ಮನದ ಕಡಲು ಚಿತ್ರಕ್ಕೆ ಯಶ್‌ ಸಾಥ್‌  | ಟ್ರೈಲರ್‌ ರಿಲೀಸ್‌ ಯಾವಾಗ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 20, 2025

ಯುವನಟ ಸುಮಕ ನಟಿಸಿ ಯೋಗರಾಜ್‌ ಭಟ್‌ ನಿರ್ದೇಶಿರುವ ಮನದ ಕಡಲು ಚಿತ್ರದ ಟ್ರೈಲರ್‌ ಮಾರ್ಚ್‌ 23  ರಂದು ಬಿಡುಗೆಯಾಗಲಿದ್ದು, ಟ್ರೈಲರ್‌ನ್ನು ಕನ್ನಡದ ಖ್ಯಾತ ನಟರಾದ ರಾಕಿಂಗ್‌ ಸ್ಟಾರ್‌ ಯಶ್‌ ಬಿಡುಗಡೆ ಮಾಡಲಿದ್ದಾರೆ.

ಈ ಕುರಿತು ಡಿ ಬೀಟ್ಸ್‌ ಸಂಸ್ಥೆ ಟ್ವೇಟರ್‌ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದು, ಮಾರ್ಚ್‌ 23 ರಂದು ಲೂಲು ಮಾಲ್‌ನಲ್ಲಿ ಸಂಜೆ 6:15 ಕ್ಕೆ ಟ್ರೈಲರ್‌ ಬಿಡುಗಡೆಯಾಗಲಿದೆ. ಈ ಟ್ರೈಲರ್‌ನ್ನು ರಾಕಿಂಗ್‌ ಸ್ಟಾರ್‌ ಯಶ್‌ರವರು ಬಿಡುಗಡೆ ಮಾಡಲಿದ್ದಾರೆ ಎಂದು ಬರೆದುಕೊಂಡಿದೆ.

ಈಗಾಗಲೇ ಈ ಚಿತ್ರ ಟೀಸರ್‌ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದು, ಯೋಗರಾಜ್‌ ಭಟ್‌ ಹೇಳಿದಂತೆ ಈ ಚಿತ್ರ ಇನ್ನೊಂದು ಮುಂಗಾರು ಮಳೆ ಆಗುತ್ತಾ ಎಂಬುದನ್ನು  ಚಿತ್ರ ಬಿಡುಗಡೆಯಾದ ನಂತರವೇ ನೋಡಬೇಕಿದೆ. ಈ ಚಿತ್ರ ಮಾರ್ಚ್‌ 28 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.



ಈ ಚಿತ್ರಕ್ಕೆ ಮುಂಗಾರು ಮಳೆ ಚಿತ್ರದ ನಿರ್ಮಾಪಕರಾದ ಈ ಕೃಷ್ಣಪ್ಪ ಬಂಡವಾಳ ಹೂಡಿದ್ದು, ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

SUMMARY | The trailer of Manada Kadalu, directed by Yogaraj Bhat starring young actor Sumaka, will be released on March 23

KEYWORDS | Yogaraj Bhat, Manada Kadalu, Sumaka, trailer, 

Share This Article