SHIVAMOGGA | MALENADUTODAY NEWS | ಮಲೆನಾಡು ಟುಡೆ Dec 22, 2024
ದೇವರ ಹುಂಡಿಗೆ ಹಣ ಹಾಕುವಾಗ ಐಫೋನ್ ಅದರೊಳಗೆ ಬಿದ್ದು, ಅದನ್ನ ವಾಪಸ್ ಕೊಡಲು ದೇವಾಲಯದವರು ಒಪ್ಪದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪಿಕೆ ಹಿಂದಿ ಸಿನಿಮಾದಲ್ಲಿ ದೇವಾಲಯದ ಹುಂಡಿಯೊಳಗೆ ಪರ್ಸ್‌ವೊಂದು ಹಾಕುವ ಹಾಗೂ ಆನಂತರ ಪರ್ಸ್‌ನಲ್ಲಿದ್ದ ಹಣವನ್ನ ದೇವರದ್ದು ಎಂದು ಹೇಳುವ ದೃಶ್ಯವಿದೆ.
ಅದೇ ರೀತಿಯ ಘಟನೆಯೊಂದು ತಮಿಳುನಾಡಿನ ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ದೇವಾಲಯದಲ್ಲಿ ಘಟನೆಯೊಂದು ನಡೆದಿದೆ. ಇಲ್ಲಿಗೆ ಬಂದ ದಿನೇಶ್ ಎಂಬ ಭಕ್ತರು ಹುಂಡಿಗೆ ಹಣ ಹಾಕಲು ಅಂಗಿ ಜೇಬಿಗೆ ಕೈ ಹಾಕಿದಾಗ ಜೇಬಿನಿಂದ ಹೊರಬಿದ್ದ ಐಪೋನ್ ಸೀದಾ ಹುಂಡಿಯೊಳಗೆ ಹೋಗಿ ಬಿದ್ದಿದೆ.
ಆ ಬಳಿಕ ದಿನೇಶ್ ದೇವಾಲಯದ ಸಿಬ್ಬಂದಿಗೆ ಮೊಬೈಲ್ ವಾಪಸ್ ಕೊಡುವಂತೆ ಕೋರಿದ್ದಾರೆ. ಹುಂಡಿ ಕೀ ತೆಗೆದು ಪರಿಶೀಲಿಸಿದಾಗ ಐಫೋನ್ ಸಿಕ್ಕಿದದೆ. ಆದರೆ ಇದು ದೇವರಿಗೆ ಅರ್ಪಿತವಾದಂತಾಗಿದೆ. ಹಾಗಾಗಿ ಮೊಬೈಲ್ ಕೊಡುವುದಿಲ್ಲ ಎಂದಿದ್ದಾರೆ. ಆದರೆ ಮೊಬೈಲ್‌ನಲ್ಲಿನ ಡೇಟಾ ಹಾಗೂ ಸಿಮ್‌ಕಾರ್ಡ್ ವಾಪಸ್ ತೆಗೆದುಕೊಳ್ಳಿ ಎಂದಿದ್ದಾರೆ. ಇದಕ್ಕೆ ಮಾಲೀಕ ಒಪ್ಪಿರಲಿಲ್ಲ.
ಹೀಗಾಗಿ ವಿಚಾರ ದೊಡ್ಡದಾಗಿ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವರ ಬಳಿಗೆ ಹೋಗಿದೆ. ಸಚಿವ ಪಿ.ಕೆ. ಶೇಖರ್ ಬಾಬು ಮಾತನಾಡ್ತಾ ದೇವರ ಹುಂಡಿಗೆ ಹಾಕಿದ ಯಾವುದೇ ವಸ್ತು ದೇವರಿಗೆ ಸೇರಿದ್ದಾಗಿದೆ ಎಂದಿದ್ದಾರೆ.
iPhone accidentally fell into the temple’s hundi..
The temple administration refused to return it the owner, saying it belonged to the temple.pic.twitter.com/4VgfcRk0Ib
— Vije (@vijeshetty) December 20, 2024
SUMMARY | iPhone accidentally fell into the temple’s hundi temple administration refused to return it the owner, saying it belonged to the temple.
KEY WORDS | iPhone accidentally fell into the temple hundi, temple administration tamilnadu temple
