ಜಿಂಕ್‌ಲೈನ್‌ ರೋಡ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಶಾಕ್‌ | ಭದ್ರಾವತಿಯಲ್ಲಿ ಮತ್ತೊಂದು ಕ್ರೈಂ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 24, 2025 ‌‌ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ಬೂಪಾಸ್‌ ಬಳಿ ಬೈಕ್‌ನಲ್ಲಿ ಗಂಡನ ಜೊತೆ ತೆರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕದಿಯಲಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತರು ಮಹಿಳೆಯ ಕುತ್ತಿಗೆಗೆ ಕೈ ಹಾಕಿ ತಾಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. 

- Advertisement -

ಭದ್ರಾವತಿ ಅಪರಾಧ ಸುದ್ದಿ

ಭದ್ರಾವತಿ ತಾಲ್ಲೂಕಿನ ಹಿರಿಯೂರು ಗ್ರಾಮದ ಹನುಮಂತೇಗೌಡ ಅವರು ತಮ್ಮ ಪತ್ನಿ ಭಾಗ್ಯಮ್ಮರವರ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದರು. ಇವರಿಬ್ಬರುಜಿಂಕ್‌ಲೈನ್ ಮಾದೇಶ್ವರ ದೇವಸ್ಥಾನ ರಸ್ತೆ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 

ಇವರಿದ್ದ ಬೈಕ್‌ನ್ನು ಹಿಂಬಾಲಿಸುತ್ತ ಹಿಂದಿನಿಂದ ಬಂದ ಬೈಕ್‌ನಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಭಾಗ್ಯಮ್ಮ ಅವರ ಕುತ್ತಿಗೆಗೆ ಕೈ ಹಾಕಿ 35 ಗ್ರಾಂನ ₹1.75 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಕಸಿದು ಪರಾರಿಯಾಗಿದ್ದಾರೆ.ಸದ್ಯ ಘಟನೆಯ ಸಂಬಂಧ  ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

 

SUMMARY | bhadravati ,china snatching , crime in shivamogga , bikers ,

 

KEY WORDS |‌ bhadravati ,china snatching , crime in shivamogga , bikers ,

 

Share This Article
Leave a Comment

Leave a Reply

Your email address will not be published. Required fields are marked *