ಬಂಗಾರದ ರಹಸ್ಯ ಹೇಳಿದ ರನ್ಯಾರಾವ್‌? ಹೆಲಿಕಾಪ್ಟರ್‌ ಸ್ವಾಮೀಜಿಗೆ ರಾಹುದೆಸೆ!?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 14, 2025 ‌‌ ‌‌

ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲೀಂಗ್‌ ಕೇಸ್‌ ನಲ್ಲಿ ಮೂರು ತನಿಖಾ ಸಂಸ್ಥೆಗಳು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸ್ತಿವೆ. ಈ ನಡುವೆ ರನ್ಯಾರಾವ್‌ ವಿಚಾರವಣೆ ವೇಳೆ ಹೇಳಿದ್ದಾರೆ ಎನ್ನಲಾದ ಹೇಳಿಕೆಗಳು ಬಯಲಾಗಿದೆ. 

ಡಿಆರ್‌ಐ ವಿಚಾರಣೆ ವೇಳೆ ರನ್ಯಾರಾವ್‌, ಪ್ರಕರಣದಲ್ಲಿ  ಅಪರಿಚಿತ ವ್ಯಕ್ತಿ ದುಬೈ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಟರ್ಮಿನಲ್‌ 3 ನ ಗೇಟ್‌ ಎ ನಲ್ಲಿ ನೀಡಲಾಗುವ ಚಿನ್ನವನ್ನು ಬೆಂಗಳೂರಿಗೆ ರವಾನಿಸುವಂತೆ ಸೂಚಿಸಲಾಗಿತ್ತು. ಅದರಂತೆ ಅಮೆರಿಕನ್‌ ಆಫ್ರಿಕನ್‌ ಸ್ಲ್ಯಾಂಗ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯು ಎರಡು ಬಾಕ್ಸ್‌ನಲ್ಲಿ ಚಿನ್ನ ನೀಡಿದ್ದು, ಬೆಂಗಳೂರು ಏರ್‌ಪೋರ್ಟ್‌ನಿಂದ ಹೊರಕ್ಕೆ ಇರುವ ಸರ್ವಿಸ್‌ ರಸ್ತೆಯಲ್ಲಿ ಸಿಗುವ ಆಟೋವೊಂದಕ್ಕೆ ಈ ಚಿನ್ನವನ್ನು ರವಾನೆ ಮಾಡುವಂತೆ ತಿಳಿಸಿದ್ದ ಎಂದು ರನ್ಯಾ ವಿಚಾರಣೆ ವೇಳೆ ತಿಳಿಸಿದ್ದಾರೆ. 

ಇದೇ ಮೊದಲ ಸಲ ಗೋಲ್ಡ್‌ ಸ್ಮಗ್ಲೀಂಗ್‌ ಮಾಡಿದ್ದು, ಮೊದಲೇ ಕತ್ತರಿಸಿದ ಬ್ಯಾಂಡೇಜ್‌ ಪೀಸ್‌ಗಳನ್ನು ಇಟ್ಟುಕೊಂಡು ಟಾಯ್ಲೆಟ್‌ನಲ್ಲಿ ಚಿನ್ನವನ್ನು ದೇಹದ ವಿವಿದೆಡೆ ಅಂಟಿಸಿಕೊಂಡಿದ್ದಾಗಿ ರನ್ಯಾರಾವ್‌ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾಗಿ ವರದಿಯಾಗಿದೆ.

ಇನ್ನೊಂದೆಡೆ ಇದೇ ಪ್ರಕರಣದಲ್ಲಿ  ಪ್ರಭಾವಿ ಸಚಿವರೊಬ್ಬರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ, ಸದ್ಯ ದುಬೈನಲ್ಲಿ ನೆಲಸಿರುವ ಹೆಲಿಕಾಪ್ಟರ್ ಜ್ಯೋತಿಷಿಯೊಬ್ಬರ ಹೆಸರು ಕೇಳಿಬರುತ್ತಿದೆ.ಈ ಸಂಬಂಧ ತನಿಖಾ ಸಂಸ್ಥೆಗಳು ಈಗಾಗಲೇ ತನಿಖೆ ನಡೆಸ್ತಿವೆ ಎಂಬುದು ಖಾತರಿಯಾಗಿದೆ. ಜ್ಯೋತಿಷಿಗೆ ಸೇರಿದ ಬ್ಯಾಂಕ್‌ ಖಾತೆ ವಹಿವಾಟುಗಳು, ವಿದೇಶಿ ಪ್ರಯಾಣದ ಮಾಹಿತಿ ಮತ್ತು ಕರೆ ವಿವರಗಳನ್ನು ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. 

Share This Article