ಬಚ್ಚಲು ಮನೆಯಲ್ಲಿದ್ದ ಸಿಲಿಂಡರ್‌ ಸ್ಫೋಟ | ತೀವ್ರವಾಗಿ ಗಾಯಗೊಂಡಿದ್ದ ಕೇಶವಮೂರ್ತಿ ಸಾವು

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂ ಓಲ್ಡ್‌ ಟೌನ್‌  ನಲ್ಲಿ ಸಂಭವಿಸಿದ್ದ ಅಗ್ನಿಆಕಸ್ಮಿಕದಲ್ಲಿ ಗಾಯಗೊಂಡಿದ್ದ ಓರ್ವರು ಸಾವನ್ನಪ್ಪಿದ್ದಾರೆ.  ಹಳೇನಗರದ ಕಾಳಿಕಾಂಬ ದೇವಿ ದೇವಸ್ಥಾನ ರಸ್ತೆಯಲ್ಲಿ ಕಳೆದ ಶುಕ್ರವಾರ ಸಂಜೆ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಅನಾಹುತ ಸಂಭವಿಸಿತ್ತು. ಈ ಘಟನೆಯಲ್ಲಿ ಕೇಶವಮೂರ್ತಿ (60) ಎಂಬವರು ತೀವ್ರವಾಗಿ ಗಾಯಗೊಂಡಿದ್ದರು. 

 

ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ವಿಕ್ಟೋರಿಯಾ ಆಸತ್ರೆಯಲ್ಲಿ ನಿನ್ನೆದಿನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಇವರ ಪತ್ನಿ ಚೇತರಿಸಿಕೊಂಡಿದ್ದಾರೆ. ಹೊಸಮನೆಯಲ್ಲಿ ಗೋಬಿ ಮಂಚೂರಿ ಅಂಗಡಿ ನಡೆಸ್ತಿದ್ದ ಕೇಶವಮೂರ್ತಿ ನಗರದ ಗಾಯತ್ರಿ ಕೋ ಆಪರೇಟೀವ್ ಸೊಸೈಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.  

 

SUMMARY |Shivamogga One person, who was injured in a fire  succumbed. Old Town in Bhadravathi taluk of Shivamogga district

 

KEY WORDS  | Shivamogga, Old Town in Bhadravathi talukShivamogga district,

Share This Article