ಹೈಡ್ರೋಕ್ಲೊರೈಡ್.ಇದನ್ನು ವಂಡರ್ ಡ್ರಗ್ ಎಂದು ಕರೆಯುತ್ತಾರೆ.

ಎಟರೋಪಿನ್ ಹೈಡ್ರೊಕ್ಲೊರೈಡ್ ಎಂಬುದು ನಾರ್ಕೋಟಿಕ್ ಡ್ರಗ್ ಸಾಲಿಗೆ ಸೇರಿದ ಔಷಧಿ.ಕೇವಲ ಎರಡು ಎಂಎಲ್ ನಷ್ಟು ಮದ್ದು ಒಂದು ಆನೆಯನ್ನು ಪ್ರಜ್ಞಾವಸ್ಥೆಗೆ ತಳ್ಳುತ್ತದೆ ಎಂದರೆ ಅದು ಎಷ್ಟು ಪರಿಣಾಮಕಾರಿ ಎಂಬುದು ಅರ್ಥವಾಗುತ್ತದೆ. ಹೀಗಾಗಿ ಈ ಅರವಳಿಕೆಯನ್ನು ಕಾರ್ಯಾಚರಣೆಯ ಸಂದರ್ಭದಲ್ಲಿ ಮಾತ್ರ ಉಪಯೋಗಿಸಲಾಗುತ್ತದೆ. ಐದು ಎಂಎಲ್ ವೈಯಲ್ ಗೆ ಒಂದು ಲಕ್ಷಕ್ಕೂ ಅಧಿಕ ಬೆಲೆಯಿರುವ ಈ ಅರವಳಿಕೆ ಮದ್ದಿನಲ್ಲಿ ಒಂದು ಎಂಎಲ್ ದುರುಪಯೋಗ ಪಡಿಸಿಕೊಂಡರೂ..ಅದನ್ನು ಬೇರೆ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾದ ಸಾದ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ವನ್ಯಜೀವಿ ವೈದ್ಯರು ಡಾಟ್ ಮಾಡುವಾಗ ಇದನ್ನು ಸೂಕ್ಷ್ಮವಾಗಿ ಪ್ರಯೋಗಿಸುತ್ತಾರೆ. ಇದರ ಒಂದು ಹನಿ ದೇಹದ ಮೇಲೆ ಬಿದ್ದರೂ..ಅದರ ಪರಿಣಾಮ ಊಹಿಸಿಕೊಳ್ಳಲು ಸಾಧ್ಯವಿಲ್ಲ.ಕ ಣ್ಣು ಶಾಶ್ವತವಾಗಿ ಕುರುಡಾಗುವ ಸಾಧ್ಯತೆಗಳಿವೆ. ಆನೆಯ ದೇಹದ ತೂಕವನ್ನು ಅಂದಾಜಿಸಿ, ಇದನ್ನು ಪ್ರಯೋಗಿಸಲಾಗುತ್ತದೆ. ಇಂತಹ ಔಷಧಿಯನ್ನು ದಟ್ಟ ಕಾಡಿನಲ್ಲಿ ಡಾಟ್ ಮಾಡುವಾಗ ಪ್ರಯೋಗಿಸಿದರೆ..ಆನೆಯನ್ನು ಸುಲಭವಾಗಿ ಸನಿಹದಲ್ಲಿಯೇ ಸೆರೆಹಿಡಿಯಬದಾಗಿದ್ದು, ಸದ್ಯಕ್ಕೆ ಇದರಿಂದ ಯಾವುದೇ ಪ್ರಾಣಹಾನಿಯಿಲ್ಲ.

Abhimanyu Elephant  ಕಾಡಾನೆಯು ಡಾಟಿಂಗ್ ನಿಂದ ಪ್ರಜ್ಞೆ ತಪ್ಪಿದ ತಕ್ಷಣ ಕಾರ್ಯಾಚರಣೆಗೆ ಸಜ್ಜಾಗಬೇಕು ಸಿಬ್ಬಂದಿಗಳು.

