BIG NEWS | ಇ ಸ್ವತ್ತು ಮಾಡಿಕೊಡಲು ₹30 ಸಾವಿರ ಲಂಚ, 15 ಸಾವಿರ ಪಡೆಯುವಾಗ ಇಬ್ಬರು ಅಧಿಕಾರಿಗಳಿಗೆ ಕಾದಿತ್ತು ಶಾಕ್

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 4, 2025 ‌‌ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಟ್ರ್ಯಾಪ್‌ ಆಗಿದ್ದಾರೆ. ತಾಲೂಕಿನ ಕಂಬದಾಳು ಹೊಸೂರು ಪಿಡಿಒ ಮತ್ತು ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 

ಖಾಲಿ ಜಾಗಕ್ಕೆ ಚೆಕ್‌ ಬಂದಿ ನಿಗದಿಪಡಿಸಿ, ಇ ಸ್ವತ್ತು ಮಾಡಿಕೊಡಲು ಲಂಚ ಕೇಳಿದ್ದ ಸಂದರ್ಭದಲ್ಲಿ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. 

ಸಂತ್ರಸ್ತರೊಬ್ಬರು ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರು ದಾಖಲಿಸಿ ದಾಳಿಗೆ ಪ್ಲಾನ್‌ ಮಾಡಿದ ಲೋಕಾಯುಕ್ತ ಪೊಲೀಸರು ಅಧಿಕಾರಿಗಳಾದ ಸುರೇಶಸ್‌ ಹಾಗೂ ಮಹಮದ್‌ ಅಲಿ 15 ಸಾವಿರ ಲಂಚ ಪಡೆಯುತ್ತಿದ್ದಾಗ ಇಬ್ಬರನ್ನು ಟ್ರ್ಯಾಪ್‌ ಮಾಡಿದ್ದಾರೆ.

Share This Article