SHIVAMOGGA | MALENADUTODAY NEWS | ಮಲೆನಾಡು ಟುಡೆ Dec 14, 2024
ಶಿವಮೊಗ್ಗ ಜಿಲ್ಲೆ ಭಧ್ರಾವತಿ ತಾಲ್ಲೂಕು ಕಾರೇಹಳ್ಳಿ ಗ್ರಾಮದ ಬಳಿಯ ಓರ್ವನನ್ನ ಕೊಲೆ ಮಾಡಿ ಖಾಲಿ ಏರಿಯಾದಲ್ಲಿ ಎಸೆದುಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ತಾಳಯೆಣ್ಣೆ ಪ್ಯಾಕ್ಟರಿ ಬಳಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬನನ್ನ ಕೊಲೆ ಮಾಡಿ ಇಲ್ಲಿ ಎಸೆಯಲಾಗಿದ್ದು, ಕೊಳೆತ ವಾಸನೆಯ ಜಾಡು ಹಿಡಿದ ರೈತರಿಗೆ ಮೃತದೇಹ ಕಾಣಿಸಿದೆ. ತಕ್ಷಣವೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ ಪೊಲೀಸರು , ದಿನ ಕಳೆಯವಷ್ಟರಲ್ಲಿ ಕೇಸ್ ಇತ್ಯರ್ಥ ಪಡಿಸಿದ್ದಾರೆ.
ನಿರ್ಜನ ಪ್ರದೇಶದಲ್ಲಿ ಸಿಕ್ಕ ಮೃತದೇಹವನ್ನು ಮೈದೊಳಲು ಮಲ್ಲಾಪುರದ ನಿವಾಸಿ ಪರುಶುರಾಮ್ ಎಂದು ಗುರುತಿಸಲಾಗಿದೆ. ಈತನ ತಂಗಿ ಗಂಡನೇ ಪ್ರಕರಣದ ಪ್ರಮುಖ ಆರೋಪಿ. ಪ್ರಕರಣದಲ್ಲಿ ತರೀಕೆರೆ ತಾಲೂಕಿನ ಓರ್ವ ಸೇರಿದಂತೆ ಮೂವರನ್ನ ಪ್ರಕರಣದಲ್ಲಿ ಬಂಧಿಸಲಾಗಿದೆ. ತಂಗಿ ಗಂಡ ನೀಡಿದ ಸುಪಾರಿ ಅನ್ವಯ ಆರೋಪಿಗಳು ಪರಶುರಾಮನ ಕುತ್ತಿಗೆ ಬಿಗಿದು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಶವ ಎಸೆದುಹೋಗಿದ್ದರು ಎನ್ನಲಾಗಿದೆ.


SUMMARY | Bhadravati murder case
KEY WORDS | Bhadravati murder case