ಮಲೆನಾಡ ಒಂಟಿ ಮನೆಗಳಲ್ಲಿ ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ಭಯ, ಬೆದರಿಕೆ, ವಸೂಲಿ | ಎಚ್ಚರ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 7, 2025 ‌‌  

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೈಲಾರಲಿಂಗಸ್ವಾಮಿ ಹೆಸರಲ್ಲಿ ಬರುತ್ತಿರುವ ಗುಂಪೊಂದು ಒಂಟಿ ಮನೆಗಳಲ್ಲಿರುವ ಜನರನ್ನ ಹೆದರಿಸಿ ದುಡ್ಡು ವಸೂಲಿಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಕೆಲ ಮನೆಗಳಿಗೆ ತೆರಳುವ ಮೈಲಾರರು ಮನೆಯವರಿಗೆ ಇಲ್ಲದ ಕಂಟಕ ಇದೆ ಎಂದು ಹೆದರಿಸಿ ಹದಿನೈದು ಇಪ್ಪತ್ತು ಸಾವಿರ ಖರ್ಚಾಗುತ್ತದೆ ಎಂದು ಭಯ ಬೀಳಿಸ್ತಿದ್ದಾರೆ ಎನ್ನಲಾಗಿದೆ. ಮನೆಯೊಳಗೆ ಬರುವ ಇವರುಗಳು ಹಣವನ್ನು ವಸೂಲಿ ಮಾಡಿ ಹೋಗುತ್ತಿದ್ದಾರಂತೆ. ಈ ಬಗ್ಗೆ ಎರಡು ಮೂರು ಪ್ರಕರಣಗಳಾಗಿದ್ದು, ಒಂದು ಪ್ರಕರಣದಲ್ಲಿ ಬಾಳೆಹಳ್ಳಿ ನಾಗರಾಜು ಎಂಬವರ ಪತ್ನಿಗೆ ಮೈಲಾರರು 11 ಸಾವಿರ ಹಣ ನೀಡುವಂತೆ ಡಿಮ್ಯಾಂಡ್‌ ಮಾಡಿದ್ದು, ಅದೃಷ್ಟಕ್ಕೆ ಅದೇ ವೇಳೆ ಮನೆಯ ಯುಜಮಾನಿಯ ಮಗ ಬಂದು ಮೈಲಾರರನ್ನು ಹೆದರಿಸಿ ಅಲ್ಲಿಂದ ಕಳುಹಿಸಿದ್ದಾರೆ 

ಇನ್ನೊಂದು ಪ್ರಕರಣದಲ್ಲಿ ಒಂಟಿ ಮನೆಯವರು ಬಾಗಿಲು ತೆರೆಯದಿದ್ದರೂ ಮನೆಯ ಸುತ್ತಲು ಸುತ್ತಾಡಿ, ನಾಲ್ವರ ತಂಡವೊಂದು ಮನೆಯವರನ್ನ ಕೂಗಿ ಕರೆದಿದೆ. ಇದರಿಂದ ಆ ಮನೆಯವರು ಹೆದರಿದ ಘಟನೆ ನಡೆದಿತ್ತು. ಇನ್ನೂ ಮೈಲಾರಲಿಂಗನ ಹೆಸರಲ್ಲಿ ಒಂಟಿ ಮನೆಗಳ ಸುತ್ತಮುತ್ತಲಿನ ಪರಿಸರವನ್ನು ದುರುದ್ದೇಶದಿಂದ ಕೃತ್ಯವೂ ನಡೆಯುತ್ತಿದೆ ಎಂಬ ಆರೋಪ ಇಲ್ಲಿಯವರದ್ದು. ನೂರು ಕೊಟ್ಟರೆ ಅಲ್ಲಿಯೇ ಬಿಸಾಡುವ ಮೈಲಾರರು, ದೇವರ ಹೆಸರಲ್ಲಿ ವಿಪರೀತ ಹೆದರಿಸುತ್ತಾರೆ ಎಂದು ಸ್ಥಳೀಯರು ಸಿಸಿ ಕ್ಯಾಮರಾದ ದೃಶ್ಯಾವಳಿಗ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

SUMMARY | Threats made by visiting houses in the name of Mailaralinga Swamy

KEY WORDS |  Mailaralinga Swamy, chikkamagalur, malnad 

Share This Article