SHIVAMOGGA | MALENADUTODAY NEWS | ಮಲೆನಾಡು ಟುಡೆ Jan 30, 2025
ಚಿನ್ನಾ ಎಂದು ಕರೆಯುವುದಕ್ಕೂ ಯೋಚಿಸುವಂತೆ ಚಿನ್ನದ ದರ ದುಬಾರಿಯಾಗುತ್ತಿದೆ. ನಿನ್ನೆದಿನದ ದರವೂ ಇದುವರೆಗೀನ ಗರಿಷ್ಟ ದರವಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆ ಆಗಿದ್ದು ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 910 ರೂಪಾಯಿ ಏರಿಕೆ ಕಂಡಿದೆ. ಒಟ್ಟಾರೆ 10 ಗ್ರಾಮ್ ಚಿನ್ನಕ್ಕೆ 83,750 ರೂಪಾಯಿ ವಹಿವಾಟು ನಡೆಯುತ್ತಿದೆ.
ಚಿನ್ನದ ಸಾರ್ವಕಾಲಿಕ ಗರಿಷ್ಠ ದರ ಇದಾಗಿದ್ದು, ಬೆಳ್ಳಿಯ ದರದಲ್ಲಿಯೂ ಏರಿಕೆಯಾಗಿದೆ. 1 ಕೇಜಿ ಬೆಳ್ಳಿಯ ದರ 1000 ರೂಪಾ ಏರಿಕೆಯೊಂದಿಗೆ 93,000 ರೂಪಾಯಿ ತಲುಪಿದೆ. ಆಭರಣ ಮತ್ತು ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿರುವುದು ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
SUMMARY | Gold and silver prices increase in Delhi market
KEY WORDS |Gold and silver prices increase in Delhi market, Gold and silver prices Delhi market, Gold and silver prices