SHIVAMOGGA| MALENADUTODAY NEWS | ಮಲೆನಾಡು ಟುಡೆ Mar 13, 2025
ನಟಿ ರನ್ಯ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ರಾಜ್ಯ ಸರ್ಕಾರಕ್ಕೆ ದೊಡ್ಡ ಶಾಕ್ ಕೊಡುವ ನಿರೀಕ್ಷೆಯಿದೆ. ಇದೀಗ ಪ್ರಕರಣದಲ್ಲಿ ಇಡಿ ಕೂಡ ಎಂಟ್ರಿಯಾಗಿದ್ದು, ಇವತ್ತು ನಟಿ ರನ್ಯಾ ರಾವ್ ಮನೆ, ಉದ್ಯಮಿ ತರುಣ್ ರಾಜ್, ಆರ್.ಟಿ.ನಗರದಲ್ಲಿ ಜ್ಯೋತಿಷ್ಯ ಕೇಂದ್ರ ನಡೆಸುತ್ತಿರುವ ಸ್ವಾಮೀಜಿ ಮತ್ತು ಕೆಲ ಪೊಲೀಸ್ ಅಧಿಕಾರಿಗಳ ಮನೆಗಳಲ್ಲಿ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಮನೆಯಲ್ಲಿ ಪರಿಶೀಲನೆ ನಡೆಸಿದೆ.
ಈ ಮೂಲದ ಡಿಆರ್ಐ Directorate of Revenue Intelligence, ಸಿಬಿಐ Central Bureau of Investigation, ಇಡಿ Enforcement Directorate ಮೂರು ಸಂಸ್ಥೆಗಳು ತನಿಖೆಗೆ ಇಳಿದಿದ್ದು, ಸದ್ಯದಲ್ಲಿಯೇ ಪ್ರಕರಣದಲ್ಲಿ ಪ್ರಮುಖರು ಅರೆಸ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮುಖ್ಯವಾಗಿ ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಏರ್ಫೋರ್ಟ್ನಲ್ಲಿ ಸೆಕ್ಯುರಿಟಿ ವೈಫಲ್ಯ ಆಗಿರುವುದು ಗಮನಾರ್ಹ ಸಂಗತಿಯಾಗಿದ್ದು ವಿವಿಐಪಿ ಪ್ರೋಟೋಕಾಲ್ನಲ್ಲಿ ಭದ್ರತಾ ತಪಾಸಣೆಯಿಂದ ಫ್ರೀ ಬಿಟ್ಟಿರುವುದು ರಾಷ್ಟ್ರೀಯ ಭದ್ರತೆಗೂ ದಕ್ಕೆ ತರಬಹುದಾದ ಆತಂಕವನ್ನು ಮೂಡಿಸಿದೆ. ಚಿನ್ನದ ಸಾಗಾಣಿಕೆ ಸಾಧ್ಯವಾದರೆ, ಏರ್ಪೋರ್ಟ್ನಿಂದ ಆತಂಕಕಾರಿ ವಸ್ತುಗಳ ಸಾಗಣೆಯು ಸಾಧ್ಯವಾಗಬಹುದಾದ ಆತಂಕ ಮತ್ತು ಪ್ರಶ್ನೆಯನ್ನು ಮೂಡಿಸಿದೆ. ಅಂತಾರಾಷ್ಟ್ರೀಯ ವಿಮಾನಗಳ ಹೈಜಾಕ್ ಪ್ರಕರಣಗಳು ಇಂತಹ ವೈಫಲ್ಯಗಳಿಂದ ಘಟಿಸಿರುವ ಉದಾಹರಣೆಗಳು ಈ ಹಿಂದಿವೆ. ಈ ಕಾರಣಕ್ಕೆ ಪ್ರಕರಣವನ್ನು ಮೂರು ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿದೆ.
ರಾಜ್ಯಸರ್ಕಾರಕ್ಕೆ ಆತಂಕ
ರಾಜ್ಯ ಮಾಧ್ಯಮಗಳ ಪ್ರಕಾರ, ವಿವಿಐಪಿ ಪ್ರೋಟೊಕಾಲ್ನಲ್ಲಿ ರನ್ಯಾರಾವ್ರನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ ನಿರ್ಗಮನ ದ್ವಾರದಲ್ಲಿ ತಪಾಸಣೆಯಿಲ್ಲದೆ ಪಾಸ್ ಮಾಡಿಸಿದ್ದರ ಹಿಂದೆ ಪ್ರಭಾವಿ ಸಚಿವರೊಬ್ಬರ ಹೆಸರು ಕೇಳಿಬರುತ್ತಿದೆ. ಈ ಸಂಬಂಧ ಈಗಾಗಲೇ ಸಿಎಂ ಸಹ ಆ ಸಚಿವರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇಬ್ಬರು ಸಚಿವರು, ಓರ್ವ ಸ್ವಾಮೀಜಿ ಹಾಗೂ ಮತ್ತೊಬ್ಬ ನಟನ ಹೆಸರು ರನ್ಯಾರಾವ್ ವಿಚಾರದಲ್ಲಿ ಹರಿದಾಡತ್ತಿದ್ದು, ವಿಷಯ ನ್ಯಾಷನಲ್ ಇಶ್ಯು ಆಗುತ್ತಿದೆ
ಸದ್ಯದ ವರದಿ ಪ್ರಕಾರ, ಅಂತರ ರಾಷ್ಟ್ರೀಯ ಟರ್ಮಿನಲ್ ನಿಂದ ಹೊರಬರುವಾಗ ರನ್ಯಾ ರಾವ್ ಅವರನ್ನು, ತಪಾಸಣೆಗೆ ಒಳಪಡಿಸುವುದನ್ನು ತಪ್ಪಿಸುವಲ್ಲಿ ನೆರವು ನೀಡಿದ್ದ ಮೂವರು ಸಿಬ್ಬಂದಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದೀಗ ಹೀಗೆ ಮಾಡುವಂತೆ ಸೂಚನೆ ನೀಡಿದವರು ಯಾರು ಎಂಬುದನ್ನ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸ್ತಿದ್ದಾರೆ.
