‘ಟಿಪ್ಪು ಸುಲ್ತಾನ್​’ ಘೋಷಣೆ ವಿಚಾರಕ್ಕೆ ನೆಕ್ಸಾ ಶೋರೂಮ್​ ಬಳಿ ಹಲ್ಲೆ ಆರೋಪ! ರಾಗಿಗುಡ್ಡ ನಿವಾಸಿಗಳಿಬ್ಬರ ವಿರುದ್ಧ FIR

Malenadu Today

KARNATAKA NEWS/ ONLINE / Malenadu today/ Jun 30, 2023 SHIVAMOGGA NEWS

ಶಿವಮೊಗ್ಗ ನಗರದಲ್ಲಿ ಕೋಮು ಸೂಕ್ಷ್ಮತೆಯನ್ನು ಕದಡುವ ಪ್ರಯತ್ನಗಳು ದುಷ್ಟಶಕ್ತಿಗಳು ಪ್ರಯತ್ನಿಸುತ್ತಲೇ ಇವೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ನಡೆದ ವೈಯಕ್ತಿಕ ದ್ವೇಷದ ಹಲ್ಲೆ ಪ್ರಕರಣಗಳ ಹಿಂದೆ ಕೋಮು ಕಥೆಗಳು ಕೇಳಿಬಂದಿದ್ದವು. ಆನಂತರ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕರಣವನ್ನು ಸ್ಟೈಟ್​ ಫಾರವರ್ಡ್​ ಆಗಿ ಹ್ಯಾಂಡಲ್​ ಮಾಡಿತ್ತು. 

ಈ ಮಧ್ಯೆ ಕಳೆದ 26 ನೇ ತಾರೀಖು ನಡೆದ ಘಟನೆಯೊಂದರ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ದಿನಾಂಕ: 28-06-2023 ರಂದು ಎಫ್​ಐಆರ್ ದಾಖಲಾಗಿದೆ. ಎಫ್​ಐಆರ್​ ನಲ್ಲಿ ಉಲ್ಲೇಖವಾದ ಆರೋಪದ ಪ್ರಕಾರ ನೋಡುವುದಾದರೆ, ಆರೋಪಿಗಳು ದೂರುದಾರರಿಗೆ ಟಿಪ್ಪು ಸುಲ್ತಾನ್​ಗೆ ಜೈ ಎನ್ನು ಎಂದು ಹಲ್ಲೆ ಮಾಡಿದ ಸಂಬಂಧ ದೂರಲಾಗಿದೆ. 

ಹೊನ್ನಾಳಿ ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ ಊಟ ಮಾಡಿ ದೂರುದಾರರು ವಾಪಸ್​ ಮನೆಗೆ ಹೊರಟಿದ್ದರು. ಈ ವೇಳೆ ನೆಕ್ಸಾ ಶೋ ರೂಂ ಬಳಿಯಲ್ಲಿ,  ರಾಗಿಗುಡ್ಡ ವಾಸಿ ನಸ್ರು ಎಂಬಾತ ದೂರುದಾರರನ್ನು ಅಡ್ಡ ಹಾಕಿ ಟಿಪ್ಪು ಸುಲ್ತಾನ್ ಕಿ ಜೈ ಎಂದು ಹೇಳು ಎಂದು  ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೆ ಇದೇ ವಿಚಾರವಾಗಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಮಧ್ಯೆ ಸಕ್ಲೈನ್ ಎಂಬಾತನು ಸಹ ಹಲ್ಲೆ ಮಾಡಿದ್ದು , ಕೊನೆಗೆ ದೂರುದಾರರ ಸ್ನೇಹಿತರು ಬಂದು ಬಚಾವ್ ಮಾಡಿದ್ದಾರೆ . 

ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದು, ತನಿಖೆ ಆರಂಭಿಸಿದ್ದಾರೆ. IPC 1860 (U/s-506,34,323,324) ಅಡಿಯಲ್ಲಿ ಕೇಸ್ ದಾಖಲಾಗಿದ್ದು ಪ್ರಕರಣವನ್ನು ಗಂಭೀರವಾಗಿ ಶಿವಮೊಗ್ಗ ಪೊಲೀಸರು ಪರಿಗಣಿಸಿದ್ದಾರೆ. 


ಫೀಡರ್ ಪಿಲ್ಲರ್ ಪಟಾಕಿ ಸ್ಫೋಟ! ಘಟನೆಗೆ ಕಾರಣವೇನು ಗೊತ್ತಾ? ಎಲ್ಲೆಲ್ಲಿ ಏನಾಗುತ್ತೋ ಪಾಲಿಕೆನೇ ಹೇಳಬೇಕು!?

