NETFLIX ನಲ್ಲಿಲ್ಲ ಪುಷ್ಪ 2 ಕನ್ನಡ ವರ್ಷನ್‌ ಕಾರಣವೇನು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 30, 2025

ಪುಷ್ಪ 2 ಚಿತ್ರವನ್ನು  ಇಂದು ನೆಟ್‌ಫ್ಲಿಕ್ಸ್‌  ಹಿಂದಿ, ಮಳಯಾಳಂ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್‌ ಮಾಡಿದ್ದು, ಕನ್ನಡದಲ್ಲಿ ಮಾತ್ರ ಚಿತ್ರವನ್ನು ಇನ್ನೂ ರಿಲೀಸ್‌ ಮಾಡಿಲ್ಲ.

- Advertisement -

2024 ರಲ್ಲಿ ರಿಲೀಸ್‌ ಆದ ಪುಷ್ಪ 2 ಚಿತ್ರ ವಿಶ್ವದಾದ್ಯಂತ ಬರೊಬ್ಬರಿ 1000 ಕೋಟಿಗೂ ಅಧಿಕ ರೂಪಾಯಿಗಳನ್ನು ಕಲೆಕ್ಷನ್‌ ಮಾಡಿತ್ತು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಈ ಚಿತ್ರ  90 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿತ್ತು. ಅಷ್ಟರ ಮಟ್ಟಿಗೆ ಕರ್ನಾಟಕದಲ್ಲಿರುವ ತೆಲುಗಿನವರು ಸೇರಿದಂತೆ ಕನ್ನಡಿಗರು ಆ ಚಿತ್ರವನ್ನು ವೀಕ್ಷಿಸಿದ್ದರು.

ಈ ರೀತಿಯ ಹೈಪ್‌ ಕ್ರಿಯೇಟ್‌ ಮಾಡಿದ್ದ ಚಿತ್ರವನ್ನು ನೆಟ್‌ಫ್ಲಿಕ್ಸ್‌ ಬರೊಬ್ಬರಿ 275 ಕೋಟಿ ರೂಪಾಯಿ ಕೊಟ್ಟು ಖರೀದಿಸಿತು. ಇಂದು ಆ ಚಿತ್ರಕ್ಕೆ 23 ನಿಮಿಷ ಎಕ್ಸ್ಟ್ರಾ ಅವದಿಯನ್ನು ಸೇರಿಸಿ 3 ಗಂಟೆ 44 ನಿಮಿಷದ ರಿಲೋಡೆಡ್‌  ವರ್ಷನ್‌ನ್ನು ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿದೆ.

ಆದರೆ ಈ ಚಿತ್ರ  ಹಿಂದಿ ಮಳಯಾಳಂ ತಮಿಳು ತೆಲುಗು ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡ ವರ್ಷನ್‌ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದ ಕನ್ನಡಾಭಿಮಾನಿಗಳಿಗೆ ನಿರಾಸೆ ತಂದಿದೆ.

ಇದರ ಬಗ್ಗೆ ನೆಟ್‌ಫ್ಲಿಕ್ಸ್‌ 23 ಹೆಚ್ಚುವರಿ ನಿಮಿಷಗಳೊಂದಿಗೆ ಪುಷ್ಫ 2 ಚಿತ್ರ ತಮಿಳು, ತೆಲುಗು, ಹಿಂದಿ ಹಾಗೂ ಮಳಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದೆ. ಕನ್ನಡ ಅವತರಣಿಕೆ ಶಿಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದೆ.

SUMMARY | Pushpa 2 was released on Netflix today in Hindi, Malayalam, Tamil, Telugu and is yet to be released in Kannada.

KEYWORDS |  Pushpa 2,  Netflix, Kannada,

Share This Article
Leave a Comment

Leave a Reply

Your email address will not be published. Required fields are marked *