ವಿವಿಐಪಿ ಚೆಕ್ಔಟ್ ಆತಂಕ
ಕೇಂಧ್ರ ವಿಮಾನಯಾನ ಸಚಿವಾಲಯದ ಮುಖ್ಯ ಕಂಟ್ರೋಲ್ನಲ್ಲಿರುವ ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದ ಭದ್ರತಾ ತಪಾಸಣೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ವಹಿಸಲಾಗಿರುತ್ತದೆ. ಟಿಕೆಟ್ನಲ್ಲಿ ಹೆಸರು ಹಾಗೂ ಐಡಿ ಕಾರ್ಡ್ನಲ್ಲಿರುವ ಹೆಸರಿನಲ್ಲಿ ಸಣ್ಣ ಸ್ಪೆಲ್ಲಿಂಗ್ ವತ್ಯಾಸವಾದರೂ ನಿಲ್ದಾಣದೊಳಗೆ ಪ್ರವೇಶ ನಿರಾಕರಿಸುವ ಭದ್ರತಾ ಪಡೆ, ಮೈಮೇಲಿನ ಸಣ್ಣ ವಸ್ತುವನ್ನು ಬಿಡದೇ ತಪಾಸಣೆ ನಡೆಸುತ್ತದೆ. ಇನ್ನೂ ಅಂತಾರಾಷ್ಟ್ರೀಯ ಪ್ರಯಾಣದ ವೇಳೆ ಆಗಮನ ಹಾಗೂ ನಿರ್ಗಮನದ ಎರಡು ಸಂದರ್ಭದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ. ಈ ವ್ಯವಸ್ಥೆಯಲ್ಲಿ ವಿವಿಐಪಿ ಪ್ರೋಟೋಕಾಲ್ ಎಂಬ ಸಿಸ್ಟಮ್ ಇದೆ. ಇದರ ಮೂಲಕ ಆಯ್ದ ವ್ಯಕ್ತಿಗಳಿಗೆ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಿಂದ ವಿನಾಯಿತಿ ಸಿಗುತ್ತದೆ.
ರೂಲ್ಸ್ನ ಪ್ರಕಾರ, ರಾಜತಾಂತ್ರಿಕರು, ವಿವಿಐಪಿ ಹಾಗೂ ಶಿಷ್ಟಾಚಾರದ ಸವಲತ್ತು ಹೊಂದಿರುವವರಿಗೆ ಇಂತಹ ಸವಲತ್ತು ಸಿಗುತ್ತದೆ. ಮತ್ತು ಈ ಬಗ್ಗೆ ಮೊದಲೇ ಸೂಚನೆ ನೀಡಲಾಗಿರುತ್ತದೆ. ಸದ್ಯ ರನ್ಯಾರಾವ್ ಕೂಡ ಇಂತಹುದ್ದೆ ಸೂಚನೆಯಡಿ ಯಲ್ಲಿ ವಿವಿಐಪಿ ಖೋಟಾದ ಮೂಲಕ ಕಸ್ಟಮ್ಸ್ ತಪಾಸಣೆಯಿಲ್ಲದೆ ಬೆಂಗಳೂರು ಏರ್ಫೋರ್ಟ್ನಿಂದ ಹಲವು ಸಲ ಓಡಾಟ ನಡೆಸಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ನಟಿಯೊಬ್ಬಳಿಗೆ ಅತಿಗಣ್ಯ ವ್ಯಕ್ತಿಯ ಪ್ರೋಟೋಕಾಲ್ ನೀಡಿದವರು ಯಾರು? ರಾಜತಾಂತ್ರಿಕರಿಗೆ ಸಿಗಬೇಕಾದ ಸೌಲಭ್ಯವನ್ನು ಸುಲಭ ಹಾಗೂ ಸಲೀಸಾಗಿ ನಟಿಗೆ ಒದಿಗಿಸಿದವರು ಯಾರು? ಎಂಬುದೇ ಇದೀಗ ಉತ್ತರ ಕಂಡುಕೊಳ್ಳಲೇ ಬೇಕಾದ ಪ್ರಶ್ನೆ!. ಈ ನಿಟ್ಟಿನಲ್ಲಿ ರಾಜಕಾರಣಿಗಳ ಮೌನ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಯಾರಿಗೆ ಬೇಕಾದಲ್ಲಿ ಪ್ರೋಟೋಕಾಲ್ ನೀಡುವುದಾದರೆ ರಾಷ್ಟ್ರೀಯ ಭದ್ರತೆಗೆ ದಕ್ಕೆ ಆದಂತಾಗುವುದಿಲ್ಲವೆ? ಈ ನಿಟ್ಟಿನಲ್ಲಿ ಕಾನೂನು ಬದ್ಧ ವ್ಯವಸ್ಥೆಯನ್ನು ಕಾನೂನು ಜಾರಿ ಮಾಡುವವರೆ ಉಲ್ಲಂಘಿಸಿದರೆ? ಇದು ಜನರ ನಂಬಿಕೆಯ ದ್ರೋಹದ ಪ್ರಶ್ನೆಯಾಗುವುದಿಲ್ಲವೆ? ರಾಷ್ಟ್ರದ್ರೋಹ ಆಗುವುದಿಲ್ಲವೆ?
