ಹೊಸವರುಷದ ಆರಂಭಕ್ಕು ಮೊದಲು ರಾಶಿಗಟ್ಟಲೇ ಎಂಶಿ ವಿಸ್ಕಿ ಸೀಜ್‌!? ಕಾರಣವೇನು?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Dec 31, 2024 ‌‌ 

ಹೊಸವರ್ಷದ ಸಂಭ್ರಮಾಚರಣೆಯ ನಡುವೆ ಶಿವಮೊಗ್ಗ ಅಬಕಾರಿ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ. 

ನಗರದ  ಸವಳಂಗ ರಸ್ತೆಯ ಫ್ಲೆ ಓವರ್‌ನ ಅಂಡರ್ ಪಾಸ್‌ನಲ್ಲಿ ಇಷ್ಟೊಂದು ಪ್ರಮಾಣ ಅಕ್ರಮ ಮಧ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ  ನಡೆಸಿ ಸೀಜ್‌ ಮಾಡಿದ್ದಾರೆ. ಚನ್ನಗಿರಿ ಮೂಲದ ಶಿವು ಹಾಗೂ ಹರೀಶ್‌ ಎಂಬವರ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇವರು ಬೈಕ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಇನ್ನೂ ದಾಳಿ ವೇಳೆ  ಅಂದಾಜು ಮೌಲ್ಯ 1,35,000 ರೂಪಾಯಿ ಮೌಲ್ಯದ 180 ಮಿ.ಲಿ.ನ ಮ್ಯಾಕ್‌ಡೋವೆಲ್ಸ್ ನಂ-1 ವಿಸ್ಕಿಯ 170 ಬಾಟಲಿಗಳು ಜಪ್ತು ಮಾಡಲಾಗಿದೆ. 

SUMMARY |  Shivamogga Excise Department officials raid, MC Whisky illegal liquor seized

KEY WORDS | Shivamogga Excise Department raid, MC Whisky, illegal liquor seized

Share This Article