ಹಲವು ದಿನಗಳಿಂದ ಒಂದೇ ಜಾಗದಲ್ಲಿದ್ದ ಕಾರು ಮೂಡಿಸಿತು ಅನುಮಾನ | ಬಿಯರ್‌ ಬಾಟ್ಲಿ ಏಟು & ಬಿರಿಯಾನಿ | ಇನ್ನಷ್ಟು ಸುದ್ದಿಗಳು

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌ 

ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಕನಸಿನ ಕಟ್ಟೆಯಲ್ಲಿ ಬಿರಿಯಾನಿ ತಿನ್ನಲು ಹೋಗಿದ್ದ ವ್ಯಕ್ತಿ ಮೇಲೆ ಬಿಯರ್‌ ಬಾಟಲಿ ಹಾಗೂ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಕನಸಿನ ಕಟ್ಟೆಯ ಬಾರ್‌ನಲ್ಲಿ ಘಟನೆ ನಡೆದಿದ್ದು, ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಕೇಸ್‌ ಆಗಿದೆ. 

ಇನ್ನೊಂದು ಪ್ರಕರಣದಲ್ಲಿ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯ ರಕ್ತ ಪರೀಕ್ಷೆಯ ವರದಿ ತೋರಿಸಲು ಬಂದ ಸಂದರ್ಭದಲ್ಲಿ ಆತ ವೈದ್ಯೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. 

ಅತ್ತ ಭದ್ರಾವತಿಯಲ್ಲಿ  ಓಲ್ಡ್‌ ಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಕಾರೊಂದು ಅಂಗಡಿಯ ಮುಂದೆ ಹಲವು ದಿನಗಳಿಂದ ನಿಂತಿದ್ದು, ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ. ಹೀಗಾಗಿ ಸ್ಥಳೀಯ ಅಂಗಡಿಯವರೊಬ್ಬರು ಈ ಸಂಬಂದ 112 ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ  ಬಂದ ಪೊಲೀಸರು ವಾಹನದ ವಿಚಾರಕ್ಕೆ ವಿಚಾರಣೆ ನಡೆಸಿ ಕಾರನ್ನ ಪೊಲೀಸ್‌ ಠಾಣೆಗೆ ಸ್ಥಳಾಂತರಿಸಿದ್ದಾರೆ.

SUMMARY | shivamogga short news 

KEY WORDS |  shivamogga short news 

Share This Article