SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 29, 2025
ಶಿವಮೊಗ್ಗ | ಬಿಜೆಪಿಯ ಅನಂತ್ ಕುಮಾರ್ ಹೆಗಡೆ ಈ ಹಿಂದೆ ಭಾಷಣ ಮಾಡುವ ವೇಳೆ ನಾವು ಬಂದಿರೋದೆ ಸಂವಿಧಾನ ಬದಲಿಸಲು ಎಂಬ ಹೇಳಿಕೆಯನ್ನು ನೀಡಿದ್ದರು. ಆಗ ಚಕಾರ ಎತ್ತದ ಬಿಜೆಪಿಯವರು ಈಗ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ತಿರುಚಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿರುಗೇಟು ನೀಡಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ನಾಲ್ಕೈದಯ ದಿನದಿಂದ ಡಿಕೆ ಶಿವಕುಮಾರ್‌ರವರು ಸಂವಿಧಾನದ ಬಗ್ಗೆ ಕೊಟ್ಟಿರುವ ಹೇಳಿಕೆ ವಿಚಾರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆ ಹೇಳಿಕೆಯನ್ನ ಹಿಡಿದುಕೊಂಡು ರಾಜ್ಯಸಭೆ ವಿಧಾನ ಮಂಡಲದಲ್ಲಿ ಸಹ ಡಿಕೆಶಿ ರಾಜಿನಾಮೆ ಕೊಡಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದ್ದರು. ಅಷ್ಟೇ ಅಲ್ಲದೆ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಸಹ ಡಿಕೆಶಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಆದರೆ ಈ ಹಿಂದೆ ಅನಂತ್ ಕುಮಾರ್ ಹೆಗ್ಡೆ ತೀರ್ಥಹಳ್ಳಿಗೆ ಬಂದಾಗ ಬಾಷಣ ಮಾಡುವ ವೇಳೆ ನಾವು ಬಂದಿರೋದೆ ಸಂವಿಧಾನ ಬದಲಿಸಲು ಎಂಬ ಹೇಳಿಕೆಯನ್ನು ನೀಡಿದ್ದರು. ಅದಕ್ಕೆ ಬಿಜೆಪಿಯವರು ಯಾವುದೇ ಚಕಾರ ಎತ್ತಲಿಲ್ಲ. ಏಕೆಂದರೆ ಆರ್‌ಎಸ್‌ಎಸ್‌ನ ಚಿಂತನಾ ಗಂಗಾ ಪುಸ್ತಕದಲ್ಲಿ ಸಂವಿಧಾನ ಬದಲಾವಣೆ ಬಗ್ಗೆ ನಮೂದಿಸಲಾಗಿದೆ. ಈಗ ಬಿಜೆಪಿಯ ನಾಯಕರು ನಮಗೆ ಉತ್ತರಿಸಬೇಕು, ನೀವು ಡಿಕೆಶಿವಕುಮಾರ್‌ರವರ ಪ್ರತಿಕೃತಿ ದಹಿಸಿದಂತೆ ನಾವು ಸಹ ನಿಮ್ಮ ಆರ್‌ಎಸ್‌ಎಸ್‌ನ ಚಿಂತನಾ ಗಂಗಾ ಪುಸ್ತಕವನ್ನು ಸುಡಬೇಕಾ ಎಂದು ಪ್ರಶ್ನಿಸಿದರು.
ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದು ಆಗಲೇ ಹೇಳಿದ್ದರು. ಅದನ್ನು ಅವರು ಏಕೆ ಹೇಳಿದ್ದರು ಎಂದು ಆಗ ನಮಗೆ ಅರ್ಥವಾಗಲಿಲ್ಲ. ಆದರೆ ಚಿಂತನಾ ಗಂಗಾ ಪುಸ್ತಕವನ್ನು ಓದಿದ ಮೇಲೆ ತಿಳಿಯಿತು. ಇದು ಆರ್ ಎಸ್ ಎಸ್ ನ ನಿಲುವು ಎಂದು. ಸತ್ಯ ಹೇಳಿದ್ದರಿಂದ ಅನಂತ್ ಕುಮಾರ್ ಹೆಗಡೆಯನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು ಎಂದರು.
SUMMARY | Former education minister Kimmane Ratnakar said that the BJP is now twisting the statement of Deputy CM DK Shivakumar.
KEYWORDS | Kimmane Ratnakar, BJP, DK Shivakumar,