ಬಸ್​​ಸ್ಟ್ಯಾಂಡ್​ ಬಳಿ ಬಿರಿಯಾನಿ ಹೋಟೆಲ್​ನಲ್ಲಿ ಬೆಂಕಿ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 25, 2025 ‌‌ ‌‌

ಶಿವಮೊಗ್ಗದ ಬಸ್​ಸ್ಟ್ಯಾಂಡ್ ಬಳಿ ಇರುವ ಬಿರಿಯಾನಿ ಹೋಟೆಲ್​ವೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಸಾಮಗ್ರಿಗಳು ಸುಟ್ಟುಕರಕಲಾಗಿವೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. 

Malenadu Today

ಗ್ಯಾಸ್​ ಲೀಕ್​ ಆಗಿ  ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿವಮೊಗ್ಗ ಬಸ್​ ನಿಲ್ದಾಣದ ಸಮೀಪದ ಬಿರಿಯಾನಿ ಹೌಸ್ ಹೋಟೆಲ್​ನಲ್ಲಿ ಈ ಘಟನೆ ಸಂಭವಿಸಿದೆ. 

Malenadu Today

ಇನ್ನೂ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅರ್ಧಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಅಡುಗೆ ಕೋಣೆಯಲ್ಲಿ ಇದ್ದ ವಸ್ತುಗಳು ಸುಟ್ಟು ಹೋಗಿವೆ.

 

Share This Article