ಹೌದು ಪ್ರಜ್ಞೆ ಕಳೆದುಕೊಂಡ ಕಾಡಾನೆಯ ಮತ್ತು ಇಳಿಯುವುದರೊಳಗೆ ಅದು ಸೆರೆಯಾಗಬೇಕು. ಇದು ಮಾವುತ ಕಾವಾಡಿಗಳಿಗೆ ದೊಡ್ಡ ಸವಾಲಿನ ಕೆಲಸ. ಆನೆ ಬಿದ್ದ ತಕ್ಷಣ ಅದರ ಹೊಟ್ಟೆ ಕೈ ಕಾಲುಗಳಿಗೆ ದಪ್ಪನೆಯ ಹಗ್ಗವನ್ನು ಮಾವುತರು ಕಾವಾಡಿಗಳು ಬಿಗಿಯುತ್ತಾರೆ. ಅಭಿಮನ್ಯು ಕುತ್ತಿಗೆಗೆ ಕಾಡಾನೆಯನ್ನು ಎಳೆದುಕೊಂಡು ಲಾರಿಯಲ್ಲಿ ಹಾಕುವ ಬಹುದೊಡ್ಡ ಜವಬ್ದಾರಿಯನ್ನು ಹೊತ್ತಿರುತ್ತೆ. 

ಅಭಿಮನ್ಯು ನಿಯಂತ್ರಿಸುವ ಮಾವುತ ವಸಂತ ಈ ಕೆಲಸದಲ್ಲಿ ಎತ್ತಿದ ಕೈ.ಆತ ಅಭಿಮನ್ಯುವಿನ ಸಾರಥಿಯಾಗಿ ಕಾಡಾನೆಯನ್ನು ಎಳೆದುಕೊಂಡು ಬರುವ ಜವಬ್ದಾರಿ ನಿಭಾಯಿಸುತ್ತಾನೆ. ಸೆರೆಸಿಕ್ಕ ಕಾಡಾನೆಯ ವೈದ್ಯಕೀಯ ಪರೀಕ್ಷೆಗಳು ಈ ಸಂದರ್ಭದಲ್ಲಿ ನಡೆಯುತ್ತದೆ.ಅರವಳಿಕೆ ನೀಡಿದ ನಂತರ ಕಾಡಾನೆಯ ಉಷ್ಣತೆ,ಉಸಿರಾಟ,ಹೃದಯ ಬಡಿತ ಪರೀಕ್ಷೆ ಮಾಡುತ್ತಾರೆ. ಅದು ಎಚ್ಚರಗೊಳ್ಳಲು ಬೇಕಾದ ಎಲ್ಲಾ ಪ್ರಕ್ರೀಯೆಗಳನ್ನು ಪೂರ್ಣಗೊಳಿಸುತ್ತಾರೆ. ಇದೇ ಸಂದರ್ಭದಲ್ಲಿ ಮಾವುತರು ಕಾವಾಡಿಗಳು ಹಗ್ಗ ಸರಪಳಿಯನ್ನು ಬಿಗಿದಿರುತ್ತಾರೆ.ಈ ಎಲ್ಲಾ ಪ್ರಕ್ರೆಯಗಳು ಕೇವಲ 40 ನಿಮಿಷದ ಒಳಗೆ ಪೂರ್ಣಗೊಳ್ಳಬೇಕು.ಕಾಡಾನೆಯನ್ನು ಸೆರೆ ಹಿಡಿದು ಸಾಗಿಸುವ ಕಾರ್ಯಕ್ಕೆ ಎಲ್ಲರೂ ಗ್ರೀನ್ ಸಿಗ್ನಲ್ ನೀಡಿದ ನಂತರ ವನ್ಯಜೀವಿ ವೈದ್ಯರು ಕಾಡಾನೆಯ ರಕ್ತನಾಳಕ್ಕೆ ಆಂಟಿಡಾಟ್(Antidote) ಇಂಜೆಕ್ಷನ್ ನೀಡುತ್ತಾರೆ. ಕ್ಷಣಾರ್ದದಲ್ಲಿ ಆನೆ ಮತ್ತೆ ಎಚ್ಚೆತ್ತುಕೊಳ್ಳುತ್ತದೆ.ಈ ಸಂದರ್ಭದಲ್ಲಿ ಕಾರ್ಯಾಚರಣೆಯ ಮುಂದಾಳತ್ವ ವಹಿಸುವ ಅಭಿಮನ್ಯು ಕಾಡಾನೆಯನ್ನು ಎಳೆದುಕೊಂಡು ಲಾರಿಯತ್ತ ಸಾಗುತ್ತದೆ. ಉಳಿದ ಆನೆಗಳು ಕಾಡಾನೆಯ ಸುತ್ತಮುತ್ತ ಹಿಂಬದಿಯಲ್ಲಿ ಅದನ್ನು ನೂಕುತ್ತಾ ಮುಂದೆ ಸಾಗುತ್ತದೆ.

