ಅಡಕೆ ಕೊಯ್ಲಿಗಾಗಿ ತಂದೆಯೊಂದಿಗೆ ಮಗನ ಕಿರಿಕ್‌ | ಶಿವಮೊಗ್ಗದಲ್ಲಿ ಏನೇಲ್ಲಾ ನಡೆಯಿತು | shivamogga ಶಾರ್ಟ್‌ ನ್ಯೂಸ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 22, 2024 ‌‌  

ಸುದ್ದಿ 1  ಸೊರಬ | ಸೊರಬ ತಾಲ್ಲೂಕು ಸೊರಬ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಹೋರಿ ಬೆದರಿಸುವ ವಿಚಾರಕ್ಕೆ ಸ್ಥಳೀಯರಲ್ಲೆ ಗಲಾಟೆ ನಡೆದಿದೆ. ಈ ಸಂಬಂಧ ವಿಷಯ ತಿಳಿದು ಸ್ಥಳಕ್ಕೆ ಬಂದ 112 ERV ಪೊಲೀಸ್‌ ಸಿಬ್ಬಂಧಿ ಸ್ಥಳೀಯರ ಗಲಾಟೆಯನ್ನು ನಿಲ್ಲಿಸಿ, ಸ್ಥಳದಲ್ಲಿದ್ದವರನ್ನ ಮನೆಗೆ ಕಳುಹಿಸಿ ಠಾಣೆಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ. 

Malenadu Today

ಸುದ್ದಿ 2 | ಭದ್ರಾವತಿ | ಭದ್ರಾವತಿ ತಾಲ್ಲೂಕು ಪೇಪರ್‌ ಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅಪರಿಚಿತನೊಬ್ಬ ಅನಾವಶ್ಯಕವಾಗಿ ಮೇನ್‌ ರೋಡ್‌ನಲ್ಲಿ ಅಡ್ಡಾದಿಡ್ಡಿ ಓಡಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಟ್ಟ ಘಟನೆ ಬಗ್ಗೆ ವರದಿಯಾಗಿದೆ. ಘಟನೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಬಂದು ಅಪರಿಚಿತನನ್ನ ವಿಚಾರಿಸಿದ್ದಾರೆ. ಅಲ್ಲದೆ ಆತನಿಗೆ ವಾರ್ನಿಂಗ್‌ ಕೊಟ್ಟು ಬುದ್ದಿವಾದ ಹೇಳಿಕಳುಹಿಸಿದ್ದಾರೆ. 

Malenadu Today

ಸುದ್ದಿ 3 | ಸೊರಬ | ಸೊರಬಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಯೊಂದರಲ್ಲಿ ತಂದೆ ಹಾಗೂ ಮಗನ ನಡುವೆ ಅಡಿಕೆ ಕೊಯ್ಯುವ ವಿಚಾರಕ್ಕೆ ಜಗಳವಾಗಿ ಪೊಲೀಸರು ಮಧ್ಯಪ್ರವೇಶಿಸುವಂತಾಗಿದೆ. ಈ ಸಂಬಂಧ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ ತಂದೆ ಮಗನ ನಡುವೆ ಗಲಾಟೆ ಮಾಡಿಕೊಳ್ಳದಂತೆ ಸೂಚಿಸಿದ್ದಾರೆ. ಅಲ್ಲದೆ ಈ ಸಂಬಂಧ ಎಚ್ಚರಿಕೆ ನೀಡಿ ಅಲ್ಲಿಯೇ ಪ್ರಕರಣವನ್ನು ಇತ್ಯರ್ಥ ಮಾಡಿದ್ದಾರೆ.  

Malenadu Today

SUMMARY |  shivamogga short news 

KEY WORDS |  shivamogga short news 

Share This Article