SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024
ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನ ಎಲ್ಲೆಂದರಲ್ಲಿ ಅಗೆಯುತ್ತಿರುವ ವಿಚಾರ ಗೊತ್ತೆ ಇದೆ. ಜನರು ಹಿಡಿಶಾಪ ಹಾಕುತ್ತಿದ್ದರೂ ಎಲ್ಲಂದರಲ್ಲಿ ಬಿದ್ದ ಸ್ಮಾರ್ಟ್ ಸಿಟಿಯ ಟೈಲ್ಸ್‌ಗಳಂತೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳ ನಡುವೆಯೇ ಇದೀಗ ಇಲಾಖಾ ಶೀತಲ ಸಮರ ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಇದಕ್ಕೆ ಕಾರಣವಾಗಿರೋದು ಸ್ಮಾರ್ಟ್ ಸಿಟಿಯಿಂದ ಹೊರಬಿದ್ದ ಈ ಪ್ರಕಟಣೆ
ಶಿವಮೊಗ್ಗ ಸ್ಮಾರ್ಟ್ ಸಿಟಿ : ಸಾರ್ವಜನಿಕ ಪ್ರಕಟಣೆ ಶಿವಮೊಗ್ಗ
ಶಿವಮೊಗ್ಗ ಸ್ಥಾರ್ಟ್ ಸಿಟಿ ವತಿಯಿಂದ ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಅನುಮೋದಿತ ವ್ಯಾಪ್ತಿ ಪ್ರದೇಶದಲ್ಲಿ ರಸ್ತೆ ಕಾಮಗಾರಿಗಳನ್ನು ಅಂತರ್ ಇಲಾಖೆಯ ಸಮನ್ವಯ ಸಮಿತಿಯ ಒಪ್ಪಿಗೆಯ ಮೇರೆಗೆ ಈಗಾಗಲೇ ನಿರ್ವಹಿಸಲಾಗಿದೆ. ಆದರೂ ಸಹ ಜಲಮಂಡಳಿ (ವಾಟರ್ ಬೋರ್ಡ್) ಹಾಗೂ ವಿದ್ಯುತ್ ಪೂರೈಕಾ ಇಲಾಖೆ (ಮೆಸ್ಕಾಂ) ರವರು ಶಿವಮೊಗ್ಗ ಸ್ಟಾರ್ಟ್ ಸಿಟಿ ಅನುಮತಿ ಇಲ್ಲದೆ ಈಗಾಗಲೇ ಸುಂದರವಾಗಿ ನಿರ್ಮಿಸಿರುವ ಕಾಮಗಾರಿಗಳನ್ನು ಎಲ್ಲೆಂದರಲ್ಲಿ ಅಗೆದು, ಗುಂಡಿ ಮಾಡಿ ಅದನ್ನು ಯಥಾಸ್ಥಿತಿಗೆ ತಾರದೆ, ಹಾಗೆಯೇ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ.
ಸಾರ್ವಜನಿಕರು ಶಿವಮೊಗ್ಗ ಸ್ಟಾರ್ಟ್ ಸಿಟಿಯವರು ಕಳಪೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ ಎಂದು ತಪ್ಪಾಗಿ ಅರ್ಥೈಸಿ ದೂರುತ್ತಿದ್ದಾರೆ. ಜಲಮಂಡಳಿ ಹಾಗೂ ಮೆಸ್ಕಾಂ ಇಲಾಖೆಯ ಇಂತಹ ನಿರ್ಲಕ್ಷದಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ಅಥವಾ ಜೀವಹಾನಿಯಾದಲ್ಲಿ ಅದಕ್ಕೆ ಅವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಶಿವಮೊಗ್ಗ ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
SUMMARY | Smart City Managing Director says we are not responsible for potholes in Shivamogga ,Smart City, MESCOM , Water Board
KEY WORDS | Smart City Managing Director, in Shivamogga ,Smart City, MESCOM , Water Board