Abhimanyu ElephantThe King of Capture Operations
Abhimanyu ElephantThe King of Capture Operations

ಖೆಡ್ಡಾ ಕಟ್ಟುವುದಲ್ಲಿ ನಿಸ್ಸೀಮ ಅಭಿಮನ್ಯು.

ಅಭಿಮನ್ಯೂ 1977 ಕೊಡಗಿನ ಹೆಬ್ಬಳದಲ್ಲಿ ಸೇರೆ ಹಿಡಿಯಲಾದ ದೈತ್ಯ ಆನೆ. ಆಗ ಸರ್ಕಾರದ ಟಿಂಬರ್ ಗಳ ಸಾಗಾಣಿಕೆಗೆ ಕಾಡಾನೆಗಳನ್ನು ಹಿಡಿದು ಪಳಗಸಿ ತರಬೇತಿ ನೀಡಲಾಗುತ್ತಿತ್ತು. ಆಗ ಸೆರೆ ಸಿಕ್ಕ ಅಭಿಮನ್ಯುವನ್ನು ಹಾಲಿ ಮಾವುತ ವಸಂತ್ ನ ತಂದೆ ಸಣ್ಣಪ್ಪರವರು ಕಠಿಣ ತರಬೇತಿಯನ್ನು ನೀಡಿದ್ದಾರೆ. ಬಾಲ್ಯದಲ್ಲಿಯೇ ತಂದೆಯ ಜೊತೆ ಅಭಿಮನ್ಯು ಸಖ್ಯ ಬೆಳೆಸಿದ ವಸಂತ್ ಓದಿನತ್ತ ಮುಖ ಮಾಡಲೇ ಇಲ್ಲ. ತಂದೆಗೆ ಸಹಾಯಕನಾಗಿ ಅಭಿಮನ್ಯು ಪ್ರೀತಿ ವಿಶ್ವಾಸವನ್ನು ಗಳಿಸಿದ. ಅಭಿಮನ್ಯುವನ್ನು ಅತಿಯಾಗಿ ಹಚ್ಚಿಕೊಂಡಿರುವ ವಸಂತ ಮಗನಿಗಿಂತ ಹೆಚ್ಚಿನ ಪ್ರೀತಿಯನ್ನೇ ಧಾರೆ ಎರೆದಿದ್ದಾನೆ. ತಂದೆಯ ನಿವೃತ್ತಿ ನಂತರ ಕಾವಾಡಿಯಾಗಿದ್ದ,ವಸಂತ ಮಾವುತನಾಗಿ ಸ್ವತಂತ್ರವಾಗಿ ಅಭಿಮನ್ಯು ರೈಡ್ ಮಾಡಲು ಪ್ರಾರಂಭಿಸಿದ. ವಸಂತ ಎಲ್ಲೇ ಇದ್ದರೂ..ಅಭಿಮನ್ಯು ಆತನನ್ನು ಕಾವಲುಗಾರನಂತೆ ಕಾಯುತ್ತಾನೆ..ವಸಂತ ಮಲಗಿದ್ದರೆ..ಅಭಿಮನ್ಯೂ ಕೂಡ ಪಕ್ಕದಲ್ಲೇ ಬಂದು ಮಲಗುತ್ತಾನೆ. ಆದರೆ ಉಳಿದವರನ್ನು ಅದು ಹತ್ತಿರ ಕೂಡ ಬಿಟ್ಟುಕೊಳ್ಳುವುದಿಲ್ಲ ಎಂದು ವಸಂತ ಹೇಳುವಾಗ ಇವರಿಬ್ಬರ ನಡುವಿನ ಪ್ರೀತಿ ಭಾಂದವ್ಯ ಎಷ್ಟು ಗಟ್ಟಿಯಾಗಿದೆ ಎಂಬುದು ಅರಿವಾಗುತ್ತದೆ.

