SHIVAMOGGA | MALENADUTODAY NEWS | ಮಲೆನಾಡು ಟುಡೆ Dec 9, 2024
30 ಸಾವಿರ ಮೌಲ್ಯ ಟ್ಯಾಬ್ ಸಿಕ್ತು
ಶಿವಮೊಗ್ಗ ರೈಲ್ವೆ ಪೊಲೀಸರು ಪ್ರಯಾಣಿಕರೊಬ್ಬರು ಟ್ರೈನ್‌ನಲ್ಲಿ ಬಿಟ್ಟು ಹೋಗಿದ್ದ 30 ಸಾವಿರ ರೂಪಾಯಿ ಮೌಲ್ಯ ಆಪಲ್ ಟ್ಯಾಬ್‌ವೊಂದನ್ನ ಪ್ರಯಾಣಿಕರಿಗೆ ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ. Tr. No. 16579 Exp at Shivamogga ನಲ್ಲಿ ಪ್ರಯಾಣಿಕರು ಆಪಲ್ ಟ್ಯಾಬ್ ಮರೆತಿದ್ದರು. ಬಳಿಕ ಅವರಿಗೆ ಅದನ್ನ ಸುರಕ್ಷಿತವಾಗಿ ಒದಗಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಮೇಲೆ ಕಲ್ಲೂ ತೂರಾಟ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಿಡಿಗೇಡಿಯೊಬ್ಬ KSRTC ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಕಳೆದ ಏಳನೇ ತಾರೀಖು ಈ ಘಟನೆ ನಡೆದಿದೆ. ಘಟನೆ ಬೆನ್ನಲ್ಲೆ ಬಸ್ ನಿಲ್ಲಿಸಿ ಕಲ್ಲು ತೂರಿದ ವ್ಯಕ್ತಿಯನ್ನ ವಿಚಾರಿಸಲಾಗಿದೆ. ಅಲ್ಲದೆ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನ ಠಾಣೇಗೆ ಹಾಜರುಪಡಿಸಿ, ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.
ಕಾರು ಹಾಗೂ ಬೈಕ್ ಡಿಕ್ಕಿ
ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾದ ಬಗ್ಗೆ ತಡವಾಗಿ ವರದಿಯಾಗಿದೆ. ಘಟನೆಯಲ್ಲಿ ಎರಡು ವಾಹನದಲ್ಲಿದ್ದವರಿಗೂ ಗಾಯಗಳಾಗಿದ್ದು, ಅವರನ್ನ ಸ್ಥಳೀಯರು ಹಾಗೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ. ಅಲ್ಲದೆ ವಾಹನಗಳನ್ನ ಕ್ಲೀಯರ್ ಮಾಡಿಸಿದ್ದಾರೆ. ಬಳಿಕ ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
SUMMARY | shivamogga short news
KEY WORDS | shivamogga short news