ಶಿವಮೊಗ್ಗ ನಗರದ ಗಾಂಧಿನಗರ ದಲ್ಲಿ ನಿನ್ನೆ ಮೆಸ್ಕಾಂನ ಫೀಡರ್​ ಫಿಲ್ಲರ್​ ಪಟಾಕಿ ಅಂಗಡಿಗೆ ಬೆಂಕಿ ಬಿದ್ದ ಹಾಗೆ ಹೊತ್ತಿ ಉರಿದಿತ್ತು. ಅಚ್ಚರಿಯೆಂದರೆ, ಈ ಫೀಡೆರ್​ಗೆ ಇನ್ನೂ ವಿದ್ಯುತ್ ಸಪ್ಲೆಯಾಗಿರಲಿಲ್ಲ. ಬದಲಾಗಿ, ಅದರಡಿಯಲ್ಲಿದ್ದ ಭೂಗತ ಕೇಬಲ್​ಗಳು ಶಾರ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. 

ಯಾರು ಹೊಣೆ?

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಫೀಡರ್​ ಫಿಲ್ಲರ್​ ಬಳಿಯಲ್ಲಿಯೇ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಬಾಕ್ಸ್ ಚರಂಡಿ ಕಾಮಗಾರಿಯ ರಿಪೇರಿ ಕೆಲಸ ನಡೆದಿದೆ ಎನ್ನಲಾಗುತ್ತಿದೆ. ಇದಕ್ಕಾಗಿ  ಜೆಸಿಬಿ ಮೂಲಕ ಗುಂಡಿ ಅಗೆಯಲಾಗಿದೆ. ಈ ವೇಳೆ ಭೂಗತ ಕೇಬಲ್​ಗಳನ್ನು ಜೆಸಿಬಿ ಮೂಲಕ ಕೆರೆಯಲಾಗಿದೆ. ಇಷ್ಟು ನಿರ್ಲಕ್ಷ್ಯದಿಂದ ಕೆಲಸ ಮಾಡಿದರೂ ಸಹ, ಅಧಿಕಾರಿಗಳಾಗಲಿ, ಪಾಲಿಕೆಯಾಗಲಿ ಆಗಿದ್ದ ಡ್ಯಾಮೇಜ್​ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ. 

ನಿನ್ನೆ ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗಿದೆ. ಈ ವೇಳೇ  ವಿದ್ಯುತ್ ಹರಿಯುತ್ತಿದ್ದ ಭೂಗತ ಕೇಬಲ್​ಳಿಗೆ ನೀರು ತಾಕಿದೆ. ಅಲ್ಲಿಯೇ ಶಾರ್ಟ್ ಆಗಿ ಬೆಂಕಿ ಹೊರಹೊಮ್ಮಿದೆ.ತಕ್ಷಣವೇ ಸ್ಥಳಕ್ಕೆ ಬಂದ ಮೆಸ್ಕಾಂ ವಿದ್ಯುತ್ ಸಂಪರ್ಕ ತಪ್ಪಿಸಿ, ಆಗಬಹುದಾದ ಅನಾಹುತ ತಪ್ಪಿಸಿದೆ. ಆದರೆ ಆರಂಭ ಹಂತದಲ್ಲಿ ನಿನ್ನೆ ಈ ಭಾಗದಲ್ಲಿ ಎನು ಸಹ ಆಗುವ ಅಪಾಯವಿತ್ತು.  

ಬೇಡವಾಗಿದ್ದರೂ ಜನರ ಮೇಲೆ ಹೇರುವ ಯೋಜನೆಗಳು ಜನರ ಜೀವ ತೆಗೆಯುತ್ತವೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸ್ಮಾರ್ಟ್​ ಸಿಟಿ ಕಾಮಗಾರಿ ಅದ್ಯಾರಿಗೆ ಸಮಾಧಾನ ತಂದಿದೆಯೋ ಗೊತ್ತಿಲ್ಲ. ಆದರೆ ವಿದ್ಯುತ್ ಸಂಪರ್ಕ ನೀಢುವ ಭೂಗತ ಕೇಬಲ್​ಗಳು ಜೀವ ತೆಗೆಯುವ ಡೇಂಜರ್​ ಸಿಗ್ನಲ್​ನ್ನ ಆಗಾಗ ಪ್ರದರ್ಶಿಸುತ್ತಲೇ ಇವೆ. ಈ ಹಿಂದೆ ಶಿವಮೊಗ್ಗದ ಸ್ಮಾರ್ಟ್​​ ಬಡಾವಣೆಗಳಲ್ಲಿ ಮುಟ್ಟಿದಲ್ಲೆಲ್ಲಾ ಕರೆಂಟ್ ಶಾಕ್ ಹೊಡೆಯುತ್ತಿತ್ತು. ಆನಂತರ ನೆಲದಿಂದ ಬೆಂಕಿ ಹೊಗೆ ಬಂದ ಘಟನೆಗಳ ವಿಡಿಯೋಗಳಿವೆ. ಈ ವರ್ಷ ಮಳೆಗಾಲದ ಆರಂಭದಲ್ಲಿ ಫೀಡರ್ ಪಟಾಕಿ ಹೊತ್ತಿಕೊಂಡಿದೆ. ಮಕ್ಕಳು ಓಡಾಡುವ ಜಾಗಗಳಿವೂ ಫಿಡರ್ ಮುಟ್ಟಿ ಏನೋ ಅನಾಹುತ ಆದರೆ, ಹೊಣೆಯಾರು ಎಂಬುದು ಜನರ ನೇರ ಪ್ರಶ್ನೆ?  