ಮತ್ತಿಗೋಡು ಆನೆ ಕ್ಯಾಂಪ್ ಕರ್ತವ್ಯ ನಿರ್ವಹಿಸುತ್ತಿರುವ ವಸಂತ ತನ್ನ ಆನೆ ಲಾಲನೆ ಪಾಲನೆ ಮಾಡುತ್ತಾ ಬಂದಿದ್ದಾನೆ. ಅಭಿಮನ್ಯು..ವಸಂತ ಇಲ್ಲದಿದ್ದರೇ ಘೀಳಿಡುವುದು ಸಹಜ. ಅಭಿಮನ್ಯು ಕಾಡಿಗೆ ಹೋದಲೂ ವಸಂತನ ಮನೆ ಮುಂದೆ ನಿಂತು ಆಹಾರವನ್ನು ಸೇವಿಸಿ ಸಾಗುತ್ತದೆ.

Abhimanyu Elephant  ವಿಶೇಷ ತರಬೇತಿ.

ಸಾಮಾನ್ಯವಾಗಿ ಕಾಡಾನೆಗಳನ್ನು ಪಳಗಿಸಿದ ಸಂದರ್ಭದಲ್ಲಿ ಅವುಗಳಿಗೆ ಮಾತಿನ ಮೂಲಕ ಹಾಗು ಅಂಕುಶದ ತಿವಿತದ ಸನ್ನೆಯಿಂದ ತರಬೇತಿ ನೀಡಲಾಗುತ್ತದೆ. ಆದರೆ ಅಭಿಮನ್ಯು ಆನೆಗೆ ಮಾತಿನಲ್ಲಿ ತರಬೇತಿ ನೀಡಿಲ್ಲ. ಅಭಿಮನ್ಯುವನ್ನು ಕೇವಲ ಕಾಲಿನಿಂದಲೇ ತರಬೇತಿ ನೀಡಲಾಗಿದೆ. ಮಾವುತ ಕಾಲಿನಿಂದ ಅಭಿಮನ್ಯು ಎಡ ಮತ್ತು ಬಲ ಕಿವಿಗೆ ಸ್ಪರ್ಷಿಸುವ ಕಲೆಯಿಂದಲೇ ಅಭಿಮನ್ಯು ಮಾವುತನ ಆಜ್ಞೆ ಪಾಲಿಸುತ್ತದೆ. ದೇಶದ ಇತಿಹಾಸದಲ್ಲಿಯೇ ಇದೊಂದು ವಿಶೇಷ ತರಬೇತಿ ಎಂದರೂ ತಪ್ಪಾಗಲಾರದು. ಈ ರೀತಿಯ ತರಬೇತಿ ಹುಲಿ ಮತ್ತು ಆನೆ ಕಾರ್ಯಾಚರಣೆಯಲ್ಲಿ ಮಾವುತನಿಗೆ ಸಹಕಾರಿಯಾಗುತ್ತದೆ.

Abhimanyu Elephant ಕಾಡಿನಲ್ಲಿ ಶಬ್ದ ಮಾಡಿದರೆ ಹುಲಿ ಇಲ್ಲವೇ ಆನೆ ಮಾವುತನ ಮೇಲೆ ದಾಳಿ ಸಾಧ್ಯತೆ.

