ಭದ್ರಾವತಿ ರೈಸ್‌ಮಿಲ್‌ನಲ್ಲಿ ಸ್ಫೋಟ | ರಘು ಮೃತದೇಹ ಪತ್ತೆ | ನಡೆದಿದ್ದೇನು? | SP ಹೇಳಿದ್ದೇನು?

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 20, 2024 ‌‌ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಚನ್ನಗಿರಿ ರಸ್ತೆ ಬಳಿ ಇದ್ದ ರೈಸ್‌ ಮಿಲ್‌ ವೊಂದರಲ್ಲಿ ನಿನ್ನೆ ದಿನ ರಾತ್ರಿ ಸ್ಫೋಟ ಸಂಭವಿಸಿದೆ. ಅಲ್ಲಿ ನಡೆದಿದ್ದು ಏನು ಎನ್ನುವುದನ್ನ ವಿವರವಾಗಿ ಗಮನಿಸುವುದಾದರೆ, ಭದ್ರಾವತಿಯ ಚನ್ನಗಿರಿ ರಸ್ತೆಯ ಗಣೇಶ್ ರೈಸ್ ಮಿಲ್‌ನಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿ 7 ಜನರು ಗಾಯಗೊಂಡಿದ್ದಾರೆ ಎಂಬುದು ಮಾಹಿತಿ.

Malenadu Today

ನಡೆದಿದ್ದೇನು?

ಸೀಗೆಬಾಗಿಯಲ್ಲಿರುವ ಗಣೇಶ್‌ ರೈಸ್‌ ಮಿಲ್‌ನಲ್ಲಿ ಸಂಜೆ 7 ಗಂಟೆ ಹೊತ್ತಿಗೆ ಸ್ಪೋಟ ಸಂಭವಿಸಿದೆ. ಬಾಯ್ಲರ್‌ ಸ್ಫೋಟಗೊಂಡು ಭಾರಿ ಶಬ್ದ ಕೇಳಿಸಿದ್ದು,  ರೈಸ್‌ ಮಿಲ್‌ ಕಟ್ಟಡದ ಬಹುತೇಕ ಭಾಗ ಜಖಂಗೊಂಡಿದೆ. ಅಲ್ಲದೆ ಸುತ್ತಮುತ್ತಲಿನ ಮನೆಗಳಿಗೆ ಬಾರೀ ಹಾನಿಯಾಗಿದೆ. ಇಲ್ಲಿನ ಇಂದಿರಾನಗರ , ಅನ್ವರಕಾಲೋನಿಯಲ್ಲಿ ಸ್ಫೋಟದಿಂದ ಹೊರಬಿದ್ದ ವಸ್ತುಗಳು ಮನೆ ಮೇಲೆ ಬಿದ್ದಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು ಅವರನ್ನು  ಶಿವಮೊಗ್ಗ ಹಾಗೂ  ಭದ್ರಾವತಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. 

Malenadu Today

ಇನ್ನೂ ಬಾಯ್ಲರ್‌ ಆಪರೇಟರ್‌ ರಘು ಎಂಬಾತ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿತ್ತು. ಇದೀಗ ಬಂದ ಮಾಹಿತಿ ಪ್ರಕಾರ, ಆತನ ಮೃತದೇಹ  ಬಾಯ್ಲರ್‌ ಸ್ಫೋಟಗೊಂಡ ಜಾಗದಲ್ಲಿ ಪತ್ತೆಯಾಗಿದೆ ಎಂದು ಎಸ್‌ಪಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ

Malenadu Today

Malenadu Today

Malenadu Today

 

SUMMARY |   An explosion occurred last night in a rice mill near Channagiri Road in Bhadravati Taluk, Shimoga District.

KEY WORDS | An explosion occurred last night in a rice mill near, Channagiri Road , Bhadravati Taluk, Shimoga District.

Share This Article