SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024
ಚಿಕ್ಕಮಗಳೂರು ಜಿಲ್ಲೆಯಲ್ಲೊಂದು ದಾರುಣ ಘಟನೆ ಸಂಭವಿಸಿದ್ದು, ಘಟನೆ ಪೋಷಕ ವಲಯದಲ್ಲಿ ಆತಂಕ ಮೂಡಿಸುವಂತಿದೆ. ರಾಜ್ಯಮಟ್ಟದ ಸುದ್ದಿ ಮಾಧ್ಯಮವೊಂದರ ವರದಿಯ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ತಾಲ್ಲೂಕು ರಾವೂರು ಮೀನು ಕ್ಯಾಂಪ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.
ಕಳೆದ ಗುರುವಾರ ಘಟನೆ ನಡೆದಿದೆ ಎನ್ನಲಾಗಿದೆ. ಮಗುವಿನ ತಾಯಿ ಬಟ್ಟೆ ತೊಳೆಯುತ್ತಿದ್ದ ಸಂದರ್ಭ ಹತ್ತಿರ ಬಂದ ಮಗು ಅಲ್ಲಿಯೆ ಇದ್ದ ಬಕೆಟ್‌ನೊಳಗೆ ಬಿದ್ದಿದೆ. ಪರಿಣಾಮ ಅದರಲ್ಲಿದ್ದ ನೀರಲ್ಲಿ ಮುಳುಗಿದ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಈ ಸಂಬಂಧ ಮಗುವಿನ ತಾಯಿ ಪೊಲೀಸರಿಗೆ ಕಾರಣ ತಿಳಿಸಿ ದೂರು ನೀಡಿದ್ದಾರೆ.
SUMMARY | child died after falling into a bucket in Narasimharajapura taluk of Chikkamagaluru district.
KEY WORDS | child died after falling into a bucket , Narasimharajapura taluk ,Chikkamagaluru district