ಅಭಿಮನ್ಯುವಿನ ವಿಶೇಷ ತರಬೇತಿಯೇ ಇಂದು ದೇಶದಲ್ಲಿ ಹೆಚ್ಚು ಖ್ಯಾತಿ ಗಳಿಸಿದಲು ಸಾಧ್ಯವಾಗಿದೆ. ಸುಮಾರು 100 ಕ್ಕೂ ಅಧಿಕಾ ಕಾಡಾನೆಗಳನ್ನು ಯಶಸ್ವಿಯಾಗಿ ಸೆರೆಹಿಡಿದ್ದಾನೆ ಅಭಿಮನ್ಯು.ಕಾಡಿನಲ್ಲಿ ಮಾವುತ ಶಬ್ದ ಮಾಡುತ್ತಾ…ಆನೆಗೆ ಕಮಾಂಡಿಗ್ ಮಾಡಿದರೆ…ಎದುರಾಳಿ ಹುಲಿಗಾಗಲಿ ಅಥವಾ ಕಾಡಾನೆಗಾಲಿ…ದಾಳಿಕೋರ ಆನೆಯ ಮೇಲೆ ಮನುಷ್ಯ ಇರುವುದು ಗೊತ್ತಾದರೆ…ಅವು ದಾಳಿ ಮಾಡುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ಶಬ್ದ ಮಾಡದೇ..ಕೇವಲ ಕಾಲಿನಿಂದಲೇ ಅಭಿಮನ್ಯುವನ್ನು ವಸಂತ ನಿಯಂತ್ರಿಸುತ್ತಾನೆ.. ಈ ಕಲೆ ನೋಡುವುದೇ ಒಂದು ಸೊಗಸು..ವೇಗವಾಗಿ ಬಂದು..ದುಪ್ಪನೆ ನಿಲ್ಲುವುದು..ಸೈಲೆಂಟಾಗಿದ್ದು ಕೊಂಡೇ ಧಿಡೀರ್ ದಾಳಿ ಮಾಡುವುದು ಅಭಿಮನ್ಯು ವಿಶೇಷತೆಗಳಲ್ಲಿ ಒಂದು. ಕಾಡಾನೆ ಎರಗಿ ಬಂದರೂ..ತಕ್ಷಣ ಎಡ ಮತ್ತು ಬಲಕ್ಕೆ ಸರಿದು ಎದುರಾಳಿಯಿಂದ ತಪ್ಪಿಸಿಕೊಳ್ಳುವುದು ಅಭಿಮನ್ಯು ಹುಟ್ಟುಗುಣ. ತನ್ನನ್ನು ಲಾಲನೆ ಪಾಲನೆ ಮಾಡುವ ವಸಂತನನ್ನು ಹಲವು ಕಾರ್ಯಾಚರಣೆಗಳಲ್ಲಿ ಅಭಿಮನ್ಯು ಬದುಕುಳಿಸಿದ್ದಾನೆ. ಕಾಡಾನೆ ದಾಳಿ ಸಂದರ್ಭದಲ್ಲಿ ಪ್ರಾಣವನ್ನು ಪಣಕ್ಕಿಟ್ಟು.ಆನೆಯಿಂದ ಬೀಳುವ ಸಂದರ್ಭದಲ್ಲೂ ವಸಂತ್ ಎದೆಗುಂದದೆ..ಇಲ್ಲಿಯವರೆಗೂ ನೂರಕ್ಕು ಹೆಚ್ಚು ಆನೆ ಸೆರೆ ಹಿಡಿದ್ದಾನೆ. ಏಳಕ್ಕೂ ಅಧಿಕ ಹುಲಿಗಳನ್ನು ಕಾರ್ಯಾಚರಣೆ ವೇಳೆ ಪತ್ತೆ ಹಚ್ಚಿದ್ದಾನೆ. ಹುಲಿ ಕಾರ್ಯಾಚರಣೆ ವೇಳೆ ಹುಲಿ ಘರ್ಜಿಸಿದರೆ.ಅದರ ವಾಸನೆ ಬಂದರೆ .ಆನೆಗಳು ಹೆದರುತ್ತವೆ,,,ಆದರೆ ಅಭಿಮನ್ಯು ಹೆದುರುವುದಿಲ್ಲ.

