ಶಿವಮೊಗ್ಗ ಬೀಟ್‌ ಸಿಸ್ಟಮ್‌ ಹೇಗಿದೆ? ಟ್ರಾಫಿಕ್‌, ಕಂಪ್ಲೆಂಟ್‌, ಗಾಂಜಾ & ಮೈಕ್ರೋ ಫೈನಾನ್ಸ್‌ ವಿಚಾರಕ್ಕೆ ಪೊಲೀಸರ ಮಹತ್ವದ ಸಲಹೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 5, 2025 ‌‌ 

ವಿವಿಧ ವಿಚಾರಗಳನ್ನು ಒಳಗೊಂಡು ಶಿವಮೊಗ್ಗ ಪೊಲೀಸ್‌ ಇಲಾಖೆ ಹೆಚ್ಚುವರಿ ಪೊಲೀಸ್‌ ಅಧೀಕ್ಷರು (ಅಡಿಷನಲ್‌ ಎಸ್‌ಪಿ) ಅನಿಲ್‌ ಕುಮಾರ್‌ ಭೂಮರೆಡ್ಡಿಯವರ ನೇತೃತ್ವದಲ್ಲಿ ಶಿವಮೊಗ್ಗ ಡಿಎಆರ್‌ ಪೊಲೀಸ್‌ ಸಭಾಂಗಣದಲ್ಲಿ ಶಿವಮೊಗ್ಗ-ಬಿ ಉಪ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮುಖಂಡರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಪ್ರಮುಖ ವಿಚಾರಗಳ ಕುರಿತಾಗಿ ಸಲಹೆ ನೀಡಲಾಗಿದೆ. ಅದರ ವಿವರ ಹೀಗಿದೆ. 

- Advertisement -

  1. ಬೀಟ್ ವ್ಯವಸ್ಥೆಯನ್ನು ಬಲ ಪಡಿಸುವ ಉದ್ದೇಶದಿಂದ ಗ್ರಾಮಾಂತರ ಗಸ್ತು ಮತ್ತು ನಗರ ವ್ಯಾಪ್ತಿಯ ಗಸ್ತು ಎಂದು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ. 

  2. ಬೀಟ್ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವ ಸಂಬಂಧ ಸ್ಮಾರ್ಟ್ ಇ – ಬೀಟ್ ತಂತ್ರಾಂಶವನ್ನು ಅನುಷ್ಠಾನ ಮಾಡಲಾಗಿದೆ.

  3. ಈ ಸಂಬಂಧ ಎಲ್ಲಾ ಹಂತದ ಅಧಿಕಾರಿಗಳು ತಮ್ಮ ತಮ್ಮ ಠಾಣಾ ವ್ಯಾಪ್ತಿಯ ಬೀಟ್ ಅನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. 

  4. ದೂರು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ, ಕಂಪ್ಲೆಂಟ್‌ ನೀಡುವ ಸಂದರ್ಭದಲ್ಲಿ  ಪೊಲೀಸ್ ಠಾಣೆಗಳಿಗೆ ಹೋದಾಗ ಯಾವುದೇ ಪೊಲೀಸ್ ಅಧಿಕಾರಿಗಳು ದೂರು ತೆಗೆದುಕೊಳ್ಳಲು ತಡಮಾಡಿದರೆ /  ನಿರಾಕರಿಸಿದರೆ ಪೊಲೀಸ್ ಇಲಾಖಾ ಮೇಲಾಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಬಹುದಾಗಿರುತ್ತದೆ.

  5. ಮಾದಕ ವಸ್ತು ಗಾಂಜಾ ಮಾರಾಟ, ಸಾಗಾಟ, ಸಂಗ್ರಹ, ಬೆಳೆಯುವುದು ಮತ್ತು ಸೇವನೆ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ, ತಮ್ಮ ಹತ್ತಿರದ ಪೊಲೀಸ್ ಠಾಣೆ / 112  ತುರ್ತು ಸಹಾಯವಾಣಿಗೆ ಕರೆ ಮಾಡಿ  ಮಾಹಿತಿ ನೀಡಿ, ಅಂತಹ ವ್ಯಕ್ತಿಗಳ  ವಿರುದ್ಧ ಕಾನೂನು ರೀತ್ಯಾ  ಕ್ರಮ ಕೈಗೊಳ್ಳಲಾಗುತ್ತದೆ. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುತ್ತದೆ. 

  6. ಶಿವಮೊಗ್ಗ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಂಬಂಧ  ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಿದ್ದು, ಪೊಲೀಸ್ ಸಿಬ್ಬಂಧಿಗಳನ್ನು ಸಹಾ ನೇಮಿಸಲಾಗಿರುತ್ತದೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಐಎಂವಿ ಕಾಯ್ದೆ ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ.  

  7. ಇನ್ನು ಮೈಕ್ರೋ  ಪೈನಾನ್ಸ್ ಕಂಪನಿಗಳವರು ಸಾಲ ವಸೂಲಿ ಮಾಡುವಾಗ ಯಾವುದೇ ರೀತಿಯ ದೌರ್ಜನ್ಯ / ಕಿರುಕುಳ ನೀಡಿದರೆ ನೊಂದವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಬಂದು ನೇರವಾಗಿ ದೂರು ನೀಡಬಹುದಾಗಿರುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಲಹೆಗಳನ್ನ ನೀಡಲಾಗಿದೆ. 

SUMMARY |  meeting of Scheduled Caste and Tribe leaders at the Shivamogga-B sub-division level was held at the Shivamogga DAR Police Hall.

KEY WORDS |  meeting of Scheduled Caste and Tribe leaders ,Shivamogga-B sub-division,  Shivamogga DAR Police Hall

Share This Article