ಶಿವಮೊಗ್ಗ ಟ್ರೈನ್‌ ಟಿಕೆಟ್‌ಗಾಗಿ ಈ ಹೊಸ ಸೌಲಭ್ಯ ಬಳಸಿಕೊಳ್ಳಿ ಎಂದ ಬಿವೈ ರಾಘವೇಂದ್ರ | ಏನದು!?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 15, 2025 ‌‌ ‌‌

ಶಿವಮೊಗ್ಗದ ರೈಲ್ವೆ ಪ್ರಯಾಣಿಕರಿಗೆ ಹೊಸದೊಂದು ಸೌಲಭ್ಯ ಇದೀಗ ಲಭ್ಯವಾಗುತ್ತಿದೆ. ಇನ್ನು ಮುಂದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ  ಬರುವ ಪ್ರಮುಖ ಅಂಚೇಕಚೇರಿಗಳಲ್ಲಿ ರೈಲ್ವೆ ಟಿಕೆಟ್‌ ಲಭ್ಯವಾಗಲಿದೆ. ಈ ಬಗ್ಗೆ ಪ್ರಕಟಣೆಯನ್ನು ನೀಡಲಾಗಿದ್ದು, ಅದರ ವಿವರ ಹೀಗಿದೆ. 

ಅಂಚೆ ಕಚೇರಿಗಳಲ್ಲಿ ರೈಲ್ವೆ ಟಿಕೆಟ್

ತೀರ್ಥಹಳ್ಳಿ ಮತ್ತು ಉಡುಪಿ ಜಿಲ್ಲೆಯ ಕೊಲ್ಲೂರಿನ ಮುಖ್ಯ ಕಚೇರಿಗಳಲ್ಲಿ ರೈಲ್ವೆ ಟಿಕೆಟ್ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ಈ ಅವಕಾಶ ಬಳಸಿಕೊಳ್ಳಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ. 

ಸಾರ್ವಜನಿಕರ ಅನುಕೂಲ ಕ್ಕಾಗಿ ರೈಲ್ವೆ ಇಲಾಖೆಯು ಈ ಸೌಲಭ್ಯ ಒದಗಿಸಿದೆ. ಸಾರ್ವಜನಿಕರು ಆದರೆ, ಈ ಅವಕಾಶವನ್ನು ಬಳಸಿ ಕೊಳ್ಳದ ಹಿನ್ನೆಲೆಯಲ್ಲಿ ಇಲಾಖೆಯು ಈ ಸೌಲಭ್ಯವನ್ನು ರದ್ದು ಪಡಿಸಲು ಚಿಂತನೆ ನಡೆಸಿದೆ. ಇದಕ್ಕೆ ಅವಕಾಶವಾಗದಂತೆ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಸದುಪಯೋಗ ಮಾಡಿಕೊಳ್ಳು ವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Share This Article