Abhimanyu Elephant  ಗುಡ್ ಕ್ರಾಲ್ ಮೇಕರ್ ಅಭಿಮನ್ಯು

ಅಭಿಮನ್ಯು ಆನೆಗಳಿಗೆ ಕ್ರಾಲ್ ಕಟ್ಟುವಲ್ಲೂ ಕೂಡ ನಿಷ್ಣಾತನಾಗಿದ್ದಾನೆ.ಕ್ಷಣಾರ್ದದಲ್ಲಿ ಮರದ ದಿಮ್ಮೆಗಳನ್ನು ದಂತದಲ್ಲಿ ಸಿಕ್ಕಿಸಿಕೊಂಡು ಮರದ ಮೇಲೆ ಮರದ ದಿಮ್ಮೆ ಹಾಕುತ್ತಾ..ಜೇಡರ ಬಲೆ ಹೆಣೆದಂತೆ ಕ್ರಾಲ್ ನಿರ್ಮಿಸುತ್ತಾನೆ.ಕಾಡಾನೆಯನ್ನು ಸುಲಲಿತವಾಗಿ ಲಾರಿಯಿಂದ ಇಳಿಸಿ ಕ್ರಾಲ್ ಗೆ ತಳ್ಳುವುದು ಕೂಡ ಅಭಿಮನ್ಯು ಜಾಣ್ಮೆಗೆ ಹಿಡಿದ ಕೈ ಗನ್ನಡಿಯಾಗಿದೆ.ದೇಶದ ವಿವಿಧೆಡೆ ಅಂದರೆ ಮಹರಾಷ್ಟ್ರ ಮದ್ಯ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆನೆ ಮತ್ತು ಹುಲಿ ಕಾರ್ಯಾಚರಣೆಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಅಭಿಮನ್ಯುವಿಗಿದೆ.

ಆಭಿಮನ್ಯು ರೀತಿಯಲ್ಲಿ ಇನ್ನು ರಾಜ್ಯದಲ್ಲಿ ಆನೆಗಳನ್ನು ಪಳಗಿಸಬೇಕಿದೆ.ವಸಂತ್ ಮನದಾಳದ ಮಾತು.

ಕೇವಲ ಕಾರ್ಯಾಚರಣೆ ಸಂದರ್ಭದಲ್ಲಿ ಅಭಿಮನ್ಯು ಮೇಲೆ ಮಾತ್ರ ಅವಲಂಬಿತವಾಗದೆ..ಮುಂದಿನ ದಿನಗಳಲ್ಲಿ..ಅಭಿಮನ್ಯು ರೀತಿಯಲ್ಲಿಯೇ ಕ್ಯಾಂಪ್ ನಲ್ಲಿ ಇನ್ನು ಕೆಲವು ಆನೆಗಳಿಗೆ ತರಬೇತಿ ನೀಡಬೇಕಿದೆ ಎಂದು ವಸಂತ ಹೇಳುತ್ತಾನೆ.ಮಗ ಸತ್ತಾಗ ಹಾಗು ಅಣ್ಣ ಸತ್ತಾಗ ಕೂಡ ಅಂತ್ಯ ಸಂಸ್ಕಾರಕ್ಕೆ ಹೋಗಲಿಲ್ಲ.

Abhimanyu Elephant  ನನ್ನ ನಿವೃತ್ತಿಗೆ ಈ ವೃತ್ತಿ ಸಾಕು..ನನ್ನ ಮಕ್ಕಳಿಗೆ ಈ ಕೆಲಸ ಬೇಡ.

