ಸಿಗಂದೂರು ಬ್ರಿಡ್ಜ್​ ಬಗ್ಗೆ ಮತ್ತೊಂದು ಅಪ್​ಡೇಟ್ | ಟೇಪ್​ ಕಟ್​ ಯಾವಾಗ?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 25, 2025 ‌‌ ‌‌

ಶಿವಮೊಗ್ಗದ ಮಹತ್ವದ ಯೋಜನೆ ಸಿಗಂದೂರು ಬ್ರಿಡ್ಜ್​ ಕಾಮಗಾರಿ ಮುಕ್ತಾಯವಾಗಿದ್ದು ಡಾಂಬರೀಕರಣ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಸಂಸದ ಬಿವೈ ರಾಘವೇಂದ್ರ ಅಪ್​ಡೇಟ್ ನೀಡಿದ್ದರು. ಇದೀಗ ಸೇತುವೆಯು ಇದೇ ಮೇ ಕೊನೆವಾರ ಅಥವಾ ಜೂನ್​ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ. ಇದಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ದಿನಾಂಕ ನೀಡಬೇಕಿದೆ. ಈ ಬಗ್ಗೆ ಸದ್ಯದಲ್ಲಿಯೇ ಸಂಸದ ಬಿವೈಆರ್​ ದೆಹಲಿಗೆ ತೆರಳಿ ದಿನಾಂಕ ಫೈನಲ್​ ಮಾಡಿಕೊಂಡು ಬರಲಿದ್ದಾರೆ ಎನ್ನಲಾಗಿದೆ. 

ಸೇತುವೆಯು ಕೇಬಲ್​ಗಳ ಕ್ಷಮತೆಯ ಪರಿಶೀಲನೆ ನಡೆಯುತ್ತಿದ್ದು, ಸೇತುವೆಗೆ ಸಂಬಂಧಿಸಿದ ಪೂರಕ ಕೆಲಸಗಳು ಪೂರ್ಣಗೊಳ್ಳುತ್ತಿವೆ. ಈ ಎಲ್ಲಾ ಕೆಲಸಗಳು ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ಅಂತ್ಯಗೊಳ್ಳಲಿದೆ ಎನ್ನಲಾಗಿದೆ. ಇನ್ನೂ  2.44 ಕಿ.ಮೀ ಉದ್ದದ ಸೇತುವೆಯ  ಒಟ್ಟು ವೆಚ್ಚ 423 ಕೋಟಿ ರೂಪಾಯಿಯಾಗಿದೆ. ಫೆಬ್ರವರಿ 19, 2018 ರಂದು ಸೇತುವೆಗೆ ಶಂಕುಸ್ಥಾಪನೆ ನಡೆದಿತ್ತು. ಸೇತುವೆ ಆರಂಭಗೊಂಡ ನಂತರ ಲಾಂಚ್  ಸೌಲಭ್ಯ ರದ್ದಾಗುವ ಸಾಧ್ಯತೆ ಇದೆ. ಮತ್ತೊಂದಡೆ ಕ್ರೂಸ್ ಟೂರಿಸಂಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Share This Article