SHIVAMOGGA | MALENADUTODAY NEWS | ಮಲೆನಾಡು ಟುಡೆ Feb 4, 2025
ನಾಳೆ ಅಂದರೆ ಫೆಬ್ರವರಿ ಐದನೇ ತಾರೀಖು ಶಿವಮೊಗ್ಗದ ಗಾಂಧಿ ಬಜಾರ್, ರಾಮಣ್ಣ ಶ್ರೇಷ್ಟಿ ಪಾರ್ಕ್ ಸೇರಿದಂತೆ ಉರುಗಡೂರು ಸುತ್ತಮುತ್ತ ಕರೆಂಟ್ ಇರಲ್ಲ ಎಂದು ಮೆಸ್ಕಾಂ ಶಿವಮೊಗ್ಗ ಎರಡು ಪ್ರತ್ಯೇಕ ಪ್ರಕಟಣೆ ನೀಡಿದೆ.
ಮೆಸ್ಕಾಂ ಶಿವಮೊಗ್ಗ
ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ರಾಮಣ್ಣಶ್ರೇಷ್ಠಿ ಪಾರ್ಕ್ ಬಳಿ ಹೊಸ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.05 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣ ಕೇರಿ, ರಾಮಣ್ಣಶ್ರೇಷ್ಠಿ ಪಾರ್ಕ್, ಎಸ್‌ಪಿಎಂ ರಸ್ತೆ, ವಿನಾಯಕ ರಸ್ತೆ, ಅನವೇರಪ್ಪ ಕೇರಿ, ಯಾಲಕಪ್ಪ ಕೇರಿ, ಬೇಡರ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಊರಗಡೂರು ಸುತ್ತಮುತ್ತ ಕರೆಂಟ್ ಇರಲ್ಲ
ಶಿವಮೊಗ್ಗ ನಗರದಲ್ಲಿ ನಾಳೆ ದಿನ ಅಂದರೆ ಫೆಬ್ರವರಿ ಐದರಂದು ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ-1 ವ್ಯಾಪ್ತಿಯಲ್ಲಿ ನಿಸರ್ಗ ಬಡಾವಣೆ ಹತ್ತಿರ ವಿದ್ಯುತ್ ಪರಿವರ್ತಕ ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರವರಿ 05 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ಬೈಪಾಸ್ ರಸ್ತೆ, ನಿಸರ್ಗ ಬಡಾವಣೆ, ಊರಗಡೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
SUMMARY | Bypass Road, Nisarga Barangay, Oragadur, Gandhibazar, Elerevanna Keri, Ramannashresthi Park, SPM Road, Vinayaka Road, Anawerappa Keri, Yalakappa Keri, Bedera Keri, Power Cut, Mescom Shimoga, Shimoga News Today
KEY WORDS | Bypass Road, Nisarga Barangay, Oragadur, Gandhibazar, Elerevanna Keri, Ramannashresthi Park, SPM Road, Vinayaka Road, Anawerappa Keri, Yalakappa Keri, Bedera Keri, Power Cut, Mescom Shimoga, Shimoga News Today