ಬರೋಬ್ಬರಿ 50 ಕೋಟಿ ಕೊಟ್ಟು ನಾಯಿ ಖರೀದಿಸಿದ ಬೆಂಗಳೂರಿನ ವ್ಯಕ್ತಿ | ವಿಡಿಯೋ ವೈರಲ್‌

ಹಂಚಿಕೊಳ್ಳಿ
WhatsApp Facebook X Telegram
ಬರೋಬ್ಬರಿ 50 ಕೋಟಿ ಕೊಟ್ಟು ನಾಯಿ ಖರೀದಿಸಿದ ಬೆಂಗಳೂರಿನ ವ್ಯಕ್ತಿ | ವಿಡಿಯೋ ವೈರಲ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 20, 2025

ಮನುಷ್ಯರೆಂದ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕ್ರೇಜ್‌ ಇರುತ್ತದೆ. ಕೆಲವರಿಗೆ ದುಬಾರಿ ಬೆಲೆಯ ಕಾರ್‌ ಕೊಳ್ಳುವ ಕ್ರೇಜ್‌ ಇದ್ದರೆ, ಇನ್ನೂ ಕೆಲವರು ವಿಧವಿಧವಾದ ಬೈಕ್‌ ವಾಚ್‌ ಸೇರಿದಂತೆ ಇನ್ನಿತರೆ ವಸ್ತುಗಳನ್ನು ದುಬಾರಿ ಬೆಲೆಗಳನ್ನು ನೀಡಿ ಕೊಂಡುಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬರು ಬೆಂಗಳೂರಿನ ವ್ಯಕ್ತಿ ನಾಯಿ ಸಾಕುವುದರಲ್ಲಿ ವಿಪರೀತ ಕ್ರೇಜ್‌ನ್ನು ಹೊಂದಿದ್ದು, ಅವರು ಬರೋಬ್ಬರಿ 50 ಕೋಟಿ ಕೊಟ್ಟು ಕ್ಯಾಡಬಾಂಬ್‌ ಒಕಾಮಿ ಎಂಬ ನಾಯಿಯನ್ನು ಕೊಂಡುಕೊಂಡಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಂಗಳೂರಿನ ಸತೀಶ್‌ ಈ ನಾಯಿಯ ಮಾಲೀಕರಾಗಿದ್ದು, ಈ ನಾಯಿ ತೋಳ ಮತ್ತು ಕಕೇಶಿಯನ್ ಶೆಫರ್ಡ್ ನಡುವಿನ ಮಿಶ್ರತಳಿಯಾಗಿದೆ.  ಅಮೆರಿಕದಲ್ಲಿ ಜನಿಸಿದ ಈ ನಾಯಿಮರಿಗೆ  ಕೇವಲ 8 ತಿಂಗಳ ವಯಸ್ಸಾಗಿದ್ದು, ಸುಮಾರು 75 ಕೆಜಿ ತೂಕ ಮತ್ತು 30 ಇಂಚು ಎತ್ತರವನ್ನು ಹೊಂದಿದೆ. ಸತೀಶ್‌  ರವರು ಇದೇ ರೀತಿಯ ವಿಧವಿಧವಾದ  ಸುಮಾರು 150 ದುಬಾರಿ ತಳಿಯ ನಾಯಿಗಳನ್ನು ಹೊಂದಿದ್ದಾರೆಂದು ತಿಳಿದುಬಂದಿದೆ. 



 

SUMMARY | He bought a dog named Cadbomb Okami for Rs 50 crore. The video has now gone viral on social media.

KEYWORDS | Cadbomb Okami, 50 crore, social media, viral dog,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor