KSRTC ಬಸ್‌ನಲ್ಲಿ ಪುರುಷರಿಗೆ ಮೀಸಲಾದ ಸೀಟಿನಲ್ಲಿ ಪುರುಷರೇ ಕೂರಬೇಕು! ವೈರಲ್‌ ಆಗುತ್ತಿದೆ ಈ ಆದೇಶ | ಎಲ್ಲಿದು ಗೊತ್ತಾ?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌ 

ಸಾಮಾನ್ಯವಾಗಿ ಬಸ್‌ಗಳಲ್ಲಿ ಲೇಡಿಸ್‌ ಸೀಟ್‌ನಲ್ಲಿ ಕುಳಿತರೇ ಎಬ್ಬಿಸ್ತಾರೆ. ಇದು ಎಲ್ಲರಿಗೂ ಗೊತ್ತಿರೋದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಇಲ್ಲೊಂದು ಆದೇಶ ಹೊರಬಿದಿದ್ದು, ಆ ಆದೇಶದ ಪ್ರಕಾರ, ಬಸ್‌ಗಳಲ್ಲಿ ಗಂಡಸರ ಸೀಟ್‌ನಲ್ಲಿ ಹೆಂಗಸರು ಕೂರುವಂತಿಲ್ಲ. 

- Advertisement -

ಹೌದು, ಮೈಸೂರಿನ ಈ ಸುದ್ದಿ ಇದೀಗ ಪುರುಷ ವಲಯದಲ್ಲಿ ಎಲ್ಲೆಡೆ ವೈರಲ್‌ ಆಗಿದೆ. ಮೈಸೂರು ಸಿಟಿ ಬಸ್ಸಲ್ಲಿ ಪುರುಷರ ಸೀಟಲ್ಲಿ ಮಹಿಳೆಯರು ಕೂರುವಂತಿಲ್ಲ ಎಂದು ಕೆಎಸ್‌ಆರ್‌ಟಿಸಿ ಮೈಸೂರು ನಗರದ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ. 

ಪುರುಷರಿಗೆ ಮೀಸಲಾದ ಸೀಟುಗಳಲ್ಲಿ ಪುರುಷರೇ ಕೂರಲು ಅವಕಾಶ ಕಲ್ಪಿಸಿ ಕ್ರಮ ಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಮೈಸೂರು ನಗರದ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಗರದ ಎಲ್ಲಾ ಘಟಕಗಳ ವ್ಯವಸ್ಥಾಪಕರಿಗೆ ಈ ಸೂಚನೆಯನ್ನು ನೀಡಲಾಗಿದ್ದು, ಸೂಚನೆಯನ್ನು ಅನುಷ್ಟಾನಗೊಳಿಸುವಂತೆ ತಿಳಿಸಿದ್ದಾರೆ. 

ಅಸಲಿಗೆ ಮೈಸೂರು ನಗರ ಸಾರಿಗೆಯಲ್ಲಿ ಪುರುಷರು ಕುಳಿತು ಕೊಳ್ಳಲು ಸೀಟುಗಳೇ ಸಿಗುತ್ತಿಲ್ಲವೆಂದು ವಿಷ್ಣುವರ್ಧನ ಎಂಬುವರು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ. ಸದ್ಯ ಈ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ. 

SUMMARY |  Instructions to give seats to men in KSRTC buses, Mysore

KEY WORDS |‌ Instructions to give seats to men in KSRTC buses, Mysore

Share This Article
Leave a Comment

Leave a Reply

Your email address will not be published. Required fields are marked *