ವಸಂತ ಅಭಿಮನ್ಯು ಬಗ್ಗೆ ಎಷ್ಟೇ ಪ್ರೀತಿ ಹೊಂದಿದ್ದರೂ..ಇಲಾಖೆಯಲ್ಲಿ ಅಧಿಕಾರಿ ಸಿಬ್ಬಂದಿಗಳು ನಡೆಸಿಕೊಳ್ಳುವ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದಾನೆ.ಹುಟ್ಟಿನಿಂದಲೇ ಅಭಿಮನ್ಯು ಆನೆಯ ಮೇಲೆ ಪ್ರೀತಿ ಬೆಳೆಸಿಕೊಂಡಿರುವ ವಸಂತ..ತನ್ನ ಕೆಲಸವನ್ನು ದೇವರ ಕೆಲಸವೆಂದೇ ಭಾವಿಸಿದ್ದಾನೆ.ಒಂದು ದಿನ ರಜೆಯನ್ನು ಹಾಕದೆ..ಹಿರಿಯ ಅಧಿಕಾರಿಗಳ ಅಣತೆಯಂತೆ ವಿವಿದ ಜಿಲ್ಲೆ ಹಾಗು ರಾಜ್ಯಗಳಿಗೆ ಆನೆ ಇಲ್ಲವೇ ಹುಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ.ಕಾರ್ಯಾಚರಣೆ ವೇಳೆ ಏನೇ ಅವಘಾಡವಾದ್ರು..ಜೀವಕ್ಕೆ ಗ್ಯಾರಂಟಿ ಇಲ್ಲ.ಕೆಲವು ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇನ್ಸುರೆನ್ಸ್ ಮಾಡಿಸಿರುತ್ತಾರೆ ಬಿಟ್ಟರೇ ಉಳಿದ ಸಂದರ್ಭದಲ್ಲಿ ಕೇಳುವವರಿಲ್ಲ.ನನ್ನ ಮಗ ಸತ್ತಾಗಲೂ  ನಾನು ದಸರಾ ಗಜಪಡೆ ಕೆಲಸದಲ್ಲಿದ್ದೆ ಎಂದು ವಸಂತ್ ಬಾವುಕನಾಗಿ ಹೇಳುತ್ತಾನೆ..ಮಗ ಮಾತ್ರವಲ್ಲ ಅಣ್ಣ ಸಾವನ್ನಪ್ಪಿದಾಗ ಕೂಡ ನನ್ನಿಂದ ಕಣ್ತುಂಬಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವಾಗ ಭಾವುಕನಾಗುತ್ತಾನೆ. ನನ್ನ ನಿವೃತ್ತಿಗೆ ಇದು ಕೊನೆಯಾಗಲಿ..ನನ್ನ ಮಕ್ಕಳಿಗೆ ಆನೆಯ ಕೆಲಸ ಬೇಡ..ಹೀಗಾಗಿ ಅವರನ್ನು ಈವರೆಗೂ ದೂರವಿಟ್ಟಿದ್ದೇನೆ ಎಂದು ವಸಂತ್ ಹೇಳುವಾಗ..ಅದೆಷ್ಟು ನೋವನ್ನು ಅನುಭವಿಸಿದ್ದಾನೆಂಬುದು ಅರಿವಾಗುತ್ತದೆ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಅಭಿಮನ್ಯು ಮೈಸೂರು ದಸರದಲ್ಲಿ ಅಂಬಾರಿಯನ್ನು ಕೂಡ ಹೊರುತ್ತಿದ್ದಾನೆ..ತನ್ನ ಮೈಕಟ್ಟು,ಚಾಕಚಕ್ಯತೆ..ನೈಪುಣ್ಯತೆ ಗುಣಗಳಿಂದಲೇ ಅಭಿಮನ್ಯು ನಾಡಿನ ಮನೆ ಮಾತಾಗಿದ್ದಾನೆ.ಅಭಿಮನ್ಯು ನಂತರ ಮತ್ತ್ಯಾರು ಎನ್ನುವ ಪ್ರಶ್ನೆಗೆ ಸಧ್ಯಕ್ಕೆ ಉತ್ತರವಿಲ್ಲ.

Abhimanyu ElephantThe King of Capture Operations
Abhimanyu Elephant The King of Capture Operations
SUNCONTROL_FINAL-scaled
Share This Article