SHIVAMOGGA| MALENADUTODAY NEWS | ಮಲೆನಾಡು ಟುಡೆ Mar 4, 2025
ಶಿವಮೊಗ್ಗದ ಪ್ರಾಣಿಪ್ರಿಯರಿಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಪ್ರವಾಸಿಗರಿಗಾಗಿ ಮಂಗಳವಾರದ ರಜೆಗಳನ್ನು ಮುಂದೂಡುತ್ತಿದ್ದ ಸಿಂಹಧಾಮದ ಆಡಳಿತ ವ್ಯವಸ್ಥೆ ಇದೀಗ ಪ್ರವಾಸಿಗರಿಗಾಗಿ ಇನ್ನೊಂದು ವ್ಯವಸ್ಥೆಯನ್ನು ಕಲ್ಪಿಸಿದೆ.
ಮೃಗಾಲಯಕ್ಕೆ ಬರುವ ಪ್ರವಾಸಿಗೃಿಗಾಗಿ, 3ಡಿ ಥಿಯೇಟರ್ ಅನುಭವ ನೀಡುವ 3ಡಿ ವರ್ಚ್ಯುವಲ್ ಝೂ ಅನ್ನು ಜಾರಿಗೊಳಿಸಿದೆ. ಇಲ್ಲಿನ ಹಳೆಯ ಬಸ್‌ವೊಂದನ್ನು ಝೂವಿಸ್ಟಾ ಯೋಜನೆ ಅಡಿ ಮಾರ್ಪಾಡು ಈ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದಾಗಿ ಬಸ್‌ನಲ್ಲಿ ಕುಳಿತು ಇಡೀ ಮೃಗಾಲಯದ ಪ್ರಾಣಿಗಳ ಚಿತ್ರಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಕಾಡು ಪ್ರಾಣಿಗಳನ್ನು ತೀರಾ ಸಮೀಪದಿಂದ ನೋಡಲು ಸಾಧ್ಯವಾಗುವಂತಹ ವಿಆರ್ ಸೃಷ್ಟಿಯನ್ನು ಈ ವಾಹನದಲ್ಲಿ ಕಲ್ಪಿಸಲಾಗಿದೆ. 15 ವರ್ಷಕ್ಕಿಂತ ಹಳೆಯದಾದ ಸಫಾರಿ ವಾಹನವನ್ನು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಮಾರ್ಪಾಡು ಮಾಡಿ ವರ್ಚ್ಯುವಲ್ ರಿಯಾಲಿಟಿಯ ಥಿಯೇಟರ್ ಮಾದರಿಯಲ್ಲಿ ರೂಪುಗೊಳಿಸಲಾಗಿದೆ.