ಶಿವಮೊಗ್ಗಕ್ಕೆ ಏರ್‌ಪೋರ್ಟ್‌ನಿಂದ ಕೇರಳಕ್ಕೆ ತೆರಳಿರುವ ಸಚಿವ ಮಧು ಬಂಗಾರಪ್ಪ! ಏನಿದು ವಿಶೇಷ ಪ್ರವಾಸ ತಿಳಿಯಿರಿ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 14, 2025 ‌‌ ‌‌

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶೇಷ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೇರಳ ರಾಜ್ಯಕ್ಕೆ ಹೊರಟಿದ್ದಾರೆ.  ನಾಳೆ ಶಿವಮೊಗ್ಗಕ್ಕೆ ಬರಲಿರುವ ಅವರು ಶಿವಮೊಗ್ಗದಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ವಿಶೇಷ ವಿಮಾನದಲ್ಲಿ ಕೇರಳಕ್ಕೆ ತೆರಳಲಿದ್ದಾರೆ. ಸಚಿವರ ಪ್ರವಾಸದ ವಿವರ ಹೀಗಿದೆ. 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ,  ದಿನಾಂಕ ಮಾರ್ಚ್‌ 15 ರಂದು  ಬೆಳಗ್ಗೆ ನಾಲ್ಕು ಗಂಟೆ ಬೆಂಗಳೂರಿನಿಂದ ಬೈ ರೋಡ್‌ ಹೊರಡಲಿದ್ದಾರೆ.  ಬೆಳಗ್ಗೆ 10 ಗಂಟೆಗೆ  ಬ್ಯಾಡಗು ತಾಲ್ಲೂಕು ಕೆರವಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ 12 ಗಂಟೆಗೆ ಹೊರಟು ಮಧ್ಯಾಹ್ನ ಮೂರು ಗಂಟೆಗೆ ಶಿವಮೊಗ್ಗಕ್ಕೆ ಬರಲಿದ್ದಾರೆ. 

ಮಧ್ಯಾಹ್ನ 3.30 ರ ಸುಮಾರಿಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನದ ಮೂಲಕ ಕೇರಳದ ಕಣ್ಣೂರಿನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿ ತಳ್ಳಿಚೇರಿಯಲ್ಲಿ ನಡೆಯಲಿರುವ ಶ್ರೀ ನಾರಾಯಣ ಗುರು ವಾರ್ಷಿಕ ಕಾರ್ಯಕ್ರಮ ಪಾಲ್ಗೊಳ್ಳಲಿದ್ದಾರೆ. ಬಳಿಕ ಅಲ್ಲಿಯೇ ವಾಸ್ತವ್ಯ ಹೂಡಲಿರುವ ಸಚಿವರು ಮರುದಿನ ಬೆಳಗ್ಗೆ ಏಳು ಗಂಟೆಗೆ ಕಣ್ಣೂರು ಏರ್‌ಪೋರ್ಟ್‌ನಿಂದ ಹೊರಟು, ಶಿವಮೊಗ್ಗಕ್ಕೆ 8.15 ಕ್ಕೆ ಬರಲಿದ್ದಾರೆ. ಇಲ್ಲಿಂದ ವಿಶೇಷವಿಮಾನದಲ್ಲಿ 8.45 ಕ್ಕೆ ಬೆಂಗಳೂರು ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. 

Share This Article