SHIVAMOGGA | MALENADUTODAY NEWS | ಮಲೆನಾಡು ಟುಡೆ Feb 17, 2025
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಸಚಿವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇದೇ ಸಂದರ್ಭದಲ್ಲಿ ಉಂಬ್ಳೆಬೈಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ಅಲ್ಲಿನ ಶಿಕ್ಷಕರು ವಿಮಾನ ನಿಲ್ದಾಣವನ್ನು ಹಾಗೂ ವಿಮಾನದ ಹಾರಾಟವನ್ನು ತೋರಿಸುವ ಸಲುವಾಗಿ ಪ್ರವಾಸ ಕರೆದುಕೊಂಡು ಬಂದಿದ್ದರು.
ಅನಿರೀಕ್ಷಿತವಾಗಿ ಸಿಕ್ಕ ಸರ್ಕಾರಿ ಶಾಲೆಯ ಮಕ್ಕಳನ್ನು ಮಾತನಾಡಿಸಿದ ಮಧು ಬಂಗಾರಪ್ಪ ಅವರ ಜೊತೆಗೆ ಫೋಟೋ ತೆಗೆಸಿಕೊಂಡರು. ಅಲ್ಲದೆ ಪ್ರತಿ ಮಕ್ಕಳಿಗೂ ಹಸ್ತಾ ಲಾಘವ ನೀಡಿ, ಶಾಲೆಯಲ್ಲಿ ಸಿಗುವ ಸೌಕರ್ಯಗಳ ಬಗ್ಗೆ ವಿಚಾರಿಸಿದರು. ಊಟ ಮಾಡಿದ್ರಾ? ಮೊಟ್ಟೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಮಧು ಬಂಗಾರಪ್ಪರಿಗೆ ಮಕ್ಕಳು ಸಹ ಹು ಸರ್ ಎಂದು ಉತ್ತರಿಸಿದರು.
ಸಚಿವರ ಪ್ರಶ್ನೆಗಳಿಗೆ ಅಂಜದೆ ಉತ್ತರಿಸಿದ ಮಕ್ಕಳು ನಿಮ್ಮನ್ನು ನೋಡ್ತಿರುವುದು ಖುಷಿಯಾಗಿದೆ ಎಂದು ತಿಳಿಸಿದರು. ಪ್ರತಿಯಾಗಿ ಸಚಿವರು ಸಹ ನಿಮ್ಮನ್ನೆಲ್ಲಾ ಭೇಟಿಯಾಗಿ ನನಗೂ ಸಂತೋಷವಾಗಿದೆ ಎಂದು ತಿಳಿಸಿದರು.
ಈ ನಡುವೆ ವಿದ್ಯಾರ್ಥಿಯೊಬ್ಬರು ಸರ್, ನೀವು ತುಂಬಾ ಕ್ಯೂಟ್ ಆಗಿದ್ದೀರಾ ಎಂದಾಗ ನಕ್ಕ ಸಚಿವರು ನೀನು ಸಹ ಕ್ಯೂಟ್ ಆಗಿದ್ದೀಯಾ ಎಂದರು. ಇದರ ಬೆನ್ನಲ್ಲೆ ವಿದ್ಯಾರ್ಥಿನಿಯರನ್ನು ಮಾತನಾಡಿಸಿದ ಸಚಿವರು ನಿಮ್ಮ ಟೀಚರ್ ನಿಮ್ಮ ಶಾಲೆಗೆ ಕರೆದಿದ್ದರೇ ನಾನು ನಿಮ್ಮ ಶಾಲೆಗೆ ಬರುತ್ತಿದ್ದೆ ಎಂದರು. ಆಗ ವಿದ್ಯಾರ್ಥಿನಿಯೊಬ್ಬರು ಬನ್ನಿ ಸಾರ್ ಈಗ ಹೋಗಣ ಎಂದು ಸ್ಥಳದಲ್ಲಿಯೇ ಆಹ್ವಾನ ನೀಡಿದಳು. ಪ್ರತಿಯಾಗಿ ನಕ್ಕ , ಇಲ್ಲಮ್ಮ ಈಗ ಬೇರೆ ಕೆಲಸವಿದೆ ನಾನು ಹೋಗಬೇಕು ಎಂದು ವಿದ್ಯಾರ್ಥಿನಿಗೆ ತಿಳಿಸಿದರು.
ಮಕ್ಕಳ ಜೊತೆಗೆ ಕೆಲಕಾಲ ನಗುತ್ತಾ ಕಳೆದ ಸಚಿವರು ರಾಜಕಾರಣ ಬದಿಗಿಟ್ಟು ಮಕ್ಕಳ ಜೊತೆ ತಮಾಷೆ ಮಾಡಿಕೊಂಡು ವಿಮಾನ ಬರುವವರೆಗೂ ಕಾದರು. ಅದೇ ಸಮಯದಲ್ಲಿ ವಿಮಾನವೊಂದು ಶಿವಮೊಗ್ಗ ಏರ್‌ಫೋರ್ಟ್‌ಗೆ ಬಂದು ಇಳಿದಿದೆ. ವಿಮಾನ ಲ್ಯಾಂಡಿಂಗ್ ಆಗುವುದನ್ನು ಕಂಡ ವಿದ್ಯಾರ್ಥಿಗಳು ವಿಶೇಷವಾಗಿ ಸಂಭ್ರಮಿಸಿದರು. ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಾ ವಿಮಾನದ ವರ್ಣನೆ ಮಾಡಿದರು.
SUMMARY | madhubangarappa meets government school students at shivamogga airport
View this post on Instagram
KEY WORDS | madhubangarappa meets government school students at shivamogga airport