SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 23, 2024
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರ ಇದೇ ಡಿಸೆಂಬರ್ 25 ರಂದು ವಿಶ್ವದಾದ್ಯಂತ ರಿಲೀಸ್ ಆಗುತಿದ್ದು, ಇದೀಗ ಚಿತ್ರದ ಟ್ರೈಲರ್ ರಿಲೀಸ್ ಆಗಿ ಯ್ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸುತ್ತಿದೆ.
2 ವರ್ಷದ ನಂತರ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇದರ ನಡುವೆ ಚಿತ್ರತಂಡ ಚಿತ್ರದ ಝಲಕ್ ಒಂದನ್ನ ರಿಲೀಸ್ ಮಾಡಿದ್ದು, ಟ್ರೈಲರ್ ನಲ್ಲಿ ಕಿಚ್ಚ ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ, ಈ ಟ್ರೈಲರ್‌ರನ್ನು ನೋಡಿದಾಗ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಗಳು ಇದ್ದು, ಈ ಚಿತ್ರ ಕಿಚ್ಚ ಸುದೀಪ್ ರವರ ಅಭಿಮಾನಿಗಳ ಸೇರಿದಂತೆ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕಿಚ್ಚ ಸುದೀಪ್‌ರವರ ಡೈಲಾಗ್ ಡೆಲವೆರಿ ಸ್ವಾಗ್ ಬಿಜಿಎಂ ಎಲ್ಲವೂ ಸಹ ಟ್ರೈಲರ್‌ನಲ್ಲಿ ಉತ್ತಮವಾಗಿ ಮೂಡಿಬಂದಿದೆ. ಟ್ರೈಲರ್ ನಲ್ಲಿ ಮೊದಲಿನಿಂದ ಕೊನೆವರೆಗೆ ಕಿಚ್ಚ ಸುದೀಪ್ ರವರು ಒಂದೇ ಬಟ್ಟೆಯನ್ನು ಧರಿಸಿರುವುದನ್ನ ಗಮನಿಸಿದಾಗ ಕಿಚ್ಚ ಸುದೀಪ್‌ರವರೇ ಹೇಳಿರುವಂತೆ ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ ಎಂದು ತಿಳಿಯುತ್ತದೆ. ಈ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವಿದ್ದು, ಉಗ್ರಂ ಮಂಜು, ತೆಲುಗು ನಟ ಸುನಿಲ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಕೆ ಆರ್ ಜಿ ಸ್ಟೂಡಿಯೋಸ್ ಸಂಸ್ಥೆ ಮ್ಯಾಕ್ಸ್ ಚಿತ್ರದ ವಿತರಣೆ ಹಕ್ಕನ್ನು ಕೊಂಡುಕೊಂಡಿದ್ದು, ಈ ಚಿತ್ರವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶಿಸುತ್ತಿದ್ದಾರೆ.
SUMMARY | Sudeep’s much-awaited film Max is all set to hit the screens worldwide on December 25, 2018, and now the trailer of the film has been released and it is creating a lot of buzz on YouTube.
KEYWORDS | Sudeep, Max , trailer, YouTube,