ಇನ್‌ಸ್ಟಾಗ್ರಾಮ್‌ನಲ್ಲಿ ಸದ್ದು ಮಾಡುತ್ತಿದೆ ಪುನೀತ್‌ ರಾಜಕುಮಾರ್‌ & ಸಾಧುಕೋಕಿಲ ಹಾಡುವ ವಿಡಿಯೋ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಗಲಿದರೂ ಅವರ ನೆನಪುಗಳು ಪ್ರತಿದಿನ ನಿತ್ಯ ನೂತನ ಎಂಬಂತಿದೆ. ಇದಕ್ಕೆ ಪೂರಕವಾಗಿ ಅಭಿಮಾನಿಗಳು ಅಪ್ಪುರವರ ಅಪರೂಪದ ಫೋಟೋ, ವಿಡಿಯೋಗಳನ್ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಲೇ ಇದ್ದಾರೆ. ಇದೀಗ ಅದೇ ರೀತಿಯ ವಿಡಿಯೊವೊಂದು ವೈರಲ್‌ ಆಗಿದೆ. 

ಕಳೆದ ನಾಲ್ಕು ದಿನಗಳ ಹಿಂದೆ INSTAGRAM ನಲ್ಲಿ ವಿಡಿಯೋವೊಂದು ಅಪ್‌ಲೋಡ್‌ ಆಗಿದ್ದು ಇದೀಗ ಸಖತ್‌ ಸೌಂಡ್‌ ಮಾಡುತ್ತಿದೆ. ಈ ವೀಡಿಯೋದಲ್ಲಿ ಅಪ್ಪುರವರು ಎಂತಾ ಸೌಂದರ್ಯ ಕಂಡೆ ಅಂತಾ ಕಾರ್‌ ಡ್ರೈವ್‌ ಮಾಡುತ್ತಿದ್ದಾರೆ. ಅವರ ಜೊತೆ ಕೊರೊಕೆ ಮ್ಯೂಸಿಕ್‌ ನ ಲಿರಿಕ್ಸ್‌ ತೋರಿಸುತ್ತಾ ಸಾಧು ಕೊಕಿಲಾರವರು ಸಹ ಹಾಡುತ್ತಿದ್ದಾರೆ. ಅಪರೂಪದ ವಿಡಿಯೋ ಅಭಿಮಾನಿಗಳನ್ನ ಮತ್ತೆ ಅಪ್ಪುರವರನ್ನ ನೆನಪು ಮಾಡಿಕೊಳ್ಳುವಂತೆ ಮಾಡುತ್ತಿದೆ. ಅಂದಹಾಗೆ ಈ ವಿಡಿಯೋವನ್ನ sagar_manasu ಎಂಬವರ ಇನ್‌ಸ್ಟಾ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. 

SUMMARY |  video of Power Star Puneeth Rajkumar singing is going viral on Instagram. 

KEY WORDS  | video of Power Star Puneeth Rajkumar singing  , viral on Instagram. 

Share This Article