SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 4, 2025
ಚಂದ್ರಗುತ್ತಿ ಶ್ರೀ ರೇಣುಕಮ್ಮ ದೇವಿ ಜಾತ್ರೆ ಬೆತ್ತಲೆ ಸೇವೆ ನಿಷೇಧ ಸೇರದಂತೆ ಟಾಪ್ 5 ಚಟ್ ಪಟ್ ಸುದ್ದಿ
ಶಿವಮೊಗ್ಗ| ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಮ್ಮ ದೇವಿ ಜಾತ್ರೆಯು ಮಾರ್ಚ್ 05 ರಿಂದ 10 ರವರೆಗೆ ನಡೆಯಲಿದ್ದು, ವರದಾ ನದಿಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ದೇವರಿಗೆ ಮುಡಿಕೊಡುವುದು, ಪಡ್ಲಿಗಿ ತುಂಬಿಸುವುದು ಮತ್ತು “ಬೆತ್ತಲೆ ಸೇವೆ” ಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಆದೇಶ ಹೊರಡಿಸಿದ್ದಾರೆ.
ಈ ನಿಷೇಧಾಜ್ಞೆಯು ಶ್ರೀರೇಣುಕಮ್ಮ ದೇವಿಯ ರಥೋತ್ಸವ ಹಾಗೂ ಇತರೆ ಪೂಜಾ ಕಾರ್ಯಗಳು ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸುದ್ದಿ :02 ಸಾಹಿತಿ ಎಂ.ಸತ್ಯನಾರಾಯಣ ಗೆ ನಾ ಡಿಸೋಜ ಸಾಹಿತ್ಯ ಪ್ರಶಸ್ತಿ
ಶಿವಮೊಗ್ಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಆನ್ವೇಷಣೆ ಸಾಂಸ್ಕ್ರತಿಕ ಅಕಾಡೆಮಿ(ರಿ) ಇವರ ವತಿಯಿಂದ ಸಾಗರದ ಹಿರಿಯ ಕವಿ, ಲೇಖಕ ಸಾಹಿತಿ, ಎಂ.ಸತ್ಯನಾರಾಯಣ ಸಾಗರ ಇವರ ಕಳೆದ 40 ವರ್ಷಗಳ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಇವರಿಗೆ ರಾಜ್ಯಮಟ್ಟದ ನಾ ಡಿಸೋಜ ಸಾಹಿತ್ಯ ಪ್ರಶಸ್ತಿ ಯನ್ನು ನೀಡಿ ಸನ್ಮಾನಿಸಲಾಯಿತು.
ಸುದ್ದಿ : 03 ಕರವೇ ಕನ್ನಡಸೇನೆ ಜಿಲ್ಲಾಧ್ಯಕ್ಷರಾಗಿ ಪರಮೇಶ್ವರಪ್ಪ ಜಂಬೂರು ನೇಮಕ
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಸೇನೆ (ರಿ) ಜಿಲ್ಲಾಧ್ಯಕ್ಷರಾಗಿ ಡಿ.ಪರಮೇಶ್ವರಪ್ಪ ಜಂಬೂರುರವರನ್ನು ರಾಜ್ಯಾಧ್ಯಕ್ಷ ಅರಣ್ ಕುಮಾರ್ ನೇಮಕ ಮಾಡಿದ್ದಾರೆ. ನಾಡು ನುಡಿ ಗಡಿ ರಕ್ಷಣೆ ಹಾಗೂ ಸಂಘಟನೆಯನ್ನು ಬಲಪಡಿಸಲು ಸಂಪೂರ್ಣ ಅಧಿಕಾರವನ್ನು ನೀಡಲಾಗಿದ್ದು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಜಿಲ್ಲಾ ಕಛೇರಿಗೆ ನೀಡಬೇಕು ಮತ್ತು ಆದೇಶದ ಮೂಲಕವೇ ಕಾರ್ಯ ನಿರ್ವಹಿಸಬೇಕು. ನಿಮಗೆ ನೀಡಿರುವ ಅಧಿಕಾರವನ್ನು ಯಾವುದೇ ಸಮಯದಲ್ಲಿ ಹಿಂತೆಗೆದುಕೊಳ್ಳಬಹುದು, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಸೇನೆ ಬಲಿಷ್ಠಗೊಳಿಸಲು ತಾಯಿ ಭುವನೇಶ್ವರಿಯ ಸೇವೆಯನ್ನು ಮಾಡಲು ಸದಾ ಸಿದ್ಧನಾಗಿರಬೇಕು ಎಂದು ರಾಜ್ಯಾಧ್ಯಕ್ಷರು ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.
ಸುದ್ದಿ : 04 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ
ಕರ್ನಾಟಕ ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ ನಿ., ಶಿಕಾರಿಪುರ. ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘ ನಿ., ಶಿಕಾರಿಪುರ ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘ ನಿ., ಶಿಕಾರಿಪುರ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕಾರಿಪುರ. ಕುಶ್ಚಿತ ಮಿನರಲ್ಸ್ ಶಿಕಾರಿಪುರ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 08 ರ ಬೆಳಿಗ್ಗೆ 10 ಗಂಟೆಗೆ ಶಿಕಾರಿಪುರ ಸಾಂಸ್ಕೃತಿಕ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾನಪದ ಕಲಾಮೇಳ, ಮಹಿಳಾ ಸಾಧಕರಿಗೆ ಸನ್ಮಾನ, ಮಹಿಳಾ ಸಹಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಮತ್ತು ಪುಪ್ಪಗಿರಿ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶ ಕಾರ್ಯಕ್ರಮವಮ್ನ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಸುದ್ದಿ 05 : ಮಾ 5 ರಂದು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ 38 ನೇ ಘಟಿಕೋತ್ಸವ
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ 38 ನೇ ಘಟಿಕೋತ್ಸವ ಮಾರ್ಚ್ 05 ರಂದು ದೆಹಲಿಯಲ್ಲಿ ನಡೆಯಲಿದ್ದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭಾಗವಹಿಸಲಿದ್ದಾರೆ. ಅದರಂತೆ ಬೆಂಗಳೂರಿನ ಪ್ರಾದೇಶಿಕ ಕೇಂದ್ರದಲ್ಲೂ 38 ನೇ ಘಟಿಕೋತ್ಸವ ಸಮಾರಂಭ ಮಾರ್ಚ್ 05 ರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಪ್ರೋ.ಎಂ.ವೆಂಕಟೇಶ್ವರಲು ಭಾಗವಹಿಸಲಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನ ಘಟಿಕೋತ್ಸವದಲ್ಲಿ ಭಾಗವಹಿಸುವಂತೆ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ ಶಿವಮೊಗ್ಗದ ಸಂಯೋಜನಾಧಿಕಾರಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
SUMMARY | Chandragutti Sri Renukamma Devi Fair Ban On Naked Service
KEYWORDS |Renukamma, Chandragutti, shivamogga,