ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ : ನವದೆಹಲಿ : ಆಧಾರ್ ಕಾರ್ಡ್ ಮಾಹಿತಿ ಬದಲಾವಣೆಗೆ ಸಂಬಂಧಿಸಿದಂತೆ ಇಂದಿನಿಂದ ಅಂದರೆ, ನವೆಂಬರ್ ಒಂದರಿಂದ ರೂಲ್ಸ್ ಬದಲಾಗುತ್ತಿದೆ. ಮುಖ್ಯವಾಗಿ ಆಧಾರ್‌ನಲ್ಲಿ ದಾಖಲಾಗಿರುವ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಅಥವಾ ಬಯೋಮೆಟ್ರಿಕ್ ವಿವರಗಳಂತಹ ಮಾಹಿತಿಯನ್ನು ಬದಲಾಯಿಸಲು ವಿಧಿಸುವ ಶುಲ್ಕ ನವೀಕರಿಸಲಾಗಿದೆ. ಪ್ರತಿ ನವೀಕರಣಕ್ಕೂ ಪ್ರತ್ಯೇಕ ಹೊಸ ಶುಲ್ಕ ಪ್ರಕಟಿಸಲಾಗಿದೆ.

- ಯುಐಡಿಎಐಯ ಹೊಸ ನಿಯಮಗಳ ಪ್ರಕಾರ, ನವೆಂಬರ್ 1 ರಿಂದ ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ ಅಥವಾ ಮೊಬೈಲ್ ಸಂಖ್ಯೆ ನವೀಕರಿಸಲು 75 ರೂಪಾಯಿ ನೀಡಬೇಕಾಗುತ್ತದೆ.
- ಇನ್ನೂ ಫಿಂಗರ್ ಪ್ರಿಂಟ್‌ಗಳು, ಐರಿಸ್ ಅಥವಾ ಫೋಟೋ ನವೀಕರಣಗಳಿಗೆ 125 ರೂ. ಶುಲ್ಕ ವಿಧಿಸಲಾಗುತ್ತದೆ.
- ಆದರೆ 5 ರಿಂದ 7 ವರ್ಷ ವಯಸ್ಸಿನ ಮತ್ತು 15 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ನವೀಕರಣಗಳು ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಆನ್‌ಲೈನ್ ದಾಖಲೆ ನವೀಕರಣಗಳು ಪ್ರಸ್ತುತ 2026ರ ಜೂನ್ 14ರವರೆಗೆ ಉಚಿತವಾಗಿದೆ. ಆನಂತರ ಆನ್‌ಲೈನ್ ಕೇಂದ್ರದಲ್ಲಿ ಈ ಸೇವೆಗಾಗಿ 75 ರೂ ಪಾವತಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಮರುಮುದ್ರಿಸಲು 40 ರೂ ಮತ್ತು ಮನೆ ದಾಖಲಾತಿ ಸೇವೆಗಳಿಗೆ ಮೊದಲ ವ್ಯಕ್ತಿಗೆ 700 ರೂ. ಹಾಗೂ ಅದೇ ವಿಳಾಸದಲ್ಲಿರುವ ಪ್ರತಿ ಹೆಚ್ಚುವರಿ ವ್ಯಕ್ತಿಗೆ 350 ರೂ. ಪಾವತಿಸಬೇಕಾಗುತ್ತದೆ.

ಬೈರತಿ ರಣಗಲ್‌ನ ಮೈಲಿಗಲ್ಲಿನ ಕಥೆಗೆ ಭರ್ಜರಿ ರೆಸ್ಪಾನ್ಸ್
ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್ ಹೊಂದಿರುವವರು 2025ರ ಡಿಸೆಂಬರ್ 31ರೊಳಗೆ ತಮ್ಮ ಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವಂತೆ ಯುಐಡಿಎಐ ಸೂಚನೆ ನೀಡಿದೆ.
ಈ ಈ ಗಡುವಿನೊಳಗೆ ಲಿಂಕ್ ಮಾಡಲು ವಿಫಲವಾದರೆ, 2026ರ ಜನವರಿ 1 ರಿಂದ ಪ್ಯಾನ್ ನಿಷ್ಕ್ರಿಯವಾಗುತ್ತದೆ. ಇದರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅಥವಾ ಯಾವುದೇ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಬಳಕೆಗೆ ತಡೆಯಾಗುತ್ತದೆ. ವಂಚನೆ ಮತ್ತು ತೆರಿಗೆ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಇಂತಹ ಕ್ರಮ ಕೈಗೊಂಡಿರುವುದರಿಂದ ಆದಷ್ಟು ಬೇಗನೆ ಲಿಂಕ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಕಾರ್ತಿಕ ಸೋಮವಾರ! ಇವತ್ತಿನ ದಿನಭವಿಷ್ಯ! ಉದ್ಯೋಗ, ಆರೋಗ್ಯ, ಹಣಕಾಸಿನ ವಿವರ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