ಕೇವಲ ಕಿವಿ ವೋಲೆ ಕೊಟ್ಟಿದ್ದಕ್ಕೆ ಸಿಕ್ತು ತೂಕದ ಕಾಸಿನ ಸರ! ಆಮೇಲೆ ದಾಖಲಾಯ್ತು ಕೇಸು! ಮಹಿಳೆಯರೆ ಹುಷಾರ್?

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ನಕಲಿ  ಕಾಸಿನ ಸರ ಕೊಟ್ಟು ಬಂಗಾರದ ಆಭರಣ ಪಡೆದು ಮೋಸ ಮಾಡಿದ ಸಂಬಂಧ ಕೇಸ್​ವೊಂದು ದಾಖಲಾಗಿದೆ. ದಾವಣಗೆರೆಯ ಚೆನ್ನಗಿರಿ ಮೂಲದ ಕಮಲಮ್ಮ ಎಂಬವರು ಈ ಬಗ್ಗೆ ದೂರು ದಾಖಲಿಸಿದ್ದು,  ವಂಚನೆ ಆರೋಪದಡಿಯಲ್ಲಿ IPC 1860 (U/s-420) ಕೇಸ್​ ದಾಖಲಾಗಿದೆ. 

ನಡೆದಿದ್ದೇನು?

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಮಲಮ್ಮರವರ ಮಗನನ್ನು ಅಡ್ಮಿಟ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಮಲಮ್ಮ ಅವರನ್ನ ನೋಡಿಕೊಳ್ಳಲು ಮೆಗ್ಗಾನ್ ನಲ್ಲಿದ್ದರು. ಮಗನಿಗೆ ಊಟ ತೆಗೆಎದುಕೊಂಡು ಹೋಗುವಾಗ ಮೆಗ್ಗಾನ್ ಆಸ್ಪತ್ರೆಯ ಎದುರು ಭಾಗದಲ್ಲಿರುವ ಪುಟ್​ ಪಾತ್​ನಲ್ಲಿ ಕಮಲಮ್ಮರಿಗೆ ಇಬ್ಬರು ಅಪರಿಚಿತರು ಎದುರಾಗಿದ್ದಾರೆ .  

ನಮ್ಮ ಮಗಳಿಗೆ ಮೆಗಾನ್‌ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇವೆ.  ಅವಳಿಗೆ ಆಪರೇಷನ್‌ ಮಾಡಿಸಲು ಹೆಚ್ಚಿನ ಹಣ ಬೇಕಾಗಿದೆ. ನಮ್ಮ ಬಳಿ ಹಣವಿಲ್ಲ. ಆದರೆ ಬಂಗಾರದ ಕಾಸಿನ ಸರ ಇದೆ,  ಇದು ಹೆಚ್ಚಿನ ಬೆಲೆ ಬಾಳುತ್ತದೆ. ಇದನ್ನು ನೀವು ತೆಗೆದುಕೊಂಡು ಸ್ವಲ್ಪ ಹಣವನ್ನು ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಕಮಲಮ್ಮ ತಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದಿದ್ಧಾರೆ.  

ಇದಕ್ಕೆ ಆರೋಪಿಗಳು  ಹಣವಿಲ್ಲವೆಂದರೆ ಪರವಾಗಿಲ್ಲ. ಕಿವಿಯಲ್ಲಿರುವ ಓಲೆ ಹಾಗೂ ಡ್ರೈನ್​ ಕೊಡಿ ಅದಕ್ಕೆ ಬದಲಾಗಿ ಈ ಕಾಸಿನ ಸರ ಇಟ್ಟುಕೊಳ್ಳಿ ಎಂದು ನಂಬಿಸಿದ್ದಾರೆ. ಇದನ್ನ ನಂಬಿದ ಕಮಲಮ್ಮ  ತಮ್ಮ  ಕಿವಿಯಲಿದ್ದ ಸುಮಾರು 05 ಗ್ರಾಂ ತೂಕದ ಸುಮಾರು 13000/- ರೂ ಬೆಲೆ ಬಾಳುವ ಒಂದು ಜೊತೆ ಬಂಗಾರದ ಕಿವಿ ಓಲೆ ಮತ್ತು ಸುಮಾರು 03 ಗ್ರಾಂ ತೂಕದ ಸುಮಾರು 9000/- ರೂ ಬೆಲೆ ಬಾಳುವ ಬಂಗಾರದ ಒಂದು ಜೊತೆ ಕಿವಿ ಚೈನ್ ಅವರಿಗೆ ಕೊಟ್ಟಿದ್ದಾರೆ. 

ಯಾವಾಗ ಕಮಲಮ್ಮ ಕಾಸಿನಸರವನ್ನು ಪರೀಕ್ಷೆಗೆ ಒಳಪಡಿಸಿದ್ರೋ ಆಗ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀ್ ಸ್ಟೇಷನ್​ ನಲ್ಲಿ ದೂರು ದಾಖಲಿಸಿದ್ದಾರೆ. 

Share This Article