SHIVAMOGGA | MALENADUTODAY NEWS | ಮಲೆನಾಡು ಟುಡೆ Dec 18, 2024
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದರೂ ಸಹ ಓರ್ವ ಆರೋಪಿ ಮಾತ್ರ ಇನ್ನೂ ಸಹ ಜೈಲಿನಲ್ಲಿಯೇ ಇದ್ದರು. ಇವತ್ತು ಅವರು ಸಹ ರಿಲೀಸ್ ಆಗಿದ್ದಾರೆ. ಆರೋಪಿ ಜಗದೀಶ್‌ಗೆ ಇವತ್ತು ಅಂತಿಮವಾಗಿ ಬಿಡುಗಡೆ ಭಾಗ್ಯ ಸಿಕ್ಕಿದೆ. ಅವರ ಕುಟುಂಬ ಅಗತ್ಯವಾದ ಬಾಂಡ್ ಒದಗಿಸಲಾಗದೆ ಇರುವುದು ಜಗದೀಶ್ ಬಿಡುಗಡೆ ತಡವಾಗಲು ಕಾರಣವಾಗಿತ್ತು. ಇವತ್ತು ಶಿವಮೊಗ್ಗ ಸೆಂಟ್ರಲ್ ಜೈಲ್‌ನಿಂದ ಜಗದೀಶ್‌ರವರನ್ನ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ರಿಲೀಸ್ ಮಾಡಲಾಗುತ್ತಿದೆ.
ಚಿತ್ರದುರ್ಗದ ಮಹಾವೀರ ನಗರ ನಿವಾಸಿ ಜಗದೀಶ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಪ್ರಕರಣದಲ್ಲಿ ಆರೋಪಿಯಾಗಿರುವ ಜಗದೀಶ್ ಅವರ ಮನೆಗೆ ಆಧಾರವಾಗಿದ್ದ. ಪ್ರಕರಣದಲ್ಲಿ ಆತನಿಗೂ ಬೇಲ್ ಮಂಜೂರು ಆಗಿದೆ. ಆದರೆ ಬೇಲ್ ಸಂಬಂಧಿಸಿದ ಬಾಂಡ್‌ಗೆ ಸಹಿ ಹಾಕಲು ಜಾಮೀನುದಾರರು ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ಕೋರ್ಟ್‌ನಲ್ಲಿ ಜಾಮೀನು ನೀಡುವ ವ್ಯಕ್ತಿಯ ಪಹಣಿಯನ್ನ ಹೊಂದಿರಬೇಕಾಗುತ್ತದೆ. ಆದರೆ ಜಗದೀಶ್ ಕುಟುಂಬ ಬಡ ಕುಟುಂಬವಾಗಿದ್ದರಿಂದ ಅವರ ಬಳಿ ಪಹಣಿ ಇರುವ ವ್ಯಕ್ತಿ ಸಿಕ್ಕಿರಲಿಲ್ಲ. ಇದೀಗ ಅವರಿಗೆ ಜಾಮೀನು ಸಿಕ್ಕಿ ರಿಲೀಸ್ ಆಗುತ್ತಿರುವುದು ಅವರ ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದೆ.
SUMMARY | Jagadish, another accused in Renukaswamy murder case, released from Shimoga Central Jail
KEY WORDS |Jagadish, another accused in Renukaswamy murder case, Shimoga Central Jail