ಆನಂದಪುರದ ಸಮೀಪ ಕಾಡಾನೆಗಳ ಓಡಾಟ | ವಿಡಿಯೋಗಾಗಿ ಈ ಸಾಹಸ ಮಾಡಲೇಬೇಡಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 27, 2024 ‌‌ 

ಶಿವಮೊಗ್ಗದ ಪುರದಾಳು ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು ಕಳೆದ ಮೂರು ನಾಲ್ಕು ದಿನಗಳಿಂದ ಚೋರಡಿ ತುಪ್ಪೂರು ಭಾಗದಲ್ಲಿ ಓಡಾಡುತ್ತಿದೆ. ಈ ನಡುವೆ ಆನಂದಪುರದ ಲಕ್ಕವಳ್ಳಿ ಹಾಗೂ ಮೂಡಗಲು ಗ್ರಾಮದಲ್ಲಿ ಕಾಡಾನೆಗಳು ರೈತರ ಹೊಲಗಳಲ್ಲಿ ಓಡಾಡುತ್ತಿರುವ ದೃಶ್ಯವೊಂದು ಸ್ಥಳೀಯರ ಮೊಬೈಲ್‌ ಕ್ಯಾಮರಾಗಳಲ್ಲಿ ಸೆರೆಯಾಗಿದೆ. 

- Advertisement -

Malenadu Today

ಎರಡು ಕಾಡಾನೆಗಳು ಮರಿಯೊಂದಿಗೆ ಲಕ್ಕವಳ್ಳಿ ಗ್ರಾಮದ ಕಡೆ ತೆರಳುತ್ತಿದ್ದ ದೃಶ್ಯವನ್ನು , ತೋಟಕ್ಕೆ ನೀರು ಹರಿಸಲು ಹೋದವರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. 

Malenadu Today

ಇಲ್ಲಿನ ನಿವಾಸಿ ಲಕ್ಷ್ಮಣಪ್ಪ ಎಂಬವರ ಮನೆಯ ಮುಂದೆ ಕಾಡಾನೆಗಳು ಹಾದು ಹೋಗಿರುವುದು ಸ್ಥಳೀಯರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದ್ದು, ಕಾಡಾನೆಯನ್ನು ದೂರ ಓಡಿಸುವಂತೆ ಅರಣ್ಯ ಸಿಬ್ಬಂದಿಯ ಬಳಿ ಮನವಿ ಮಾಡಿದ್ದಾರೆ. ಈ ನಡುವೆ ಆನೆಗಳ ವಿಡಿಯೋ ಮಾಡಲು ಯುವಕರು ಅವುಗಳ ಹತ್ತಿರ ಹೋಗುತ್ತಿರುವ ದೃಶ್ಯಗಳು ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ರೀತಿ ತಪ್ಪು ಮಾಡಬೇಡಿ, ಅಪಾಯದ ಸಂದರ್ಭದಲ್ಲಿ ಕಾಡಾನೆಗಳು ಮಾರಕವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಚ್ಚರವಹಿಸುವಂತೆ ಅರಣ್ಯ ಇಲಾಖೆ ತಿಳಿಸಿದೆ

SUMMARY | group of wild elephants roaming around near Anandpur in Sagar taluk of Shimoga district was captured on a mobile camera.

KEY WORDS |  a group of wild elephants roaming, Anandpura , Sagar taluk , Shimoga district  mobile camera.

Share This Article