SHIVAMOGGA | MALENADUTODAY NEWS | ಮಲೆನಾಡು ಟುಡೆ Jan 25, 2025
ಸರ್ಕಾರಿ ನೌಕರ ಮಹಿಳೆಯೊಬ್ಬರಿಗೆ ಫಾರ್ಚುನರ್ ಕಾರು ಕೊಡಿಸುವ ಭರವಸೆ ನೀಡಿ ಒಂದುವರೆ ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪ ಸಂಬಂಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಇಲ್ಲಿನ ವ್ಯಾಪ್ತಿಯಲ್ಲಿ ವಾಸಿಸುವ ಇಲಾಖೆಯೊಂದರ ನೌಕರ ಮಹಿಳೆ ತಮ್ಮ ಹಳೆಯ ಕಾರನ್ನು ಮಾರಿದ್ದರಂತೆ. ಅದನ್ನು ಖರೀದಿಸಿದ್ದ ವ್ಯಕ್ತಿಗಳು, ಮಹಿಳೆಗೆ ಸೆಕೆಂಡ್ ಹ್ಯಾಂಡ್ ಫಾರ್ಚುನರ್ ಕಾರು ಕೊಡಿಸುವ ಭರವಸೆ ನೀಡಿ, ಒಂದುವರೆ ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದು ಅಗ್ರಿಮೆಂಟ್ ಕೂಡ ಮಾಡಿಕೊಟ್ಟಿದ್ದರಂತೆ. ಆದರೆ ಆರು ತಿಂಗಳು ಕಳೆದರೂ ಕಾರು ಕೊಡಿಸಿಲ್ಲ ಅಲ್ಲದೆ ಪಡೆದ ಹಣವನ್ನು ಸಹ ವಾಪಸ್ ಕೊಟ್ಟಿರಲಿಲ್ಲ. ಈ ಬಗ್ಗೆ ಕೇಳಲು ಹೋದರೆ, ನಿಂದಿಸಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ಶಿವಮೊಗ್ಗ ನಗರದ ರಾಗಿಗುಡ್ಡದ ಸಮೀಪದ ಚರ್ಚ್ ಬಳಿ ನಡೆದ ಹಲ್ಲೆ ಪ್ರಕರಣ ಸಬಂಧ ಒಟ್ಟು 9 ಮಂದಿ ವಿರುದ್ಧ FIR ದಾಖಲಾಗಿದೆ. ತಮ್ಮದೆ ಕಾರಣಕ್ಕೆ ಆರೋಪಿಗಳು ಚರ್ಚ್‌ಗಳಿ ಎರಡು ದಿನಗಳ ಹಿಂದೆ ಗಲಾಟೆ ಮಾಡಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದರು. ಈ ಸಂಬಂಧ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದರು. ಇದೀಗ ತಡವಾಗಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಂಬತ್ತು ಮಂದಿ ವಿರುದ್ಧ ಕೇಸ್ ಆಗಿದೆ.
SUMMARY | shivamogga crime news, shivamogga ragigudda crime
KEY WORDS | shivamogga crime news, shivamogga ragigudda crime