SHIVAMOGGA | MALENADUTODAY NEWS | ಮಲೆನಾಡು ಟುಡೆ Dec 20, 2024
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕಿನ ಮಡಬೂರು ಬಳಿ ಕಾಡಾನೆ ದಾಳಿಗೆ ಸಿಲುಕಿ 67 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕಳೆದು ಹೋಗಿದ್ದ ಎಮ್ಮೆ ಹುಡುಕಿಕೊಂಡು ಮಗನ ಜೊತೆ ಕಾಡಿಗೆ ಹೋದಾಗ ಈ ಘಟನೆ ಸಂಭವಿಸಿದೆ. ಮೃತರನ್ನ ಎಕ್ಕಡ ಬಯಲು ಗ್ರಾಮದ ಕೆ.ಕೆ. ಎಲಿಯಾಸ್(67) ಎಂದು ಗುರುತಿಸಲಾಗಿದೆ.
ಮನೆಯಿಂದ ಸ್ವಲ್ಪದೂರ ಎಮ್ಮೆಯನ್ನು ಹುಡುಕಿಕೊಂಡು ಹೋದ ತಂದೆ ಮಗನಿಗೆ ದಾರಿಯಲ್ಲಿ ಇದ್ದಕ್ಕಿದ್ದ ಹಾಗೇ ಕಾಡಾನೆ ಎದುರಾಗಿದೆ. ಈ ವೇಳೆ ಎಲಿಸಯಾಸ್‌ರ ಮಗ ವರ್ಗಿಸ್ ಅಲ್ಲಿಯೇ ಇದ್ದ ಬಂಡೆಯೊಂದನ್ನ ಹತ್ತಿ ನಿಂತಿದ್ದಾನೆ. ಆದರೆ ಎಲಿಯಾಸ್‌ಗೆ ಬಂಡೆ ಹತ್ತಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ಕಾಡಾನೆ ಅವರ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿದೆ. 20 ದಿನಗಳ ಅಂತರದಲ್ಲಿ ಈ ಭಾಗದಲ್ಲಿ ಕಾಡಾನೆಯಿಂದ ಸಂಭವಿಸುತ್ತಿರುವ ಎರಡನೇ ಸಾವಿದು
SUMMARY | A 67-year-old man died after being attacked by a wild elephant near Madabur in Narasimharajapura taluk of Chikkamagaluru district.
KEY WORDS | old man died after being attacked by a wild elephant , Madabur , Narasimharajapura taluk , Chikkamagaluru district.