SHIVAMOGGA| MALENADUTODAY NEWS | ಮಲೆನಾಡು ಟುಡೆ Apr 12, 2025
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ಮರು ಪರಿಶೀಲನೆಯ ಆದೇಶವನ್ನು ಪ್ರಶ್ನಿಸಿ ಮೇಲ್ವನವಿಯ ಅರ್ಜಿಯ ತೀರ್ಪರನ್ನು ಸುಪ್ರೀಕೋರ್ಟ್ ಕಾಯ್ದಿರಿಸಿದೆ. ಕಳೆದ ಏಪ್ರಿಲ್ ನಾಲ್ಕರಂದು ವಿಚಾರಣೆ ಮುಗಿಸಿದ್ದ ಕೋರ್ಟ್ , ಈ ಬಳಿಕ ತೀರ್ಪು ಕಾದಿರಿಸಿದೆ.
ಏನಿದು ಪ್ರಕರಣ
ದೇವನಹಳ್ಳಿಯಲ್ಲಿ 2011ರಲ್ಲಿ 26 ಎಕರೆ ಡಿನೋಟಿಫಿಕೇಷನ್ ನಲ್ಲಿ ಅಕ್ರಮವೆಸಗಿದ ಆರೋಪದಡಿ ಆಲಂ ಪಾಷಾ ದೂರು ನೀಡಿದ್ದರು. ಆನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಯಡಿಯೂರಪ್ಪ ವಿರುದ್ಧ ತಾವು ನೀಡಿರುವ ದೂರನ್ನು ಮರುಪರಿಶೀಲಿಸುವಂತೆ ಎ.ಆಲಂ ಪಾಷಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ 2021ರ ಜನವರಿ 5ರಂದು ಮಾನ್ಯ ಮಾಡಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.