SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024
ಕಾಡಿನಲ್ಲಿದ್ದ ಕಾರೊಂದರಲ್ಲಿ ಬರೋಬ್ಬರಿ ಅರ್ಧ ಕ್ವಿಂಟಾಲ್ ಚಿನ್ನ ಹಾಗೂ ಬರೋಬ್ಬರಿ 11 ಕೋಟಿ ರೂಪಾಯಿ ಸಿಕ್ಕ ಘಟನೆಯೊಂದು ಇದೀಗ ಇಡೀ ದೇಶದ ಗಮನ ಸೆಳೆಯುತ್ತಿದೆ.
ಮಧ್ಯ ಪ್ರದೇಶದ ಮಂಡೋರಾ ಜಿಲ್ಲೆಯ ಮಿಂದೋರಿ ಕಾಡಿನ ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಇನ್ನೋವಾ ಕಾರಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಮೌಲ್ಯದ 52 ಕೇಜಿ ಚಿನ್ನ ಮತ್ತು 11 ಕೋಟಿ ರೂಪಾಯಿ ಪತ್ತೆಯಾಗಿದೆ.
An abandoned Innova car was found in the forests of Bhopal, containing 52 kg of gold and ₹10 crore in cash.
The car had “RTO” written on it and is registered under the name of someone called Chetan. pic.twitter.com/wbhEAck4k1
— Ranjeet kushwaha (@iranjeevdsBJP) December 21, 2024
ಸದ್ಯ ಇದನ್ನ ಆದಾಯತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಾರಸುದಾರರಿಲ್ಲದ ಕಾರಿನಲ್ಲಿ ಏಳೆಂಟು ಬ್ಯಾಗ್‌ಗಳಿದ್ದವು. ಅದರಲ್ಲಿ ಚಿನ್ನ ಹಾಗೂ ಹಣ ಸಿಕ್ಕಿದೆ. ಆದರೆ ಇದರ ವಾರಸ್ಸುದಾರರು ಯಾರು ಎಂಬುದು ಗೊತ್ತಾಗಿಲ್ಲ.
ಮೂಲಗಳ ಪ್ರಕಾರ ಇದು ರಿಯಲ್ ಎಸ್ಟೇಟ್ ಉದ್ಯಮಿ ಸೌರಭ್ ಶರ್ಮಾ ಎಂಬವರಿಗೆ ಸೇರಿದ್ದು, ಎನ್ನಲಾಗುತ್ತಿದೆಯಾದರೂ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಬಿಟ್ಟುಕೊಡುತ್ತಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇನ್ನೂ ಹಣ ಪತ್ತೆಯಾಗಿರುವ ಇನ್ನೋವಾ ಕಾರು ಚಂದನ್ ಸಿಂಗ್ ಎನ್ನುವ ಬಿಲ್ಡರ್ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಿಳಿದು ಬಂದಿದೆ. ಗುರುವಾರವಷ್ಟೇ ಸೌರಭ್ ಶರ್ಮಾ ಹಾಗೂ ಸಹಚರ ಚಂದನ್ ಸಿಂಗ್ ಗೌರ್ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡದಿತ್ತು.
Bhopal, MP: Former RTO constable Saurabh Sharma was found with 2 quintals of silver hidden beneath office tiles, worth over ₹2.59 crore. A 17-hour Lokayukta raid revealed property documents and 52 kg of gold, exposing his transition from constable to builder pic.twitter.com/FQoMOrjBHf
— IANS (@ians_india) December 21, 2024
ಈ ವೇಳೆ ಶರ್ಮಾ ಮನೆಯಲ್ಲಿ ಈ ವೇಳೆ 2.5 ಕೋಟಿ ರೂಪಾಯಿ ನಗದು, ಚಿನ್ನ, ಬೆಳ್ಳಿ ಆಭ ರಣಗಳು ಮತ್ತು ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೆ ಕಾರು ಸಿಕ್ಕಿದ್ದು, ಇಷ್ಟೊಂದು ಚಿನ್ನ ಎಲ್ಲಿಂದ ಬಂದವು ಎಂಬುದೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
SUMMARY | Gold worth Rs 40 crore and cash worth Rs 11 crore were found in a car in the forest. Incident in Bhopal, Madhya Pradesh
KEY WORDS | Gold worth Rs 40 crore 11 crore cash were found in a car ,forest, Incident , Bhopal, Madhya Pradesh
