ಅಪರೂಪಕ್ಕೆ ಕಾಣ ಸಿಕ್ಕ ಶ್ವೇತ ವರ್ಣದ ಹೆಬ್ಬಾವು! ಬಿಳಿ ಬಣ್ಣದ ಹಾವಿನ ಅಚ್ಚರಿ

A white python was found in Kumta in Uttara Kannada district ಉತ್ತರಕನ್ನಡ ಜಿಲ್ಲೆ ಕುಮಟಾದಲ್ಲಿ ಬಿಳಿ ಬಣ್ಣದ ಹೆಬ್ಬಾವು ಕಾಣ ಸಿಕ್ಕಿದೆ

ಅಪರೂಪಕ್ಕೆ ಕಾಣ ಸಿಕ್ಕ ಶ್ವೇತ ವರ್ಣದ ಹೆಬ್ಬಾವು! ಬಿಳಿ ಬಣ್ಣದ ಹಾವಿನ ಅಚ್ಚರಿ

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS  

ತೀರಾ ಅಪರೂಪಕ್ಕೆ ಕಾಣಸಿಗುವ ಹಾವುಗಳು ಎಂದರೆ ಶ್ವೇತ ಬಣ್ಣದ ಸರ್ಪಗಳು. ಇವುಗಳಲ್ಲಿ ಶ್ವೇತ ನಾಗರ ವಿಶೇಷವಾದದ್ದು, ಸದ್ಯ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬಿಳಿ ಬಣ್ಣದ ಹೆಬ್ಬಾವೊಂದು ಪತ್ತೆಯಾಗಿದೆ. ಈ ರೀತಿಯ ಶ್ವೇತವರ್ಣದ ಹೆಬ್ಬಾವು ಕಾಣಿಸಿಕೊಳ್ತಿರುವುದು ಈ ಭಾಗದಲ್ಲಿ ಇದು ಎರಡನೇ ಸಲವಾಗಿದೆ. 

ಕುಮಟಾದ ಹೆಗೆಡೆ ಗ್ರಾಮದ ದೇವಿ ನಾರಾಯಣ ಮುಕ್ತಿ ಎನ್ನುವವರ ಮನೆಯ ಬಳಿಯಲ್ಲಿ ಈ ಹೆಬ್ಬಾವು ಕಾಣಿಸಿಕೊಂಡಿತ್ತು. ಆರಂಭದಲ್ಲಿ ಆತಂಕಗೊಂಡಿದ್ದ ಮನೆಯವರು ಪವನ್ ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ನೇಕ್ ಸಂರಕ್ಷಕರಾದ ಪವನ್​ ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಇದು ಶ್ವೇತ ವರ್ಣದ ಹೆಬ್ಬಾವು ತೀರಾ ಅಪರೂಪಕ್ಕೆ ಕಾರಣ ಸಿಗುವ ಜೀವಿ ಎಂದು ಮಾಹಿತಿ ನೀಡಿದರು. 

ಕಳೆದ ವರ್ಷ ಕುಮಟಾದಲ್ಲಿಯೇ ಚಿಕ್ಕ ಗಾತ್ರ ಬಿಳಿ ಬಣ್ಣದ ಹೆಬ್ಬಾವು ಕಾಣಿಸಿತ್ತು. ಸದ್ಯ ಸಿಕ್ಕಿರುವ ಹೆಬ್ಬಾವು ಹೆಚ್ಚು ಉದ್ದವಿದೆ ಎಂದು ಮಾಹಿತಿ ನೀಡಿದ್ಧಾರೆ.  


ಇನ್ನಷ್ಟು ಸುದ್ದಿಗಳು