SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 21, 2025
ಶಿವಮೊಗ್ಗ | ಸಂವಿಧಾನವನ್ನು ರಕ್ಷಣೆ ಮಾಡುವ ಸಲುವಾಗಿ ಇದೇ ಫೆಬ್ರವರಿ 22 ರಂದು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರ ವಿಭಾಗಗಳ ವತಿಯಿಂದ ಸಂವಿದಾನ ರಕ್ಷಕ್ ಅಭಿಯಾನ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11:30 ಕ್ಕೆ ಹಮ್ಮಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್ ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಹಿಂದೆ ನಾವು ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಜೈ ಭಾಪು ಜೈ ಬೀಮ್ ಜೈ ಸಂವಿಧಾನ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು.
ಸಂವಿಧಾನದ ರಕ್ಷಣೆಯೂ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಇದೀಗ ಸಂವಿಧಾನ್ ರಕ್ಷಕ್ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇದರ ಮುಖ್ಯ ಉದ್ದೇಶ ಅಂಬೇಡ್ಕರ್ ಜಾರಿಗೆ ತಂದ ಸಂವಿಧಾನ ದೇಶದಲ್ಲಿ ಉಳಿಯಬೇಕು ಎಂಬುದಾಗಿದೆ. ಏಕೆಂದರೆ ಕೇಂದ್ರದ ಗೃಹ ಸಚಿವರಾದ ಅಮೀತ್ ಶಾ ರವರು ಈ ಹಿಂದೆ ಅಂಬೇಡ್ಕರ್ ರವರನ್ನು ಅವಮಾನಿಸಿದ್ದರು. ಅದು ಹೀಗೆ ಹೀಗೆ ಮುಂದುವರೆದರೆ ಮುಂದಿನ ದಿನ ನಮಗೆ ಸಂವಿಧಾನ ರಕ್ಷಣೆ ಮಾಡುವುದು ಬಹುದೊಡ್ಡ ಸವಾಲಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮ ಈ ವರ್ಷವಿಡಿ ದೇಶದಾದ್ಯಂತ ನಡೆಯುತ್ತದೆ ಎಂದರು.
ಕಾರ್ಯಕ್ರಮದ ವಿವಿರ
ಈ ಕಾರ್ಯಕ್ರಮವನ್ನು ಮೆರವಣಿಗೆ ಮೂಲಕ ಹಮ್ಮಿಕೊಂಡಿದ್ದೇವೆ. ಮೊದಲು ಬೆಳಿಗ್ಗೆ 9:30 ಕ್ಕೆ ಗಾಂಧಿ ಪಾರ್ಕ್‌ನಲ್ಲಿರುವ ಗಾಂದೀಜಿಯ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ. ನಂತರ ಮಹಾನಗರ ಪಾಲಿಕೆಯ ಮುಂಬಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತೇವೆ. ಅಲ್ಲಿಂದ ನಮ್ಮ ಮೆರವಣಿಗೆ ಶಿವಪ್ಪನಾಯಕ ವೃತ್ತ ಅಮೀರ್ ಅಹಮದ್ ಸರ್ಕಲ್ ಹಾಗೂ ಗೋಪಿ ವೃತ್ತದ ಮೂಲಕ ಸಾಗುತ್ತದೆ. ನಂತರ 11: 30 ಕ್ಕೆ ನಗರದ ಅಂಬೇಡ್ಕರ್ ಭವನವನ್ನು ತಲುಪಿ ಅಲ್ಲಿ ಕಾರ್ಯಕ್ರಮವನ್ನು ಆರಂಭ ಮಾಡುತ್ತೇವೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಣ ಸಚಿವರಾದ ಎಸ್ ಮಧು ಬಂಗಾರಪ್ಪನವರು ನೆರವೇರಿಸಲಿದ್ದಾರೆ. ಹಾಗೆಯೇ ನಮ್ಮ ಪಕ್ಷದ ಅನೇಕ ನಾಯಕರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ. ಕಾರ್ಯಕರ್ತರು ಅತಿ ಹೆಚ್ಚಿನ ಸಂಖೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಿಧಾನ ರಕ್ಷಣೆಯ ಕೈ ಜೋಡಿಸಿ ಎಂದು ಕೋರಿದರು.
SUMMARY | Congress district president R Prasanna Kumar said the Samvidhan Rakshak Abhiyan programme will be held at Ambedkar Bhavan at 11.30 am.
KEYWORDS | Congress, R Prasanna Kumar, Samvidhan Rakshak Abhiyan, Ambedkar Bhavan,