SHIVAMOGGA | MALENADUTODAY NEWS | ಮಲೆನಾಡು ಟುಡೆ Dec 10, 2024
ಶಿವಮೊಗ್ಗದಲ್ಲಿ ರಾಜ್ಯದ ಪ್ರಥಮ ಆಯುರ್ವೇದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ನಿರ್ಧಾರದಿಂದ ರಾಜ್ಯಸರ್ಕಾರ ಸದ್ಯದ ಮಟ್ಟಿಗೆ ಹಿಂಜರಿದಿದೆ. ಈ ಸಂಬಂಧ ಪರಿಷತ್ ಸದಸ್ಯ ಡಿಎಸ್ ಅರುಣ್ ಕೇಳಿದ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿದ್ದು, ಆಯುರ್ವೇದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ನಿರ್ಧಾರವನ್ನು ಹಿಂದಿನ ಸರ್ಕಾರ ತೆಗೆದುಕೊಂಡಿತ್ತು. ಆದರೆ, ಸದ್ಯಕ್ಕೆ ವಿಶ್ವವಿದ್ಯಾಲಯ ಆರಂಭಿಸುವ ಯಾವುದೇ ತರಾತುರಿ ಇಲ್ಲ ಎಂದಿದ್ದಾರೆ.
ಹಿಂದಿನ ಸರ್ಕಾರ ಆಯುರ್ವೇದ ವಿಶ್ವವಿದ್ಯಾಲಯಕ್ಕೆ ₹20 ಕೋಟಿ ಅನುದಾನ ನೀಡಿತ್ತಷ್ಟೆ ಅಲ್ಲದೆ 8.10 ಎಕರೆ ಮೀಸಲಿಟ್ಟಿತ್ತು. ಆದರೆ ಒಂದು ವಿಶ್ವವಿದ್ಯಾಲಯ ಸ್ಥಾಪನೆಗೆ ಕನಿಷ್ಠ 100 ಎಕರೆ ಬೇಕಿದೆ. ಔಷಧೀಯ ಸಸ್ಯಗಳ ಉದ್ಯಾನಕ್ಕಾಗಿಯೇ 50 ಎಕರೆ ಅಗತ್ಯವಿದೆ. ಅಲ್ಲದೇ, ಈಗಿರುವ ವಿಶ್ವವಿದ್ಯಾಲಯಗಳೇ ಅವ್ಯವಸ್ಥೆಯ ತಾಣವಾಗಿವೆ. ಅದಕ್ಕೆ ಮತ್ತೊಂದು ವಿಶ್ವವಿದ್ಯಾಲಯ ಸೇರ್ಪಡೆಯಾಗುವುದು ಬೇಡ ಎಂಬ ದೃಷ್ಟಿಯಿಂದ ಈ ನಿಟ್ಟಿನಲ್ಲಿ ಇನ್ನಷ್ಟು ಯೋಚಿಸಲಾಗುತ್ತದೆ. ಹಾಗಾಗಿ ಸದ್ಯಕ್ಕೆ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆ ಇಲ್ಲ ಎಂದಿದ್ದಾರೆ.
SUMMARY | Health Minister Dinesh Gundu Rao said the state government has withdrawn from its decision to set up the state’s first Ayurveda University in Shivamogga.
KEY WORDS | Health Minister Dinesh Gundu Rao , state government , states first Ayurveda University in Shivamogga.