ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 20, 2025 : ತೀರ್ಥಹಳ್ಳಿ ಮಾರಿಕಾಂಬಾ ದೇವಾಲಯದ ಬಳಿಯಲ್ಲಿ ಸಿಕ್ಕ ಮಗುವೊಂದರ ಕಥೆಯಿದು. ತೀರ್ಥಹಳ್ಳಿ ಪೇಟೆಯ ಮಾರಿಕಾಂಬಾ ದೇವಸ್ಥಾನದ ಬಳಿ ಮಗುವೊಂದು ನಿಂತಿತ್ತು. ಅದನ್ನು ಗಮನಿಸಿದ ಸ್ಥಳೀಯರು, ಯಾರು ಪುಟ್ಟ! ಅಪ್ಪಾ ಅಮ್ಮಾ ಎಲ್ಲಿ ಎಂದು ಕಳಿದ್ದಾರೆ. ಮರುಕ್ಷಣದಲ್ಲಿಯೇ ಆ ಮಗು ಏನೂ ಹೇಳಲಾಗದು, ಅದು ತಪ್ಪಿಸಿಕೊಂಡಿದೆ ಎಂಬುದು ಸ್ಥಳೀಯರಿಗೆ ಅರ್ಥವಾಗಿದೆ. ತಕ್ಷಣವೇ ತಮ್ಮ ವಾಟ್ಸಾಪ್ ಗ್ರೂಪ್ಗಳಲ್ಲಿ ಮಗು ತಪ್ಪಿಸಿಕೊಂಡಿದೆ. ಫೋಷಕರನ್ನು ಹುಡುಕಲು ನೆರವಾಗುವಂತೆ ಕೋರಿದರು. ಅಷ್ಟರಲ್ಲಿ ಸ್ಥಳಕ್ಕೆ ಪೊಲೀಸರು ಸಹ ಬಂದರು. ಅವರು ಸಿಸಿ ಕ್ಯಾಮರಾದ ದೃಶ್ಯವನ್ನು ಗಮನಿಸುತ್ತಿರುವಾಗಲೆ, ಇತ್ತ ವಿಚಾರ ತಿಳಿದು ಸ್ಥಳಕ್ಕೆ ಮಗುವಿನ ಸಂಬಂದಿಕರೊಬ್ಬರು ಬಂದು ಮಗು ತಮ್ಮವರದ್ದು ಎಂದು ಹೇಳಿದರು.

ಆಮೇಲೆ ವಿಚಾರಿಸಿದಾಗ ಗೊತ್ತಾಗಿದ್ದು, ಮಗುವಿನ ತಂದೆಯೇ ಮಾರಿಕಾಂಬಾ ದೇವಾಲಯದ ಬಳಿ ಮಗುವನ್ನು ಬಿಟ್ಟುಹೋಗಿದ್ದ ಎನ್ನುವ ಸಂಗತಿ. ಆತ ತೀರ್ಥಹಳ್ಳಿಯವನಲ್ಲ. ಶಿಕಾರಿಪುರ ತಾಲ್ಲೂಕು ನಿವಾಸಿ. ಸ್ವಲ್ಪ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂಬುದು ಆತನ ಕುಟುಂಬಸ್ಥರ ಮಾತು. ಆತ ಮನೆಯವರಿಗೆ ತಿಳಿಸದೆ ಮಗುವನ್ನ ಕರೆದುಕೊಂಡು ಬಂದು ದೇವಸ್ಥಾನದ ಬಳಿ ತಂದು ಬಿಟ್ಟು ಹೋಗಿದ್ದ.
ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಶಿರಸಿ, ಯುಲ್ಲಾಪುರ, ಕುಮುಟಾ! ಎಲ್ಲೆಲ್ಲಿ ಎಷ್ಟಿದೆ ಅಡಿಕೆ ದರ!?
ಅಂತಿಮವಾಗಿ ಮಾರಿಕಾಂಬೆಯ ಸನ್ನಿಧಿಯಲ್ಲಿ ನಿಂತಿದ್ದ ಮಗು ಸುರಕ್ಷಿತವಾಗಿ ತನ್ನ ಕುಟುಂಬಸ್ಥರನ್ನು ಸೇರುವುದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿತು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

