SHIVAMOGGA | MALENADUTODAY NEWS | ಮಲೆನಾಡು ಟುಡೆ Dec 22, 2024
ಶಿವಮೊಗ್ಗದಲ್ಲಿ ಸಂಭವಿಸುತ್ತಿರುವ ಸ್ಫೋಟಗಳು ದೊಡ್ಡಸುದ್ದಿಯಾಗುತ್ತದೆ. ಈ ಹಿಂದೆ ಹುಣಸೋಡು ಎಂಬಲ್ಲಿ ಸಂಭವಿಸಿದ್ದ ಸ್ಫೋಟ ಇಡೀ ದೇಶದಲ್ಲಿಯೇ ದೊಡ್ಡಮಟ್ಟಿಗಿನ ಸುದ್ದಿಯಾಗಿತ್ತು.
ಈ ಘಟನೆ ಬೆನ್ನಲ್ಲೆ ಭದ್ರಾವತಿಯ ಗಣೇಶ್ ರೈಸ್ ಮಿಲ್‌ನಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಎಲ್ಲದಕ್ಕಿಂದತಲೂ ಹೆಚ್ಚಾಗಿ ಈ ಸ್ಫೋಟದಿಂದ ಮನೆಯೊಂದರ ಆರ್‌ಸಿಸಿಯ ಅರ್ಧಭಾಗವೇ ಒಡೆದು ಹೋಗಿರುವುದು ಸ್ಫೋಟದ ತೀವ್ರತೆಯನ್ನ ಸಾಕ್ಷಿ ಕರಿಸುತ್ತಿದೆ.
ಘಟನೆಯಲ್ಲಿ ಬಾಯ್ಲರ್ ಆಪರೇಟರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಇನ್ನೂ ಸ್ಫೋಟದೊಂದಿಗೆ ದೂರಕ್ಕೆ ಹಾರಿದ ಅದರ ಕಬ್ಬಿಣದ ಭಾಗಗಳು ಭಾರೀ ಅನಾಹುತವನ್ನೇ ಸೃಷ್ಟಿಸುವ ಸಾಧ್ಯತೆ ಇತ್ತು. ದೈವಕೃಪೆಯಿಂದ ಅನಾಹುತ ತಪ್ಪಿ ಹಲವರು ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಆದರೆ ಮನೆಗಳು ಸ್ಫೋಟದಲ್ಲಿ ತೀವ್ರ ಹಾನಿಗೆ ಒಳಗಾಗಿದೆ.
ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿ ಗುರುವಾರ ಸಂಜೆ 6:30ರ ವೇಳೆ ಸಂಭವಿಸಿದ ಸ್ಪೋಟದಿಂದಾಗಿ ಇಡೀ ಮಿಲ್ ಯಾವುದೋ ಯುದ್ಧದ ಮಿಸೈಲ್ ದಾಳಿಗೆ ಒಳಗಾದಂತೆ ಕಾಣುತ್ತಿದೆ. ಇನ್ನೂ ಮಿಲ್‌ನ ಗೋಡೆಗಳು ನೆಲಸಮವಾಗಿದ್ದರೆ, ತಗಡು ಶೀಟ್‌ಗಳೆಲ್ಲಾ ಎಲ್ಲೋ ಮಾಯವಾಗುವಂತೆ ಹಾರಿ ಹೋಗಿವೆ. ಇನ್ನೂ ಮಿಲ್‌ನ ಯುಂತ್ರಗಳೆಲ್ಲಾ ಪೀಸ್ ಪೀಸ್ ಆಗಿವೆ.
ಜೊತೆಯಲ್ಲಿ ಬಾಯ್ಲರ್‌ನ ತುಂಡೊಂದು ಹಾರಿಬಂದು ಇಂದಿರಾನಗರದ ಮೊದಲನೇ ಕ್ರಾಸ್‌ನ ಇಕ್ಸಾಲ್ ಎಂಬುವರ ಆರ್ ಸಿಸಿ ಮನೆ ಮೇಲೆ ಬಿದ್ದಿದೆ. ಅದ್ಯಾವ ರೀತಿಯಲ್ಲಿ ಈ ತುಂಡು ಬಿದ್ದಿದೆ ಎಂದರೆ, ಮನೆಯ ಹಾಲ್‌ನ ಅರ್ಧಭಾಗ RCC ಪೀಸ್ ಪೀಸ್ ಆಗಿದೆ. ಅದನ್ನು ಜೋಡಿಸುವುದು ಮತ್ತೆ ಕಷ್ಟ ಸಾಧ್ಯ ಎಂಬಂತಿದೆ ಅಲ್ಲಿನ ಚಿತ್ರಣಕ್ಕೆ ದೇವರ ದಯೆಯಿಂದ ಮನೆಯಲ್ಲಿದ್ದವರಿಗೆ ಅಪಾಯ ಸಂಭವಿಸಿಲ್ಲ ಎಂಬುದೊಂದೆ ಸಮಾಧಾನ.
ಸುಮಾರು ಹತ್ತು ಆಳು ಸೇರಿ ಪ್ರಯತ್ನಿಸಿದರೂ ಎತ್ತಲಾಗದ ದೊಡ್ಡದಾದ ಕಬ್ಣಿಣದ ತುಂಡು ಮನೆ ಮೇಲೆ ಬಿದ್ದಿದ್ದು, ಅದರ ಒಂದಿಷ್ಟು ಭಾಗ ಮನೆಯ ಒಳಗಡೆ ನೇತಾಡುತ್ತಿದೆ.
ಬಿದ್ದ ರಭಸಕ್ಕೆ 15 ಅಡಿಯಷ್ಟು ಅಗಲದ ಆರ್‌ಸಿಸಿ ಕತ್ತರಿಸಿದಂತಾಗಿದೆ. ಈ ಬಗ್ಗೆ ಸೋಶಿಯಲ್ಲ್ ಮೀಡಿಯಾದಲ್ಲಿ ಅಳಲು ತೋಡಿಕೊಂಡಿರುವ ಮನೆ ಮಾಲೀಕರು ತಮ್ಮ ಸ್ಥಿತಿಗೆ ಯಾರು ಕಾರಣರಾಗಿದ್ದರೋ ಅವರು ತಮಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.
???? Urgent Help Needed ????
A 6-8 ton boiler from Ganesh Rice Mill exploded, crashing into our house in Indiranagar, #Bhadravathi. The house is on the verge of collapse. No response from authorities or mill owner yet.@CMofKarnataka
@DC_Shivamogga
@karnatakacm @KarnatakaPolice, pic.twitter.com/XhIQyPphGl— Mohamed Iqbal M (@MMohamed69478) December 21, 2024
SUMMARY | A rice mill boiler exploded on Bhadravati Channagiri Road, its iron pieces hit and destroyed the RCC of the house.
KEY WORDS | rice mill boiler exploded, Bhadravati Channagiri Road, iron pieces hit RCC of the house