SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025
ಹಿರಿಯ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪರವರಿಗೆ ಒಂದೇ ದಿನ ಎರಡು ಗೌರವ ಡಾಕ್ಟರೇಟ್ ಪದವಿ ಲಭಿಸಿದೆ. ಕುವೆಂಪು ವಿಶ್ವವಿದ್ಯಾಲಯ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕಾಗೋಡು ತಿಮ್ಮಪ್ಪನವರ ಜೀವನ ಸಾಧನೆ ವಿಚಾರದಲ್ಲಿ ಗೌರವ ಡಾಕ್ಟರೇಟ್ ನೀಡುತ್ತಿದೆ. ಎರಡು ಡಾಕ್ಟರೇಟ್ ಪದವಿಗಳು ಒಂದೇ ದಿನ ಕಾಗೋಡು ತಿಮ್ಮಪ್ಪನವರು ಸ್ವೀಕರಿಸಲಿದ್ದಾರೆ.
ಭೌತವಿಜ್ಞಾನಿ ಮುಂಬೈನ ಸಿ.ಎಸ್.ಉನ್ನಿಕೃಷ್ಣನ್ ಹಾಗೂ ಯೋಗಗುರು ಭದ್ರಾವತಿಯ ಡಿ.ನಾಗರಾಜ್ ಅವರನ್ನು ಒಳಗೊಂಡಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪರವರಿಗೆ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ ಜನವರಿ 22ರ ಬೆಳಗ್ಗೆ 10.30ಕ್ಕೆ ಶಂಕರಘಟ್ಟದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.
ಅದೇ ದಿನ ಮಧ್ಯಾಹ್ನ 2 ಗಂಟೆಗೆ ಸಾಗರ ತಾಲೂಕು ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ 9ನೇ ಘಟಿಕೋತ್ಸವ ನಡೆಯಲಿದ್ದು, ಅಲ್ಲಿ ಸಹ ಮಾಜಿ ಸಚಿವ ಕಾಗೋಡು ತಿಮ್ಮಪ್ಪರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.


SUMMARY | Senior leader and former minister Kagodu Thimmappa has been awarded two honorary doctorates on the same day. Kuvempu University and the University of Agriculture and Horticulture.
KEY WORDS |Senior leader and former minister Kagodu Thimmappa, Kagodu Thimmappa awarded two honorary doctorates on the same day, Kuvempu University , University of Agriculture and Horticulture