MALENADUTODAY.COM | SHIVAMOGGA NEWS
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಮಗು ನಿನ್ನೆ ಸೋಮವಾರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಮಗು ಕಾಣೆಯಾಗಿತ್ತು ಎಂದು ಅವರ ತಂದೆ ದೂರು ಸಲ್ಲಿಸಿದ್ದರು. ಕೆರೆಯಲ್ಲಿ ಶವ ಸೋಮವಾರ ತೇಲಿ ಬಂದಿದೆ. ರಾಗಿಗುಡ್ಡದಲ್ಲಿ ಈ ಘಟನೆ ನಡೆದಿದೆ. ತಮ್ಮ ಮೊದಲನೇ ಮಗು ಕಾಣೆಯಾಗಿದ್ದಾನೆ ಎಂದು ಅವರ ತಂದೆ ದೂರು ನೀಡಿದ್ದರು, ಕಳೆದ ಫೆಬ್ರವರಿ 11 ರಂದು ಮನೆಯ ಬಳಿ ಆಡುತ್ತಿದ್ದ ಮಗು ನಾಪತ್ತೆಯಾಗಿತ್ತು. ನಿನ್ನೆ ಕೆರೆಯಲ್ಲಿ ಶವ ತೇಲಿ ಬಂದಿದ್ದನ್ನು ಕಂಡ ಸ್ಥಳೀಯರು ಫೋಷಕರಿಗೆ ವಿಷಯ ತಿಳಿಸಿದ್ದಾರೆ. ಮಗು ಆಟವಾಡ್ತಾ ಕೆರೆಗೆ ಹೋಗಿ ಬಿದ್ದಿರಬಹುದು ಎಂದು ಊಹಿಸಲಾಗಿದ್ದು, ಈ ಸಂಬಂಧ ತನಿಖೆ ನಡೆಯತ್ತಿದೆ.
ಶಿವಮೊಗ್ಗದ ಆಟೋಗಳಿಗೆ ಶೀಘ್ರವೇ ಮೀಟರ್ ಫಿಕ್ಸ್! ADC ಅಳವಡಿಕೆಗೆ ಫೆಬ್ರವರಿ 28 ರ ಡೆಡ್ಲೈನ್
ಹೆರಿಗೆ ವಾರ್ಡ್ಗೆ ಬಂದಿದ್ದ ಮಹಿಳೆ ನಾಪತ್ತೆ
ಶಿವಮೊಗ್ಗದ ಮೆಗ್ಗಾನ್ ನ ಹೆರಿಗೆ ವಾರ್ಡ್ಗೆ ಬಂದಿದ್ದ ಮಹಿಳಯೊಬ್ಬಳು, ತನ್ನ ಆರು ತಿಂಗಳ ಹೆಣ್ಣುಮಗುವೊಂದನ್ನ ಅಲ್ಲಿದ್ದ ಮಹಿಳೆಗೆ ನೀಡಿ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದಾಳೆ.ಮಗುವನ್ನ ಎತ್ತಿಕೊಂಡವರು ಮಹಿಳೆ ಬಾರದ್ದನ್ನು ನೋಡಿ ಪೊಲೀಸರು ಹಾಗೂ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮಗು ಕೊಟ್ಟು ಹೋದ ಮಹಿಳೆಯು ಯಾರು ಎಂಬುದನ್ನ ವಿಚಾರಿಸುತ್ತಿದ್ದಾರೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
