Shivamogga airport ಫೆಬ್ರವರಿಯಲ್ಲಿ ಏರ್​ಪೋರ್ಟ್​ ಉದ್ಘಾಟನೆ ಪಕ್ಕಾ/ ಮೋದಿಯಿಂದ ₹7500 ಕೋಟಿ ಕಾಮಗಾರಿಗೆ ಚಾಲನೆ/ 5 ಮುಖ್ಯ ವಿಚಾರ ತಿಳಿಸಿದ ಸಂಸದ ರಾಘವೇಂದ್ರ

Airport to be inaugurated in February/ Pm Modi to inaugurate Rs 7,500 crore work/ MP BY Raghavendra makes 5 important remarks

ಪ್ರಧಾನಿ ನರೇಂದ್ರ ಮೋದಿಯವರನ್ನ (narendra modi) ಇದೇ ಫೆಬ್ರವರಿ ತಿಂಗಳಿನಲ್ಲಿ ಏರ್​ಫೋರ್ಟ್ (Shivamogga airport)​ ಉದ್ಘಾಟನೆ ಮಾಡಬೇಕು ಎಂದು ಆಹ್ವಾನಿಸಿರುವುದಾಗಿ ಸಂಸದ ಬಿವೈ ರಾಘವೇಂದ್ರರವರು (B Y Raghavendra) ತಿಳಿಸಿದ್ದಾರೆ. 

BS Yediyurappa : ಫೆಬ್ರವರಿ 27 ಕ್ಕಾ ವಿಮಾನ ನಿಲ್ದಾಣ ಉದ್ಘಾಟನೆ? ಮುಸ್ಲಿಂ ಮತ ಮತ್ತು ವಿಜಯೇಂದ್ರರ ಚರ್ಚೆ ಹಾಗೂ ಮೋದಿ ಸೂಚನೆ : ಬಿಎಸ್​ವೈ ಮಹತ್ವದ ಮಾತು!

ಈ ಸಂಬಂಧ ಮಾತನಾಡಿದ ಅವರು,  ಶಿವಮೊಗ್ಗ ನಗರದ ಸ್ಮಾರ್ಟ್​ ಸಿಟಿ ಕೆಲಸ  ಜಲಜೀವನ್ ಮಿಶನ್ ನಡಿ 2500 ಕೋಟಿ ನೀರಾವರಿ ಯೋಜನೆ , ರಾಷ್ಟ್ರೀಯ ಹೆದ್ದಾರಿಗಳು  , ರೈಲ್ವೆ ಕಾಮಗಾರಿ ಸೇರಿದಂತೆ ಸುಮಾರು 7500 ಕೋಟಿ ಮೌಲ್ಯದ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕೈಗೊಳ್ಳುವಂತೆ ಮೋದಿಯವರನ್ನು ವಿನಂತಿಸಲಾಗಿದೆ. ನೂರಕ್ಕೆ ನೂರರಷ್ಟು ಇನ್ನೆರಡು ದಿನಗಳಲ್ಲಿ ಅಧಿಕೃತ ಸಮಯ ಇದಕ್ಕಾಗಿ ನಿಗದಿಯಾಗಲಿದೆ ಎಂದರು. 

power cut mescom : ಶಿವಮೊಗ್ಗ ನಗರದಲ್ಲಿ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವತ್ಯಯವಾಗಲಿದೆ! ಯಾವ್ಯಾವ ಏರಿಯಾದಲ್ಲಿ ಕರೆಂಟ್ ಇರುವುದಿಲ್ಲ ಎಂಬ ವಿವರ ಇಲ್ಲಿದೆ

ಏರ್​ಪೋರ್ಟ್ ಉದ್ಘಾಟನೆ ಯಾವಾಗ? 

  1. ಇನ್ನೂ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ಏರ್​ಫೋರ್ಟ್ (shivamogga airport) ಉದ್ಘಾಟನೆಯ ಬಗ್ಗೆ ಮಾತನಾಡಿದ ಸಂಸದ ರಾಘವೇಂದ್ರರವರು, ಇದೇ ಫೆಬ್ರವರಿಯಲ್ಲಿ ವಿಮಾನ ನಿಲ್ದಾಣದ ಉದ್ಘಾಟನೆಯ ಕೈಗೊಳ್ಳಬೇಕು ಎಂದು ಮೋದಿಯವರನ್ನು ಆಹ್ವಾನಿಸಿದ್ದಾಗಿ ತಿಳಿಸಿದರು
  2. ನಿನ್ನೆ ದೆಹಲಿ ಹಾಗೂ ಬೆಂಗಳೂರಿನಿಂದ ವಿಶೇಷ ತಂಡ ಏರ್​ಪೋರ್ಟ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದೆ.
  3. ಡಿಜಿಸಿಎ ಹಾಗೂ ಏರ್​ಪೋರ್ಟ್​ ಅಥಾರಿಟಿ ಇಂಡಿಯಾದಿಂದ ಅಂತಿಮ ಹಂತದ ಲೈಸೆನ್ಸಿಂಗ್​  ಪ್ರಕ್ರಿಯೆ ಬಾಕಿಯಲ್ಲಿದೆ. ಮೋದಿಯವರು ಬರುವುದರೊಳಗೆ ಎಲ್ಲಾ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸುವ ಕೆಲಸವಾಗ್ತಿದೆ.
  4. ನಿಲ್ದಾಣದಲ್ಲಿನ ಉದ್ಯೋಗಗಳನ್ನು ಭರ್ತಿ ಮಾಡುವ ಕೆಲಸವಾಗ್ತಿದೆ.
  5. ಏರ್​ಲೈನ್ಸ್​ಗಳನ್ನ ಸಂಪರ್ಕ ಮಾಡಲಾಗುತ್ತಿದ್ದು, ವಿಮಾನವೊಂದರ ಲ್ಯಾಂಡಿಂಗ್ ಮೂಲಕವೇ ನಿಲ್ದಾಣದ ಉದ್ಘಾಟನೆ ಮಾಡಲು ತಯಾರಿ ನಡೆಸಲಾಗಿದೆ ಎಂದಿದ್ಧಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com